blank

ಮಹಿಳಾ ಸಬಲೀಕರಣಕ್ಕೆ ಹತ್ತಾರು ದಾರಿ; ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳ ಸಂಕ್ಷಿಪ್ತ ವಿವರ

blank
ಮಹಿಳಾ ಸಬಲೀಕರಣ, ಮಹಿಳಾ ಪ್ರಾತಿನಿಧ್ಯ ಮುಂತಾದ ವಿಚಾರ ನಿತ್ಯವೂ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಲೇ ಇದೆ. ಇತ್ತೀಚೆಗೆ ಕೇಂದ್ರ ಸಚಿವೆ ಸ್ಮೃತಿ ಜುಬಿನ್ ಇರಾನಿ ಬರೆದ ಲೇಖನ ಕೂಡ ಇಂತಹ ಚರ್ಚೆಯ ಭಾಗವೇ ಆಗಿದೆ. ಅವರು ಸರ್ಕಾರದ ಅನೇಕ ಯೋಜನೆಗಳನ್ನು ಉಲ್ಲೇಖಿಸಿ, ಫಲಾನುಭವಿಗಳ ಪೈಕಿ ಮಹಿಳೆಯರು ಹೆಚ್ಚು ಇರುವುದನ್ನು ಗುರುತಿಸಿದ್ದಾರೆ. ಇವೆಲ್ಲವೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಅಂಶಗಳೇ ಆಗಿವೆ.

ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು. ಅವರ ಪ್ರಾತಿನಿಧ್ಯವೂ ಅಷ್ಟೇ ಪ್ರಾಮುಖ್ಯವಾದದ್ದು. ದಶಕಗಳಿಂದ ಮಹಿಳಾ ಪ್ರಾತಿನಿಧ್ಯದ ವಿಚಾರ ಚರ್ಚೆಯಲ್ಲಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತ್ತೀಚೆಗೆ ಈ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯ ಗಮನಾರ್ಹ. ಪ್ರಗತಿಗೆ ಚಾಲನೆ ನೀಡುವಲ್ಲಿ ಮಹಿಳೆಯರು ಸಮಾನ ಪಾಲುದಾರರಾಗಬೇಕು. ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಮಹಿಳೆಯರೇ ಕೇಂದ್ರ ಬಿಂದು. ದೇಶ ಪ್ರವರ್ಧಮಾನಕ್ಕೆ ಬರಬೇಕಾದರೆ, ಮಹಿಳೆಯರ ಪಾಲ್ಗೊಳ್ಳುವಿಕೆ, ಪಾಲುದಾರಿಕೆಯೇ ಪ್ರಗತಿಯ ಮಾಪನವಾಗಬೇಕು. ಸರ್ಕಾರವೂ ಈ ನಿಟ್ಟಿನಲ್ಲಿ ಗಮನಹರಿಸಿದ್ದು, ಮಹಿಳೆಯರ ಪಾಲ್ಗೊಳ್ಳುವಿಕೆಗೆ, ಅವರ ಪಾಲುದಾರಿಕೆ ಖಾತರಿಪಡಿಸುವ ಯೋಜನೆ, ಉಪಕ್ರಮಗಳನ್ನು ಜಾರಿಗೊಳಿಸಿದೆ ಎಂದು ಸ್ಮೃತಿ ಇರಾನಿ ಹೇಳಿದ್ದರು. ಇದೇ ರೀತಿ ರಾಜ್ಯದಲ್ಲೂ ಕೆಲವು ಯೋಜನೆಗಳಿವೆ.

ಮಹಿಳಾ ಇ-ಹಾತ್: ಮಹಿಳಾ ಉದ್ಯಮಿ, ಸ್ವಸಹಾಯ ಗುಂಪು ಮತ್ತು ಸರ್ಕಾರೇತರ ಸಂಸ್ಥೆ, ಅವರು ಮಾಡಿದ ಉತ್ಪನ್ನ ಮತ್ತು ಸೇವೆ ಪ್ರದರ್ಶಿಸುವ ಮತ್ತು ಬೆಂಬಲಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಒದಗಿಸಿರುವ ನೇರ ಆನ್​ಲೈನ್ ಮಾರುಕಟ್ಟೆ ವೇದಿಕೆ ಮಹಿಳಾ ಇ-ಹಾತ್. ಇದು ‘ಡಿಜಿಟಲ್ ಇಂಡಿಯಾ’ ಉಪಕ್ರಮದ ಒಂದು ಭಾಗ. ಮಹಿಳೆಯರು ಡಿಡಿಡಿ.ಞಚಜಜ್ಝಿಚಛಿಜಚಚಠಿಞk.ಜಟಡ.ಜ್ಞಿನಲ್ಲಿ ಹೆಸರು ನೋಂದಾಯಿಸಿ, ವಿಶಾಲ ಮಾರುಕಟ್ಟೆಯಲ್ಲಿ ಕೆಲಸ ಪ್ರದರ್ಶಿಸುವುದಕ್ಕೆ ತಂತ್ರಜ್ಞಾನ ಬಳಸಿಕೊಳ್ಳಬಹುದು.

ಬೇಟಿ ಬಚಾವೋ, ಬೇಟಿ ಪಢಾವೋ: ಹೆಣ್ಣು ಭ್ರೂಣಹತ್ಯೆಯ ನಿಮೂಲನೆ ಮತ್ತು ಭಾರತೀಯ ಬಾಲಕಿಯರನ್ನು ಉದ್ದೇಶಿಸಿರುವ ಕಲ್ಯಾಣ ಸೇವೆಗಳ ಕುರಿತು ಜಾಗೃತಿ ಮೂಡಿಸುವ ಗುರಿ ಹೊಂದಿರುವ ಸಾಮಾಜಿಕ ಅಭಿಯಾನ. ಹೆಣ್ಣು ಮಗು ಉಳಿಸಿ ಆಂದೋಲನವನ್ನು 2015ರ ಜನವರಿ 22ರಂದು ಪ್ರಾರಂಭಿಸಲಾಗಿದೆ. 100 ಕೋಟಿ ರೂ. ಆರಂಭಿಕ ನಿಧಿಯೊಂದಿಗೆ ಶುರುವಾಗಿದ್ದು, ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಪಂಜಾಬ್, ದೆಹಲಿ ಮತ್ತು ಹರಿಯಾಣದಲ್ಲಿನ ಕ್ಲಸ್ಟರ್​ಗಳನ್ನು ಗುರಿಯಾಗಿಸಿಕೊಂಡಿದೆ.

ಒನ್ ಸ್ಟಾಪ್ ಸೆಂಟರ್ ಸ್ಕೀಮ್: ‘ಸಖಿ’ ಎಂದೇ ಜನಪ್ರಿಯ. 2015ರ ಏಪ್ರಿಲ್ 1 ರಂದು ನಿರ್ಭಯಾ ನಿಧಿಯೊಂದಿಗೆ ಇದು ಜಾರಿಗೊಂಡಿತು. ಭಾರತದ ವಿವಿಧೆಡೆ 247 ಗಂಟೆ ಸಹಾಯವಾಣಿಯೊಂದಿಗೆ ಸಂಯೋಜಿತವಾಗಿರುವ ಒಂದೇ ಸೂರಿನಡಿ ಹಿಂಸಾಚಾರದ ಸಂತ್ರಸ್ತರಿಗೆ ಆಶ್ರಯ, ಪೊಲೀಸ್ ಡೆಸ್ಕ್, ಕಾನೂನು, ವೈದ್ಯಕೀಯ ಮತ್ತು ಸಮಾಲೋಚನೆ ಸೇವೆ ಒದಗಿಸಲು ಒನ್ ಸ್ಟಾಪ್ ಕೇಂದ್ರ ಸ್ಥಾಪಿಸಲಾಗಿದೆ. ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 181.

ಸ್ವಾಧಾರ್ ಗ್ರೆಹ್: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2002ರಲ್ಲಿ ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರ ಪುನರ್ವಸತಿಗಾಗಿ ಈ ಯೋಜನೆ ಪ್ರಾರಂಭಿಸಿತು. ಇದು ಸಂಕಷ್ಟದಲ್ಲಿರುವ ಮಹಿಳೆಯರು/ಬಾಲಕಿಯರಿಗೆ ವಸತಿ, ಆಹಾರ, ಬಟ್ಟೆ ಮತ್ತು ಆರೈಕೆಯನ್ನು ಒದಗಿಸುತ್ತದೆ. ವಿಧವೆಯರು, ಜೈಲಿನಿಂದ ಬಿಡುಗಡೆಯಾದ, ಕುಟುಂಬದ ಬೆಂಬಲವಿಲ್ಲದ ಮಹಿಳಾ ಕೈದಿಗಳು, ಭಯೋತ್ಪಾದಕ/ಉಗ್ರಗಾಮಿ ಹಿಂಸಾಚಾರಕ್ಕೆ ಬಲಿಯಾದ ಮಹಿಳೆಯರು ಇತ್ಯಾದಿ ಒಳಗೊಳ್ಳುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ಹೆಚ್ಚಿನ ಮಾಹಿತಿ ವೀಕ್ಷಿಸಬಹುದು.

ಎಸ್​ಟಿಇಪಿ: ಮಹಿಳೆಯರಿಗಾಗಿ ತರಬೇತಿ ಮತ್ತು ಉದ್ಯೋಗ ಕಾರ್ಯ ಕ್ರಮದ ಬೆಂಬಲ (ಖಖಉಕ) ಒದಗಿಸುವ ಯೋಜನೆ ಇದು. ಮಹಿಳೆಯರಿಗೆ ಉದ್ಯೋಗ ನೀಡುವ ಕೌಶಲ ಒದಗಿಸುವ ಗುರಿ ಹೊಂದಿದೆ. ಹೆಚ್ಚಿನ ಮಾಹಿತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂರ್ಪಸಬಹುದು.

ನಾರಿ ಶಕ್ತಿ ಪುರಸ್ಕಾರ: ವಿಶೇಷವಾಗಿ ದುರ್ಬಲ ಮತ್ತು ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ವಿಶಿಷ್ಟ ಸೇವೆಗಳನ್ನು ಸಲ್ಲಿಸುವಲ್ಲಿ ಮಹಿಳೆಯರು ಮತ್ತು ಸಂಸ್ಥೆಗಳು ಮಾಡಿದ ಪ್ರಯತ್ನ ಗಳನ್ನು ಗುರುತಿಸುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳಾಗಿವೆ. ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಮಾರ್ಚ್ 8 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.

ಕಾರ್ಯನಿರತ ಮಹಿಳಾ ಹಾಸ್ಟೆಲ್: ಮಹಿಳೆಯರಿಗೆ ಉದ್ಯೋಗಾವಕಾಶವಿರುವ ನಗರ, ಅರೆ-ನಗರ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯವಿರುವಲ್ಲೆಲ್ಲ ಮಕ್ಕಳಿಗೆ ಡೇಕೇರ್ ಸೌಲಭ್ಯ ದೊಂದಿಗೆ, ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರ ವಸತಿ ಸೌಕರ್ಯಗಳ ಲಭ್ಯತೆ ಉತ್ತೇಜಿಸುವುದು ಯೋಜನೆಯ ಉದ್ದೇಶ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ಹೆಚ್ಚಿನ ವಿವರ ವೀಕ್ಷಿಸಬಹುದು.

ರಾಜ್ಯ ಸರ್ಕಾರದ ಉಪಕ್ರಮಗಳು

  • ಸಾಂತ್ವನ: ವಿವಿಧ ದೌರ್ಜನ್ಯಗಳ ಸಂತ್ರಸ್ತೆಯರಿಗೆ ಸಮಾಲೋಚನೆ ಮತ್ತು ಅಗತ್ಯ ಸಹಾಯವನ್ನು ಒದಗಿಸುವ ಗುರಿಯೊಂದಿಗೆ ಆರಂಭವಾದ ಯೋಜನೆ ಇದು. ಕಾನೂನು ನೆರವು, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ಹಿಂಸಾಚಾರ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ಇದರ ಉದ್ದೇಶ. ಇದಕ್ಕಾಗಿ ಇಲಾಖೆಯಿಂದ ಅನುದಾನಿತ ಎನ್​ಜಿಒಗಳ ಮೂಲಕ ಸಾಂತ್ವನ ಕೇಂದ್ರ ನಡೆಸಲಾಗುತ್ತಿದೆ.
  • ವರ್ಕಿಂಗ್​ ವಿಮೆನ್ಸ್ ಹಾಸ್ಟೆಲ್: ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತ ಮತ್ತು ಸೂಕ್ತವಾದ ವಸತಿ ಸೌಕರ್ಯಗಳನ್ನು ಒದಗಿಸುವುದು ಇದರ ಗುರಿ. ಹೆಚ್ಚಿನ ಮಹಿಳೆಯರು ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯ ಬಯಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇಂತಹ ಮಹಿಳೆಯರಿಗಾಗಿ 4,000 ಚ.ಅಡಿಯಲ್ಲಿ ಹಾಸ್ಟೆಲ್ ನಿರ್ವಿುಸಲು ನೋಂದಾಯಿತ ಎನ್​ಜಿಒಗಳಿಗೆ 25 ಲಕ್ಷ ರೂ. ಅನುದಾನ ಒದಗಿಸಲಾಗುತ್ತಿದೆ.
  • ಮಹಿಳಾ ರಕ್ಷಣಾ ಅಧಿಕಾರಿಗಳು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ವಿಶೇಷ 47 ರಕ್ಷಣಾ ಅಧಿಕಾರಿಗಳನ್ನು ಸರ್ಕಾರವು ರಕ್ಷಣಾ ಅಧಿಕಾರಿಗಳಾಗಿ ನೇಮಿಸಿದೆ.
  • ಕಾನೂನು ನೆರವು: ಎಲ್ಲ ಜಿಲ್ಲೆಗಳಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಉಚಿತ ಕಾನೂನು ನೆರವು ಕೇಂದ್ರಗಳಿವೆ. ಇಲ್ಲಿ ಅನುಭವಿ ವಕೀಲರು ಪ್ರತಿ ಬುಧವಾರ ಮತ್ತು ಶನಿವಾರ ಕಾನೂನು ನೆರವು ನೀಡುತ್ತಾರೆ.
  • ಆಶ್ರಯ ಮತ್ತು ಮನೆಗಳು: ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದ ಮಹಿಳೆಯರಿಗೆ ಆಶ್ರಯ ಮತ್ತು ಸಮಾಲೋಚನೆ ನೀಡಲು, ಸ್ವ್ವಾಧಾರ್ ಕೇಂದ್ರಗಳು, ಶಾರ್ಟ್ ಸ್ಟೇ ಹೋಮ್ಳು ಮತ್ತು ಸಾಂತ್ವನ ಕೇಂದ್ರಗಳನ್ನು ರಾಜ್ಯದಲ್ಲಿ ಆಶ್ರಯ ಮನೆಗಳಾಗಿ ಅಧಿಸೂಚಿಸಲಾಗಿದೆ.
  • ಸೇವಾ ಪೂರೈಕೆದಾರರು: 116 ಎನ್​ಜಿಒಗಳಿಗೆ ಕಾನೂನು, ವೈದ್ಯಕೀಯ ಮತ್ತು ಇತರ ಸಹಾಯವನ್ನು ಒದಗಿಸಲು ಮತ್ತು ಕೌಟುಂಬಿಕ ಹಿಂಸಾಚಾರದ ಸಮನ್ವಯ ಸಮಿತಿಯ ಬಲಿಪಶುಗಳ ಮಹಿಳೆಯರ ಹಿತಾಸಕ್ತಿಯನ್ನು ರಕ್ಷಿಸಲು ಸೇವಾ ಪೂರೈಕೆದಾರರೆಂದು ಸೂಚಿಸಲಾಗಿದೆ.
  • ಅಮೃತ ಸ್ವಸಹಾಯ ಕಿರು ಉದ್ದಿಮೆ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಘೊಷಿಸಲಾದ 13 ಅಮೃತ ಯೋಜನೆಗಳ ಪೈಕಿ 7500 ಸ್ವಸಹಾಯ ಗುಂಪುಗಳನ್ನು ಕಿರುಉದ್ದಿಮೆ ಸಂಸ್ಥೆಗಳನ್ನಾಗಿ ರೂಪಿಸಲು ತಲಾ ರೂ.1.00 ಲಕ್ಷ ದಂತೆ ಸೀಡ್ ಮನಿ ಒದಗಿಸುವುದಾಗಿ ಘೋಷಿಸಲಾಗಿದೆ. ಇದಕ್ಕೆ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದೆ. ಮಾರ್ಗಸೂಚಿ ಪ್ರಕಟವಾಗಿದೆ. ಗುಂಪುಗಳನ್ನು ಆಯ್ಕೆ ಮಾಡಲು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಆಗಿದ್ದು, ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
  • ಮಹಿಳಾ ಬಜೆಟ್: ಮಹಿಳೆಯರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಕರ್ನಾಟಕ ಮಹಿಳಾ ಅಭಿವೃದ್ದಿ ಯೋಜನೆ (ಓMಅ) 2003ರಿಂದ ಚಾಲ್ತಿಯಲ್ಲಿದೆ.

ಸ್ತ್ರೀಶಕ್ತಿ ಯೋಜನೆ: ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣ ಕ್ಕಾಗಿ ‘ಸ್ತ್ರೀಶಕ್ತಿ’ ಯೋಜನೆ ಆರಂಭಿಸಲಾಗಿದೆ. 176 ತಾಲೂಕುಗಳಲ್ಲಿ ಗುಂಪು ರಚನೆ ಮಾಡಲಾಗಿದೆ. ಸ್ತ್ರೀಶಕ್ತಿ ಸಂಘಗಳಿಗೆ ಸುತ್ತುನಿಧಿ, ಬ್ಯಾಂಕ್ ಲಿಂಕೇಜ್, ಸಾಲದ ಮೇಲಿನ ಬಡ್ಡಿಗೆ ಶೇ.6ರ ಸಹಾಯ ಧನ, ಅಧಿಕ ಉಳಿತಾಯ ಮಾಡಿರುವ ಗುಂಪುಗಳಿಗೆ ಪೋ›ತ್ಸಾಹಧನ, ತರಬೇತಿ, ಮಾರುಕಟ್ಟೆ ಸೌಲಭ್ಯ-ನೇರ ಹಾಗೂ ಆನ್​ಲೈನ್, ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ಹಾಗೂ ತಾಲೂಕು ಒಕ್ಕೂಟಗಳಿಗೆ ಪ್ರಶಸ್ತಿ, ಜಿಲ್ಲಾ, ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ರಚನೆ ನಡೆಯುತ್ತವೆ.

ಟ್ರಾನ್ಸಿಟ್ ಹಾಸ್ಟೆಲ್ಸ್: ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆ ಪರಿಗಣಿಸಿ ರಾಜ್ಯ ಸರ್ಕಾರವು, ವಿವಿಧ ಉದ್ಯೋಗ ಸಂದರ್ಶನಗಳಿಗೆ ಹಾಜರಾಗುವ, ಇಂಜಿನಿಯರಿಂಗ್/ ವೈದ್ಯಕೀಯ/ ಇತರ ಶೈಕ್ಷಣಿಕ ಪ್ರವೇಶ ಪರೀಕ್ಷೆಗೆ ಹಾಜರಾಗುವ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಮಹಿಳೆಯರಿಗೆ ವಸತಿಗಾಗಿ 11 ಟ್ರಾನ್ಸಿಟ್ ಹಾಸ್ಟೆಲ್ ಪ್ರಾರಂಭಿಸಿದೆ. ಆದಾಯದ ಮಿತಿ ಲೆಕ್ಕಿಸದೆ ಮಹಿಳೆಯರಿಗೆ. ಉಚಿತ ವಸತಿ, ಉಪಹಾರ, ಊಟ ಮತ್ತು ಬಿಸಿನೀರಿನ ಸ್ನಾನದ ಸೌಲಭ್ಯ ಮತ್ತು ಲಾಕರ್ ಸೌಲಭ್ಯವೂ ಲಭ್ಯವಿದೆ.

ಜಾರಿಯಾಗಲಿರುವ ಯೋಜನೆಗಳು

  • ಬಾಲ್ಯವಿವಾಹ ತಡೆಗಟ್ಟುವ ಉದ್ದೇಶದಿಂದ ಸ್ಪೂರ್ತಿ ಯೋಜನೆಗೆ ಇನ್ನಷ್ಟು ಮಹತ್ವ
  • ವ್ಯಾಪಾರ/ಉದ್ಯಮದಲ್ಲಿ ಮಹಿಳೆಯರ ಉಪಸ್ಥಿತಿ ಹೆಚ್ಚಿಸಲು ಸ್ಟಾರ್ಟ್​ಅಪ್​ಗಳಿಗೆ 10 ಲಕ್ಷ ರೂ.ವರೆಗೆ ನೇರ ಸಾಲ
  • ಪ್ರತಿ ಜಿಲ್ಲೆಯ ಎರಡು ತಾಲೂಕು ಕೇಂದ್ರ ಹಾಗೂ ಹೆಚ್ಚು ಮಹಿಳಾ ಕಾರ್ವಿುಕರ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರ
  • ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ 30 ಸಾವಿರ ರೂ. ಇಡಿಗಂಟು ಪಾವತಿ
  • ದುಡಿಯುವ ಮಹಿಳೆಯರ ಮಕ್ಕಳ ಪಾಲನೆ ದೃಷ್ಟಿಯಿಂದ ರಾಜ್ಯದ 5 ತಾಲೂಕುಗಳಲ್ಲಿ ಶಿಶುಪಾಲನಾ ಕೇಂದ್ರ ಪ್ರಾಯೋಗಿಕ ಅನುಷ್ಠಾನ
  • ಸಂಕಷ್ಟದಲ್ಲಿರುವ 18 ವರ್ಷ ಪೂರ್ಣಗೊಂಡ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ವೃತ್ತಿಪರ ಕೌಶಲ ತರಬೇತಿ ಪಡೆಯಲು ಹೆಣ್ಣು ಮಕ್ಕಳ ಅನುಪಾಲನಾ ಗೃಹ ಪ್ರಾರಂಭ
Share This Article

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…