25.1 C
Bangalore
Friday, December 6, 2019

ಎಲ್ಲೆಲ್ಲೂ ದೇವರ ನೆನಪಿನ ಮೆರವಣಿಗೆ

Latest News

ಮಲಗಿದ ಮೇಲೆ ಸಂಪೂರ್ಣ ಸುಖ ನಿದ್ದೆಗೆ ಇಲ್ಲಿವೆ ಕೆಲ ಟಿಪ್ಸ್​ಗಳು

ಸಂಪುರ್ಣ ಎಂಟು ತಾಸು ನಿದ್ದೆ..! - ನಿದ್ದೆ ಮಾಡಿದ ಮೇಲೆ ಮಧ್ಯೆ ಯಾವುದಕ್ಕೂ ಅಂದರೆ ಬಾತ್​ರೂಂಗೆ ಹೋಗಲು, ನೀರು ಕುಡಿಯಲು, ನಿಮ್ಮ ಮೊಬೈಲ್​ ಚೆಕ್​ ಮಾಡಲು...

ಗೊರಗುದ್ದಿ ಶಾಲೆ ಗೋಳು ಕೇಳೋರಿಲ್ಲ

|ಬೆಳ್ಳೆಪ್ಪ ಮ.ದಳವಾಯಿ ಕಡಬಿ ಸರ್ಕಾರ ಸರ್ವಶಿಕ್ಷಣ ಅಭಿಯಾನದ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಆ ಯೋಜನೆಗಳಿಗೆ ಸರ್ಕಾರ ಕೋಟ್ಯಂತರ ರೂ.ಹಣ ಖರ್ಚು...

ಅತ್ಯಾಚಾರ ಆರೋಪಿಗಳ ಎನ್​ಕೌಂಟರ್​ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಪೊಲೀಸ್​ ಆಯುಕ್ತ ವಿಶ್ವನಾಥ್​ ಸಜ್ಜನರ್​

ಹೈದರಾಬಾದ್​: ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು ಮೃತದೇಹಕ್ಕೆ ಬೆಂಕಿಯಿಟ್ಟು ಕ್ರೂರತ್ವ ಮೆರೆದಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದ್​ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ಎನ್​ಕೌಂಟರ್​ ಮೂಲಕ...

ಯಾಂತ್ರಿಕ ಜೀವನಕ್ಕೆ ಮಾರುಹೋಗಿದ್ದಾರೆ ಜನ

ಕನಕಪುರ: ಯಾಂತ್ರಿಕ ಜೀವನಕ್ಕೆ ಮಾರುಹೋಗಿರುವ ಇಂದಿನ ಜನತೆ ಗ್ರಾಮೀಣ ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ ಎಂದು ದೇಗುಲಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ತಿಳಿಸಿದರು. ಕೋಡಿಹಳ್ಳಿ ರಂಗಮಂದಿರದಲ್ಲಿ ಕನ್ನಡ...

ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್​ಕೌಂಟರ್​​ ಅನ್ನು ಸ್ವಾಗತಿಸಿದ ಗೋವಾ ಕಾಂಗ್ರೆಸ್​​

ಪಣಜಿ: ಹೈದರಾಬಾದ್​ನಲ್ಲಿ ಶುಕ್ರವಾರ ಮುಂಜಾನೆ ದಿಶಾ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್​​ನಲ್ಲಿ ಕೊಲೆ ಮಾಡಿದ್ದನ್ನು ಗೋವಾ ಕಾಂಗ್ರೆಸ್​ ಮಹಿಳಾ...

| ಶಿವಾನಂದ ತಗಡೂರು

ತುಮಕೂರು: ನಡೆದಾಡುವ ದೇವರ ನೆನಪುಗಳ ರಾಶಿಯೇ ಅಲ್ಲಿ ಇನ್ನೂ ಹೆಜ್ಜೆಹೆಜ್ಜೆಗೂ ತುಂಬಿಕೊಂಡಿದೆ. ಸಿದ್ಧಗಂಗೆಯಲ್ಲಿ ನಡೆದಾಡುವ ದೇವರಿಲ್ಲ ಎನ್ನುವ ಕೊರಗು ಭಕ್ತ ಸಮೂಹದಲ್ಲಿ ಕಾಣುತ್ತಿಲ್ಲ. ದೇವರಿದ್ದಾರೆ ಎನ್ನುವ ಭಾವದಿಂದಲೇ ಜನರು ಮಠಕ್ಕೆ ಎಡತಾಕುತ್ತಿದ್ದಾರೆ.

ಹಳೇ ಮಠದ ಪಕ್ಕದಲ್ಲಿಯೇ ಇರುವ ಉದ್ಧಾನ ಸ್ವಾಮೀಜಿಗಳ ಗದ್ದುಗೆಗೆ ಸೀಮಿತವಾಗಿದ್ದ ಭಕ್ತರ ಭೇಟಿ ಈಗ ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆ ಕಡೆಗೆ ಬದಲಾಗಿದೆ. ನಾಡಿನ ಮೂಲೆ ಮೂಲೆಗಳಿಂದ ಬರುತ್ತಿರುವ ಭಕ್ತರು ಭಕ್ತಿ ಭಾವದಿಂದ ಗದ್ದುಗೆಗೆ ನಮಿಸಿ, ಮತ್ತೆ ಅವತರಿಸು ದೇವ ಎಂದು ಬೇಡುತ್ತಿದ್ದಾರೆ. ಮತ್ತೊಂದೆಡೆ ಕಾಯಕ ಯೋಗಿ ಶಿವಕುಮಾರ ಸ್ವಾಮೀಜಿ ಅವ ರನ್ನು ಸ್ಮರಿಸುವ ಭಜನೆ- ಪ್ರಾರ್ಥನೆ ಮಠದ ಆವರಣದಲ್ಲಿ ನಿರಂತರವಾಗಿ ನಡೆ ಯುತ್ತಲೇ ಇದೆ.

ಮಕ್ಕಳಲ್ಲಿ ಅನಾಥ ಭಾವ: ಶೋಕಸಾಗರದಲ್ಲಿ ಮುಳುಗಿದ ಜನಸಾಗರದ ನಡುವೆಯೂ ಮಠದ ಮಕ್ಕಳು ಎರಡೂ ದಿನ ಕರ್ತವ್ಯಪ್ರಜ್ಞೆ ಮರೆಯಲಿಲ್ಲ. ದಾಸೋಹದಿಂದ ಹಿಡಿದು, ಗದ್ದುಗೆಯ ತನಕವೂ ಅತ್ಯಂತ ಶ್ರದ್ದಾಪೂರ್ವಕವಾಗಿ ಮಕ್ಕಳು ಸಲ್ಲಿಸಿದ ಸೇವೆ ಅನನ್ಯ. ಸಿದ್ಧಗಂಗೆಯಲ್ಲಿ ಕಾಯಕ ಸೇವೆಯ ಮಹತ್ವ ಮೆರೆದ ಮಕ್ಕಳಲ್ಲಿ ಈಗ ಆ ದೇವರಿಲ್ಲ ಎನ್ನುವ ಅನಾಥ ಭಾವ ಕಾಡುತ್ತಿದೆ.

ಸಿದ್ದಲಿಂಗ ಸ್ವಾಮೀಜಿ ಭೇಟಿ: ಮನೆಯ ಯಜಮಾನನಿಲ್ಲದ ಹೊತ್ತಿನಲ್ಲಿ ಎಲ್ಲವನ್ನೂ ನಿಭಾಯಿಸಬೇಕು ಎನ್ನುವ ಸವಾಲು, ಹೊಸ ಜವಾಬ್ದಾರಿ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರ ಮೇಲಿದೆ. ಕ್ರಿಯಾ ಸಮಾಧಿ ಕಾರ್ಯಕ್ಕೆ ಬರಲು ಸಾಧ್ಯವಾಗದ ಗಣ್ಯರು, ಸ್ವಾಮೀಜಿ ಭೇಟಿ ಮಾಡಿ ಗದ್ದುಗೆಗೆ ನಮಿಸಿ ಹೋಗುತ್ತಿದ್ದಾರೆ. ಬಂದೋಬಸ್ತ್ ಜವಾಬ್ದಾರಿ ಮುಗಿಸಿದ ಪೊಲೀಸ್ ಪಡೆಯಿಂದ ಹಿಡಿದು ಜಿಲ್ಲಾಡಳಿತದ ಅಧಿಕಾರಿಗಳು ಸ್ವಾಮೀಜಿಗೆ ನಮಿಸಿ ಹಿಂತಿರುಗುತ್ತಿದ್ದಾರೆ. ಮಠದ ಕಚೇರಿಯಲ್ಲಿ ವಿದಾಯ ಭಾವವೂ ಆವರಿಸಿದೆ.

ಹಳೇ ಮಠದತ್ತಲೇ ಚಿತ್ತ: ಸಿದ್ಧಗಂಗಾ ಮಠ ಎತ್ತರೆತ್ತರಕ್ಕೆ ಬೆಳೆದರೂ ಸ್ವಾಮೀಜಿಗೆ ಮಾತ್ರ ಹಳೇ ಮಠವೇ ಪ್ರೀತಿಯಾಗಿತ್ತು. ಕಲ್ಲಿನ ಕಂಬಗಳಿರುವ ಹಳೇ ಮಠಕ್ಕೆ ಬಂದರೆ ಅವರಿಗೆ ಸಮಾಧಾನ. ಆಸ್ಪತ್ರೆಯಲ್ಲಿದ್ದಾಗಲೂ ಹಳೇ ಮಠಕ್ಕೆ ಹೋಗಬೇಕೆಂಬುದೇ ಅವರ ಹಠವಾಗಿತ್ತು, ಅಲ್ಲಿ ಸರ್ವಸ್ವವನ್ನೂ ಮುಡಿಪಾಗಿಟ್ಟಿದ್ದರು. ಅಲ್ಲಿಯೇ ಕಣ್ಮುಚ್ಚಿಕೊಳ್ಳಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು. ದೇವರ ಇಷ್ಟಕ್ಕೆ ಯಾವ ದೇವರೂ ಅಡ್ಡ ಬರಲಿಲ್ಲ. ಅಲ್ಲಿ ಎಲ್ಲವೂ ಆ ದೈವಸ್ವರೂಪಿ ಅಂದುಕೊಂಡಂತೆಯೇ ಆಯಿತು. ಅದಕ್ಕಾಗಿಯೇ ಎಲ್ಲರ ಚಿತ್ತ ಹಳೇ ಕಲ್ಲಿನ ಮಠದತ್ತಲೇ ಹರಿದಿದೆ.

ಸಹಜ ಸ್ಥಿತಿಗೆ ಸಿದ್ಧಗಂಗೆ

ಜನಪ್ರವಾಹದಲ್ಲಿ ಮಿಂದೆದ್ದ ಸಿದ್ಧಗಂಗೆ ನಿದಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಜನ ಪ್ರವಾಹ ತಡೆಗಟ್ಟಲು ಕದಂಬ ಬಾಹುವಿನಂತೆ ಮಠದ ಸುತ್ತಲೂ ಮಾಡಲಾಗಿದ್ದ ಬಂದೋಬಸ್ತ್ ಮುಕ್ತಗೊಳಿಸಲಾಗಿದೆ. ಅಲ್ಲಿಯೇ ಬೀಡು ಬಿಟ್ಟಿದ್ದ ಖಾಕಿ ಪಡೆಯೂ ತನ್ನ ಠಿಕಾಣಿ ಬದಲಿಸಿದೆ.

ಕ್ರಿಯಾಸಮಾಧಿ ಗದ್ದುಗೆಗೆ ಪೂಜೆ

ನಡೆದಾಡುವ ದೇವರ ಕ್ರಿಯಾ ಸಮಾಧಿ ಗದ್ದುಗೆಯಲ್ಲಿ ಬುಧವಾರ ಬೆಳಗಿನ ಜಾವ ವಿಶೇಷ ಪೂಜೆಗಳು ನೆರವೇರಿದವು. ಮಂಗಳವಾರ ಮಧ್ಯರಾತ್ರಿ ಅಂತಿಮ ವಿಧಿ-ವಿಧಾನ ನೆರವೇರಿಸಿ ಗದ್ದುಗೆಗೆ ಬೀಗ ಹಾಕಲಾಗಿತ್ತು. ಬುಧವಾರ ಬೆಳಗ್ಗೆ 5.30ಕ್ಕೆ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹಳೆಯಮಠದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ ನಂತರ ಎಂದಿನಂತೆ ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ 7.30ರ ಸುಮಾರಿಗೆ ನಾಡಿನ ವಿವಿಧ ಮಠಾಧೀಶರುಗಳ ಜತೆ ಶ್ರೀಗಳ ಗದ್ದುಗೆಗೆ ಆಗಮಿಸಿದರು. ಮಂತ್ರ, ಶ್ಲೋಕ ಪಠಣದೊಂದಿಗೆ ವಿಶೇಷ ಪೂಜೆ ನೆರವೇರಿಸಿದರು.

ಧ್ಯಾನಮಂದಿರ ನಿರ್ಮಾಣ

ಶ್ರೀಗಳು ಧಾರ್ವಿುಕ ಕ್ಷೇತ್ರದ ಶಿಖರ ಇದ್ದಂತೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಐಕ್ಯತಾ ಪ್ರತಿಮೆಯಂತೆ ಶಿವಕುಮಾರ ಶ್ರೀಗಳ ಪುತ್ಥಳಿ ಸ್ಥಾಪಿಸುವಂತೆ ವಿಜಯಪುರದ ಜ್ಞಾನ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು. ಅದಕ್ಕೆ ಸಿದ್ದಲಿಂಗ ಶ್ರೀಗಳು ಅದು ಕಷ್ಟಸಾಧ್ಯ. ಧ್ಯಾನಮಂದಿರ ನಿರ್ವಿುಸಬೇಕೆಂಬುದು ಶ್ರೀಗಳ ಅಪೇಕ್ಷೆಯಾಗಿತ್ತು. ಅವರ ಗದ್ದುಗೆ ಕೆಳಭಾಗದಲ್ಲೇ ಧ್ಯಾನಮಂದಿರ ನಿರ್ವಿುಸಲಾಗುವುದು. ಅಲ್ಲದೆ ಶ್ರೀಗಳು ಬಳಸುತ್ತಿದ್ದ ಎಲ್ಲ ವಸ್ತುಗಳ ಮ್ಯೂಸಿಯಂ ಮಾಡುವ ಉದ್ದೇಶವಿದೆ ಎಂದರು. ಸಿದ್ದೇಶ್ವರ ಸ್ವಾಮೀಜಿ ಇದಕ್ಕೆ ಸಹಮತ ವ್ಯಕ್ತಪಡಿಸಿ ಒಳ್ಳೆಯ ಕಾರ್ಯಕ್ಕೆ ನಮ್ಮ ಬೆಂಬಲ ಇರಲಿದೆ ಎಂದರು.

ಸಮಾಧಿಗೆ ಬಾಗಲಕೋಟೆ ವಿಭೂತಿ

ಬಾಗಲಕೋಟೆ: ಡಾ. ಶಿವಕುಮಾರ ಸ್ವಾಮೀಜಿ ಕ್ರಿಯಾಸಮಾಧಿಗೆ ಬಾಗಲಕೋಟೆಯ ವಿಭೂತಿ ಬಳಸಲಾಗಿದೆ. ನೂರು ವರ್ಷಗಳಿಂದ ವಿಭೂತಿ ತಯಾರಿಯಲ್ಲಿ ತೊಡಗಿಸಿಕೊಂಡಿರುವ ಬಾಗಲಕೋಟೆ ತಾಲೂಕು ಮುಚಖಂಡಿ ಗ್ರಾಮದ ವೀರಯ್ಯ ಹಿರೇಮಠ ಕುಟುಂಬ ನಡೆದಾಡುವ ದೇವರ ಕ್ರಿಯಾಸಮಾಧಿಗೆ ವಿಭೂತಿ ನೀಡಿದೆ. ಈ ಕುಟುಂಬ 45 ವರ್ಷಗಳಿಂದ ಸಿದ್ಧಗಂಗಾ ಮಠಕ್ಕೆ ಶುದ್ಧ ಕ್ರಿಯಾಭಸ್ಮದ ವಿಭೂತಿ ನೀಡುತ್ತ ಬಂದಿದೆ. ಆರು ತಿಂಗಳ ಹಿಂದೆ ಶ್ರೀಗಳ ದರ್ಶನಕ್ಕಾಗಿ ವೀರಯ್ಯ ತೆರಳಿದ್ದಾಗ ಶುದ್ಧ ಭಸ್ಮದಿಂದ ಮಾಡಿದ 10 ಸಾವಿರ ವಿಭೂತಿ ಗಟ್ಟಿಗಳು ಬೇಕು ಎಂದು ಶ್ರೀಗಳು ಆಜ್ಞೆ ನೀಡಿದ್ದರಂತೆ. ಅದರಂತೆ 10 ಸಾವಿರ ವಿಭೂತಿ ಗಟ್ಟಿಗಳನ್ನು ತಯಾರಿಸಲಾಗಿತ್ತು, ಅದನ್ನೇ ಕ್ರಿಯಾಸಮಾಧಿಗೆ ಬಳಸಲಾಗಿದೆ. ಈ ವಿಭೂತಿಗೆ ಹಣ ಪಡೆಯದಿರಲು ಹಿರೇಮಠ ಕುಟುಂಬ ನಿರ್ಧರಿಸಿದೆ.

ಹನ್ನೊಂದು ದಿನಕ್ಕೆ ಶ್ರೀಗಳ ಕಾರ್ಯ

ಸ್ವಾಮೀಜಿ ಅವರ ಪುಣ್ಯಾರಾಧನೆ 11 ದಿನಕ್ಕೆ ನೆರವೇರಿಸಲಾಗುತ್ತದೆ. ಬುಧವಾರದಿಂದ ನಿತ್ಯ ಬೆಳಗ್ಗೆ ಗದ್ದುಗೆ ಪೂಜೆ ನೆರವೇರಿಸಿ 11ನೇ ದಿನಕ್ಕೆ ವಿಶೇಷ ಪೂಜೆ, ಧಾರ್ವಿುಕ ವಿಧಿ-ವಿಧಾನ ನಡೆಸಲಾಗುತ್ತದೆ. ಮಠದ ಪರಂಪರೆಯಿಂದ ನಡೆದುಕೊಂಡು ಬಂದ ಎಲ್ಲ ಕಾರ್ಯಗಳು ಎಂದಿನಂತೆ ನಡೆಯುತ್ತವೆ ಎಂದು ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ವಿಜಯವಾಣಿಗೆ ತಿಳಿಸಿದರು.

ಅನ್ನದ ಮಹತ್ವ ಸಾರಿದ ಸಿದ್ಧಗಂಗೆಯ ಬಾಲಕ

ಗುರು ಕಲಿಸಿದ್ದು ಸಿದ್ಧಗಂಗಾ ಮಠದಲ್ಲಿ ಅಕ್ಷರಶಃ ಆಚರಣೆಗೆ ಬಂದಿತ್ತು. ಒಂದು ತುತ್ತಿನ ಹಿಂದೆ ಸಾವಿರಾರು ಜನರ ಶ್ರಮವಿದೆ ಎಂಬ ಶಿವಕುಮಾರ ಸ್ವಾಮೀಜಿಗಳ ಮಾತು ಆ ಬಾಲಕನೊಳಗೆ ಆಳವಾಗಿ ಅಚ್ಚೊತ್ತಿತ್ತು. ಮಂಗಳವಾರ ಶ್ರೀಗಳ ಕ್ರಿಯಾ ಸಮಾಧಿ ವೇಳೆ ಲಿಂಗ ಶರೀರ ದರ್ಶನಕ್ಕೆ ಬಂದಿದ್ದ ಲಕ್ಷಾಂತರ ಭಕ್ತರಿಗೆ ಬೃಹತ್ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಆಗ ಹಲವು ಭಕ್ತರು ಊಟ ಮಾಡಿ ತಟ್ಟೆಯಲ್ಲೇ ಅನ್ನ ಬಿಡುತ್ತಿದ್ದುದನ್ನು ಗಮನಿಸಿದ ಶ್ರೀಮಠದ 8ನೇ ತರಗತಿ ವಿದ್ಯಾರ್ಥಿ ಶಿವು ಅನ್ನದ ಮಹತ್ವ ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಸಂಜೆಯಿಂದಲೇ ವೈರಲ್ ಆಗಿ ಸಾರ್ವಜನಿಕ ರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಶಿವು ಮಂಗಳವಾರ ದಾಸೋಹ ಕೊಪ್ಪಲಿನ ಬಳಿ ನೀರು ಕೊಡುವುದು, ತಟ್ಟೆ ಒಂದು ಕಡೆ ಹಾಕಿಸುವ ಕೆಲಸ ಮಾಡುತ್ತಿದ್ದ. ಒಬ್ಬರು ಆಹಾರ ಉಳಿದಿದ್ದ ತಟ್ಟೆ ಎಸೆದಿದ್ದನ್ನು ಗಮನಿಸಿದ ಆತ ಕೂಡಲೇ ಅದನ್ನು ಎತ್ತಿಕೊಂಡು ಪ್ರಸಾದ ಎಸೆಯಬೇಡಿ, ತಿನ್ನಿ ಎಂದು ಒತ್ತಾಯಿಸುತ್ತಾನೆ. ಆಗ ‘ತಿಂದು ಅರಗಿಸಿಕೊಳ್ಳುವ ಶಕ್ತಿ ಇಲ್ಲ’ ಎಂಬ ಭಕ್ತರ ಮಾತಿಗೆ, ‘ತಿಂದ್ರೆ ತಾನೇ ಶಕ್ತಿ ಬರೋದು’ ಎಂದು ಹೇಳಿದ್ದಾನೆ. ಈ ವಿಡಿಯೋ ವೈರಲ್ ಆದ ಬಳಿಕ ಮಠದಲ್ಲಿ ಶಿವು ಕಾರ್ಯದ ಬಗ್ಗೆ ಬುಧವಾರ ಪ್ರಶಂಸೆಯ ಸುರಿಮಳೆ ಆಗಿದೆ. ಮೂಲತಃ ಚಾಮರಾಜನಗರ ಜಿಲ್ಲೆ ಕರಿನಕಟ್ಟೆ ಗ್ರಾಮದ ಶಿವುಗೆ ತಂದೆ ಇಲ್ಲ, ತಾಯಿ ಇದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿ ಅಂತಿಮ ಯಾತ್ರೆಯಲ್ಲಿ ಪ್ರಧಾನಿ ಭಾಗವಹಿಸಬೇಕಿತ್ತು. ಕಾರ್ಯಬಾಹುಳ್ಯದಿಂದ ಬರಲು ಸಾಧ್ಯವಾಗಿರಲಿಕ್ಕಿಲ್ಲ. ಕೇಂದ್ರ ಸರ್ಕಾರ ಸ್ವಾಮೀಜಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ಪ್ರಕಟಿಸಬೇಕು.

| ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ

Stay connected

278,739FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...