Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಸ್ಕಿಜೋಫ್ರೀನಿಯಾಕ್ಕೆ ಶಿರೋಧಾರ ಚಿಕಿತ್ಸೆ

Tuesday, 03.07.2018, 3:02 AM       No Comments

| ಡಾ. ವಸುಂಧರಾ ಭೂಪತಿ

# ನನಗೆ 63 ವರ್ಷ. ಈಗ್ಗೆ 8 ತಿಂಗಳ ಹಿಂದೆ ಲೇಸರ್ ಟಿಯುಆರ್​ಪಿ ಮಾಡಿಸಿಕೊಂಡಿದ್ದೆ (ಪ್ರಾಸ್ಟೇಟ್ ಸ್ವಲ್ಪ ಬೆಳೆಸಿದ್ದರಿಂದ ಡಾಕ್ಟರ್ ಸಲಹೆಯಂತೆ). ಈಗ ನನಗೆ ಪೂರ್ತಿ ಮೂತ್ರ ವಿಸರ್ಜನೆ ಆಗುತ್ತಿಲ್ಲ. ಬ್ಲಾಡರ್ ಸಂಪೂರ್ಣ ಖಾಲಿ ಆಗುವುದಿಲ್ಲ. ತಿಣುಕಿ ಮಾಡಬೇಕು. 2 ತಿಂಗಳ ಹಿಂದೆ ವೈದ್ಯರು ಈಜ್ಝಿಚಠಿಜಿಟ್ಞ ಮಾಡಿದರು. ನನಗೆ ಮಧುಮೇಹ ಹಾಗೂ ಬಿಪಿ ಇದೆ. ಇದಕ್ಕೆ ಸಲಹೆ ನೀಡಿ. ನನ್ನ 2ನೇ ಮಗನಿಗೆ 28 ವರ್ಷ. 5 ವರ್ಷಗಳಿಂದ ಸ್ಕಿಜೋಫ್ರೀನಿಯಾದಿಂದ ಬಳಲುತ್ತಿದ್ದಾರೆ. ಮಾತುಕತೆ ಎಲ್ಲ ಚೆನ್ನಾಗಿ ಆಡುತ್ತಾನೆ. ಆದರೆ, ಬರೀ ಹ್ಯಾಲುಸಿನೇಷನ್ಸ್ ಬರುತ್ತಿರುತ್ತದೆ. ಇದಕ್ಕೆ ಏನಾದರೂ ಚಿಕಿತ್ಸೆ ಇದೆಯೇ?

-ಹೆಸರು ಬೇಡ, ಬಳ್ಳಾರಿ

ನಿಮ್ಮ ಮೂತ್ರ ವಿಸರ್ಜನೆಯ ಸಮಸ್ಯೆ ಪ್ರಾಸ್ಟೇಟ್​ನಿಂದ ಮತ್ತು ವಯೋಸಹಜವಾದುದು. ನಿಮ್ಮ ವೈದ್ಯಕೀಯ ವರದಿಗಳೊಂದಿಗೆ ಹತ್ತಿರದ ಆಯುರ್ವೆದ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸದ್ಯ, ಚಂದ್ರಪ್ರಭಾವಟಿಯನ್ನು ದಿನಕ್ಕೆರಡು ಬಾರಿ ಎರಡು ಮಾತ್ರೆಯಂತೆ ಸೇವಿಸಿ. ಯುರಾಲಾಜಿಸ್ಟ್ ಸಲಹೆಯ ಮೇರೆಗೆ ಡೈಲಟೇಷನ್ ಮಾಡಿಸಿಕೊಳ್ಳಬಹುದು. ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿ ಇರದಿದ್ದಲ್ಲಿ ಮೂತ್ರ ವಿಸರ್ಜನೆ ಸಮಸ್ಯೆ ತಹಬಂದಿಗೆ ಬರುವುದಿಲ್ಲ. ನಿಮ್ಮ ಮಗನಿಗೆ ಸ್ಕಿಜೋಫ್ರೀನಿಯಾಗೆ ಮನೋವೈದ್ಯರ ಬಳಿ ಚಿಕಿತ್ಸೆ ಕೊಡಿಸಿ. ವರ್ಷಕ್ಕೊಮ್ಮೆ ಶಿರೋಧಾರ ಚಿಕಿತ್ಸೆ ಕೊಡಿಸಬೇಕು. ಆಪ್ತ ಸಲಹೆಯೂ ಅಗತ್ಯ. ಔಷಧ ಚಿಕಿತ್ಸೆಯನ್ನು ಯಾವುದೇ ಕಾರಣಕ್ಕೆ ನಿಲ್ಲಿಸಬೇಡಿ. ಸ್ಕಿಜೋಫ್ರೀನಿಯಾಗೆ ಔಷಧದೊಂದಿಗೆ ನಿಯಮಿತ ಆಹಾರ ಸೇವನೆ, ನಿದ್ರೆ, ಕೌಟುಂಬಿಕ ಪರಿಸರ ಎಲ್ಲವೂ ಬಹಳ ಮುಖ್ಯ.

# ನನಗೆ 45 ವರ್ಷ. 7ನೇ ತರಗತಿ ಓದುವ ಮಗಳಿದ್ದಾಳೆ. ನನ್ನ ಹೆಂಡತಿ ನನಗಿಂತ 12 ವರ್ಷ ಚಿಕ್ಕವಳು. ಹೆಂಡತಿಗೆ ಲೈಂಗಿಕವಾಗಿ ತೃಪ್ತಿ ನೀಡಲು ನನಗೆ ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ನಮ್ಮಿಬ್ಬರ ನಡುವೆ ಜಗಳವಾಗುತ್ತಿದೆ. ನನಗೆ ಶೀಘ್ರಸ್ಖಲನ ಸಮಸ್ಯೆ ಇದೆ, ಏನು ಮಾಡಲಿ? ಪರಿಹಾರ ಹೇಳಿ. ನನಗೆ ವೈದ್ಯರಲ್ಲಿಗೆ ಹೋಗಲು ಮುಜುಗರ.

-ಹೆಸರು, ಊರು ಬೇಡ.

45ರ ವಯಸ್ಸು ಲೈಂಗಿಕ ನಿರಾಸಕ್ತಿ ಉಂಟುಮಾಡುವ ವಯಸ್ಸು ಖಂಡಿತ ಅಲ್ಲ. ನಿಮ್ಮ ಶೀಘ್ರಸ್ಖಲನದ ಸಮಸ್ಯೆ ಯಾವ ಕಾರಣದಿಂದ ಅಂದರೆ, ದೈಹಿಕ ಇಲ್ಲವೇ ಮಾನಸಿಕ ಕಾರಣದಿಂದ ಬಂದಿದೆ ಎಂಬುದನ್ನು ಅರಿತುಕೊಂಡು ಚಿಕಿತ್ಸೆ ಪಡೆಯಬೇಕು. ಒಮ್ಮ ರಕ್ತಪರೀಕ್ಷೆ ಮೂಲಕ ಸಕ್ಕರೆ ಕಾಯಿಲೆ ಇದೆಯೇ ಎಂಬುದನ್ನು ಅರಿತುಕೊಳ್ಳಿ. ಅಲ್ಲದೆ, ಮಾನಸಿಕವಾಗಿ ಆತಂಕವಿದ್ದಲ್ಲಿ ಕೂಡ ಶೀಘ್ರಸ್ಖಲನ ಉಂಟಾಗುತ್ತದೆ. ಮಾನಸಿಕ ಒತ್ತಡ ತಪ್ಪಿಸಿಕೊಳ್ಳಲು ವ್ಯಾಯಾಮ, ಯೋಗ, ಧ್ಯಾನ, ಓದು, ಸಂಗೀತ ಮುಂತಾದವುಗಳಲ್ಲಿ ಯಾವುದಾದರೊಂದು ಹವ್ಯಾಸ ಬೆಳೆಸಿಕೊಳ್ಳಿ. ಅಶ್ವಗಂಧಾರಿಷ್ಟವನ್ನು ದಿನಕ್ಕೆ ಮೂರು ಬಾರಿ ಮೂರು ಚಮಚೆಯಷ್ಟನ್ನು ನೀರು ಬೆರೆಸಿ ಊಟದ ನಂತರ ಸೇವಿಸಿ. ಬಾದಾಮಿ, ಅಂಜೂರ, ದ್ರಾಕ್ಷಿ ಸೇವಿಸಿ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಸ್ಖಲನದ ಸಂದರ್ಭದಲ್ಲಿ ನಿಯಂತ್ರಿಸಿಕೊಳ್ಳುವ ಟೆಕ್ನಿಕ್ ಕಲಿತುಕೊಳ್ಳಿ.

Leave a Reply

Your email address will not be published. Required fields are marked *

Back To Top