Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ದೇಹದಂತೆ ಮನಸ್ಸಿಗೂ ಕಾಯಿಲೆ ಸಹಜ

Tuesday, 20.03.2018, 3:03 AM       No Comments

|ಡಾ. ವಸುಂಧರಾ ಭೂಪತಿ

ನಮ್ಮ ತಂದೆಗೆ ಮಾನಸಿಕ ಆರೋಗ್ಯ ಸರಿಯಾಗಿಲ್ಲ. ಒಬ್ಬೊಬ್ಬರೇ ಮಾತನಾಡುತ್ತಾರೆ. ಕೆಲವು ತಿಂಗಳ ಹಿಂದೆ ದೊಡ್ಡಪ್ಪಂದಿರ ಜತೆ ಜಗಳವಾಯಿತು. ಆ ಸನ್ನಿವೇಶವನ್ನು ನನಗೆ ಮರೆಯಲು ಆಗುತ್ತಿಲ್ಲ. ನೆನೆದುಕೊಂಡಷ್ಟೂ ಉದ್ರೇಕಗೊಳ್ಳುತ್ತೇನೆ. ಇತ್ತೀಚೆಗೆ ನಾನೂ ಒಬ್ಬನೇ ಮಾತನಾಡಲು ಆರಂಭಿಸಿದ್ದೇನೆ. ಒಬ್ಬನೇ ನಗುತ್ತೇನೆ. ಇತರರೊಂದಿಗೆ ಮಾತನಾಡುವಂತೆ ಮಾತುಗಳು ಬರುತ್ತವೆ. ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ಮನಸ್ಸು ಚಂಚಲವಾಗುತ್ತಿದೆ. ಉದ್ರೇಕ ಕಡಿಮೆ ಮಾಡಲು ಏನು ಮಾಡಬೇಕು? ಲಲಿತಾ ಪುರವಣಿಯಲ್ಲಿ ಬಂದ ಲೇಖನವೊಂದನ್ನು ನೋಡಿ, ನನಗೂ ಅದೇ ಇರಬಹುದೇ ಎನಿಸುತ್ತದೆ. ಆದರೆ, ಮನೋವೈದ್ಯರ ಬಳಿ ಪರೀಕ್ಷೆ ನಡೆಸಿದಾಗ ಹಾಗೇನೂ ಇಲ್ಲ ಎಂದರು.

-ಗಣೇಶ್, ಮಂಡ್ಯ

ದೇಹಕ್ಕೆ ಬರುವಂತೆ ಮನಸ್ಸಿಗೂ ಕಾಯಿಲೆ, ತೊಂದರೆ ಬರುತ್ತವೆ. ಕೆಲವು ತೊಂದರೆಗಳಿಗೆ ಆಪ್ತಸಲಹೆಯೇ ಸಾಕಾಗುತ್ತದೆ. ಇನ್ನು ಕೆಲವಕ್ಕೆ ಔಷಧ ಬೇಕಾಗುತ್ತದೆ. ಆದರೆ, ನಿಮಗೆ ಸಮಸ್ಯೆ ಇಲ್ಲವೆಂದು ಮನೋವೈದ್ಯರೇ ಹೇಳಿದ ಮೇಲೆ ಮತ್ತೇಕೆ ಚಿಂತಿಸುವಿರಿ? ಒಮ್ಮೆ ಥೈರಾಯ್್ಡ ಪರೀಕ್ಷೆ ಮಾಡಿಸಿಕೊಳ್ಳಿ. ಥೈರಾಕ್ಸಿನ್ ಏರುಪೇರು ಆದಾಗಲೂ ಹೀಗಾಗುತ್ತದೆ. ಸಾರಸ್ವತಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟು ನೀರು ಬೆರೆಸಿ ಊಟದ ನಂತರ ಸೇವಿಸಿ. ಪೋಷಕಾಂಶಯುಕ್ತ ಆಹಾರ ಸೇವಿಸಿ. ಮೊಳಕೆಕಾಳು, ಹಣ್ಣು, ಹಾಲು, ಮೊಟ್ಟೆ ಸೇವನೆ ಮಾಡಿ. ಯೋಗ, ಧ್ಯಾನ ಮಾಡಿ. ಸಂಗೀತ ಕೇಳುವುದು ಉತ್ತಮ. ಮನಸ್ಸನ್ನು ಸಮಾಧಾನವಾಗಿರಿಸಿಕೊಳ್ಳಲು ಇವು ಸಹಕಾರಿ.

ಕುಟುಂಬದಲ್ಲಿ ಕೆಲವು ಮಾತುಗಳು ಬರುತ್ತವೆ. ಅವುಗಳನ್ನೇ ಸದಾಕಾಲ ನೆನಪಿಸಿಕೊಳ್ಳುತ್ತಿದ್ದರೆ ಮನಸ್ಸಿಗೆ ಹಿಂಸೆಯಾಗುತ್ತಿರುತ್ತದೆ. ಪ್ರತಿಷ್ಠೆಗೆ ಬೀಳದೆ ಅಂಥ ಸನ್ನಿವೇಶಗಳನ್ನು ಸಮಾಧಾನಚಿತ್ತದಿಂದ ಸ್ವೀಕರಿಸಲು, ನೋಡಲು ಕಲಿಯಬೇಕು. ಎಷ್ಟೋ ಬಾರಿ ಧ್ಯಾನಕ್ಕೆ ಕುಳಿತುಕೊಂಡರೂ ಮನಸ್ಸು ಮತ್ತೆ ಮತ್ತೆ ಅದರತ್ತಲೇ ಹರಿದು ಚಿತ್ತ ಕದಡುತ್ತಿರುತ್ತದೆ. ಹೀಗಾದಾಗ, ಮೈ ಬೆವರು ಕಿತ್ತು ಹರಿದುಹೋಗುವಂತೆ ಯೋಗ, ವ್ಯಾಯಾಮ ಮಾಡಿ. ನಿಜಕ್ಕೂ ಮನಸ್ಥಿತಿ ಹದಕ್ಕೆ ಬರುತ್ತದೆ. ಕೋಪತಾಪ, ಅವಮಾನ, ಹಿನ್ನಡೆ, ಮೋಸ ಹೀಗೆ ಯಾವುದೇ ಸನ್ನಿವೇಶಗಳನ್ನು ಆತುರಕ್ಕೆ ಬೀಳದೆ ನಿಭಾಯಿಸುವುದನ್ನು ಕಲಿತುಕೊಳ್ಳಿ. ಆಗ ಮನಸ್ಸು ಶಾಂತವಾಗುತ್ತದೆ. ಉದ್ರೇಕವೂ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *

Back To Top