100 ಎಕರೆ ಭೂಸ್ವಾಧೀನಕ್ಕೆ ಸೂಚನೆ

ಲೋಕಾಪುರ: ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ಪೂರ್ಣಗೊಳಿಸಲು ಆಗ್ರಹಿಸಿ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 6ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ. ಎ. ಮೇಘಣ್ಣವರ ಭೇಟಿ ನೀಡಿದರು.

ಧರಣಿ ನಿರತರನ್ನುದ್ದೇಶಿಸಿ ಮಾತನಾ ಡಿದ ಮೇಘಣ್ಣವರ, ಖಜ್ಜಿಡೋಣಿ ಯಿಂದ ಲೋಕಾಪುರವರೆಗೆ 100 ಎಕರೆ ಭೂಸ್ವಾಧೀನಕ್ಕೆ ಜಮೀನಿನ ಮಾಲೀಕರ ರೊಂದಿಗೆ ಶೀಘ್ರ ಸಭೆ ನಡೆಸಿ, ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಿ ರೈತರಿಂದ ನೇರವಾಗಿ ಖರೀದಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ, ಎಸಿಗೆ ಆದೇಶಿಸಲಾಗುವುದು. ಭೂಸ್ವಾಧೀನಕ್ಕೆ ಅನುದಾನ ಕೊರತೆ ಇಲ್ಲ, ಹೆಚ್ಚಿನ ಅನುದಾನ ಕ್ಕಾಗಿ ಕಾರ್ಯದರ್ಶಿಯವರಿಗೆ ಪತ್ರ ಬರೆಯ ಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧಿನ್ ಖಾಜಿ ಮಾತನಾಡಿ, ರೈಲ್ವೆ ಮಾರ್ಗದ ಅವಶ್ಯಕತೆ ಬಗ್ಗೆ ಸವಿಸ್ತಾರವಾಗಿ ಪ್ರಾದೇಶಿಕ ಆಯುಕ್ತರಿಗೆ ಮಾಹಿತಿ ನೀಡಿದರು.

ಸತ್ಯಾಗ್ರಹಕ್ಕೆ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಭೇಟಿ ನೀಡಿ, ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಸೋಮವಾರ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.

ಸತ್ಯಾಗ್ರಹಕ್ಕೆ ಮುಧೋಳ ತಾಲೂಕು ವಕೀಲರ ಸಂಘ, ಜಮಖಂಡಿ ತಾಲೂಕು ಕರ್ನಾಟಕ ಪಿಂಜಾರ್ ನದಾಫ್ ಸಂಘ ಸೇರಿ ವಿವಿಧ ಸಂಘಟನೆಗಳು ಬೆಂಬಲಿಸಿವೆ.

ಮುಧೋಳ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ಮಾಸರಡ್ಡಿ, ನ್ಯಾಯವಾದಿಗಳಾದ ಆನಂದ ಹಲಸಂಗಿಮಠ, ಎಚ್.ಕೆ. ಮುಳ್ಳೂರ, ಅರುಣ ಮುಧೋಳ, ದಶರಥ ದೊಡಮನಿ, ಅಬುಬಕರ ನದಾಫ್, ಗುಲಾಬಸಾಬ ಅತ್ತಾರ, ನಿಲೇಶ ಬನ್ನೂರ, ಬಿ.ಎಲ್. ಬಬಲಾದಿ, ಕೆ.ಕೆ. ಭಾಗವಾನ, ದುರ್ಗಪ್ಪ ಮಾದರ, ಜಿ.ಬಿ. ಜೋಶಿ ಮತ್ತಿತರರಿದ್ದರು.