ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆವಿಜಯವಾಣಿ ಸುದ್ದಿಜಾಲ ನಂಜನಗೂಡು
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭೂ ಮಾಪಕರು ಕಪ್ಪುಪಟ್ಟಿ ಧರಿಸಿ ಸೋಮವಾರ ಮೌನ ಪ್ರತಿಭಟನೆ ನಡೆಸಿದರು.
ಮಿನಿವಿಧಾನ ಸೌಧದಲ್ಲಿರುವ ಭೂದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಕಪ್ಪುಪಟ್ಟಿ ಪ್ರದರ್ಶಿಸಿ ಎಂದಿನಂತೆ ಕರ್ತವ್ಯದಲ್ಲಿ ನಿರತರಾದರು.
ರಾಜ್ಯ ಭೂಮಾಪನ, ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದಿಂದ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸೆ.4ರಂದು ಕರೆ ನೀಡಿರುವ ಬೆಂಗಳೂರು ಚಲೋ ಹೋರಾಟವನ್ನು ಬೆಂಬಲಿಸಿ 12 ದಿನಗಳವರೆಗೆ ಕಪ್ಪುಪಟ್ಟಿ ಧರಿಸಿಯೇ ಕಾರ್ಯನಿರ್ವಹಿಸುವುದಾಗಿ ಭೂಮಾಪಕರು ತಿಳಿಸಿದರು.
ಭೂಮಾಪಕರು ಮಾಸಿಕ 30 ಕಡತಗಳ ವಿಲೇವಾರಿ ನಿಗದಿ ಮಾಡಿರುವುದು ಸೇರಿದಂತೆ ನೌಕರರು ಎದುರಿಸುತ್ತಿರುವ ಸವಾಲು, ಸಂಕಷ್ಟಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಬೇಡಿಕೆಗಳನ್ನು ಈಡೇರಿಸುವಂತೆ ಇದೇ ವೇಳೆ ಒತ್ತಾಯಿಸಿದರು.

Leave a Reply

Your email address will not be published. Required fields are marked *