ವಕ್ಫ್ ಬೋರ್ಡ್ ಹೆಸರಿನಲ್ಲಿ ಲ್ಯಾಂಡ್ ಜಿಹಾದ್

blank

ಕೊಪ್ಪ: ದೇಶದಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಲ್ಯಾಂಡ್ ಜಿಹಾದ್‌ಆರಂಭಗೊಂಡಿದ್ದು, ಈ ಜಿಹಾದಿ ಚಟುವಟಿಕೆಗಳಿಗೆ ಕಾಂಗ್ರೆಸ್ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಇದನ್ನು ವಿರೋಧಿಸಿ 4 ರಂದು ಕೊಪ್ಪ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು,ದಲಿತರು, ಕಾರ್ಮಿಕರು, ಮಠಗಳ ಭೂಮಿಯನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಕಬಳಿಸಲು ಮುಂದಾಗಿದ್ದಾರೆ. ಪರಂಪರಗಾತವಾಗಿ ಅನುಭವದಲ್ಲಿರುವ ಜಮೀನುಗಳನ್ನು ಕಸಿದುಕೊಳ್ಳಲು ದೇಶಕ್ಕೆ ವಲಸೆ ಬಂದವರು ಯತ್ನಿಸುತ್ತಿದ್ದಾರೆ ಇದು ಅಪಾಯದ ಸಂಕೇತ ಎಂದರು.
ವಕ್ಫ್ ತನ್ನದು ಎಂದು ಹೇಳುತ್ತೀರುವ ಭೂಮಿಗೆ ರೈತರು, ದಲಿತರು, ಮಠಗಳು ತಮ್ಮದು ಎಂಬುದಕ್ಕೆ ದಾಖಲೆ ನೀಡಬೇಕಿದೆ. ಆದರೇ ವಕ್ಫ್ ಬೋರ್ಡ್ ಯಾವುದೇ ದಾಖಲೆ ನೀಡಬೇಕಿಲ್ಲ. ಈ ಹಿಂದೆ ಕಾಂಗ್ರೆಸ್ ಸೃಷ್ಟಿಸಿದ ವಕ್ಫ್ ಬೋರ್ಡ್ ಕಾನೂನಿನಂತೆ ಬೋರ್ಡ್ ತಿರ್ಮಾನಿಸಿದ ಜಾಗ, ಜಮೀನು ಪಡೆದುಕೊಳ್ಳಲು ಅವಕಾಶವಿದೆ. ನಿಮ್ಮ ಭೂಮಿಗಳನ್ನು ಕಿತ್ತುಕೊಳ್ಳಲು ಮುಂದಾಗ ಬಹುದು ಆದ್ದರಿಂದ ನಾವು ಎಚ್ಚರ ವಹಿಸುವುದು ಆಗತ್ಯ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಡೆ ಹಿಂಗುಗಳಿಗೆ, ರೈತರಿಗೆ, ಕಾರ್ಮಿಕರಿಗೆ, ದಲಿತರಿಗೆ ಇಂತಹ ಸಮಸ್ಯೆ ಎದುರಾಗುತ್ತದೆ. ಕಾಂಗ್ರೆಸ್ ಇಂತಹ ತಿರ್ಮಾನಗಳಿಂದ ಎಚ್ಚೆತ್ತುಕೊಳ್ಳುವುದು ಅವಶ್ಯಕ. ರಾಜ್ಯದಲ್ಲಿ ರೈತರು ನೆಮ್ಮದಿಯಿಂದ ಬದುಕುವ ಕಾಲವನ್ನು ಕಾಂಗ್ರೆಸ್ ದೂರ ಮಾಡಿದೆ ಎಂದು ಆಪಾದಿಸಿದರು.
ಅಂಬೇಡ್ಕರ್ ಸಂವಿಧಾನ ರಚಿಸಿ ದಲಿತರು, ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಿ ಮೇಲೆತ್ತು ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಕಾಂಗ್ರೆಸ್ ತನ್ನ ಓಟ್ ಬ್ಯಾಂಕ್‌ನ ಉದ್ದೇಶದಿಂದ ದಲಿತರು, ಹಿಂದುಳಿದ ವರ್ಗದವರಿಗೆ ಹೆಸರಿಗೆ ಮಾತ್ರ ಯೋಜನೆಗಳನ್ನು ಘೋಷಿಸುತ್ತಿದೆ ಎಂದು ದೂರಿದರು.
ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಹೊಸೂರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್ ರಾಮಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಸತೀಶ್ ಅದ್ದಡ, ಬಿಜೆಪಿ ಮುಖಂಡರಾದ ರೇವಂತ್‌ಗೌಡ, ಬಿಷೇಜ್ ಭಟ್, ದಿವಾಕರ್‌ಭಟ್ ಇದ್ದರು.

Share This Article

Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?

Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…

2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money

Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ

White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…