ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಲಾಲ್ಬಾಗ್ನಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆಂದು ಶನಿವಾರ (ಜ. 25) ಭೇಟಿ ನೀಡುವ ಮೆಟ್ರೋ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ವ್ಯವಸ್ಥೆ ಮಾಡಲಾಗಿದೆ. ವಾರಾಂತ್ಯ ದಿನಗಳಲ್ಲಿ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯಿದ್ದು, ಪ್ರದರ್ಶನ ವೀಕ್ಷಿಸಿ ತೆರಳುವವರು ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಖರೀದಿಗೆ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಎಲ್ಲ ನಿಲ್ದಾಣಗಳಲ್ಲೂ 30 ರೂ. ಮೊತ್ತದ ಟಿಕೆಟ್ ಖರೀದಿಸಬಹುದು. ಅದನ್ನು ಬಳಸಿ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಲಾಲ್ಬಾಗ್ನಿಂದ ಯಾವುದೇ ನಿಲ್ದಾಣದಲ್ಲಿ ಟಿಕೆಟ್ ತೋರಿಸಿ ಪ್ರಯಾಣಿಸಬಹುದು.
ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ ಅಳವಡಿಕೆ: ಪ್ರಯಾಣಿಕರ ಸುರಕ್ಷತೆಗಾಗಿ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್ಫಾಮ್ರ್ ಸ್ಕ್ರೀನ್ ಡೋರ್ಗಳನ್ನು ಅಳವಡಿಸಲು ಬಿಎಂಆರ್ಸಿಎಲ್ ನಿರ್ಧರಿಸಿದೆ. ದೆಹಲಿ ಮತ್ತು ಚೆನ್ನೈ ಮೆಟ್ರೋದಲ್ಲಿ ಈ ಮಾದರಿ ಅನುಸರಿಸಲಾಗಿದ್ದು, ಪ್ರಯಾಣಿಕರು ಹಳಿ ಬಳಿ ತೆರಳುವುದನ್ನು ತಡೆಯಲು ಸಹಕಾರಿಯಾಗಲಿದೆ. ರೈಲುಗಳು ಪ್ಲಾಟ್ಫಾರ್ಮ್ ಗೆ ಬಂದಾಗ ಮಾತ್ರ ಸ್ಕ್ರೀನ್ ಡೋರ್ ತೆರೆದುಕೊಳ್ಳಲಿವೆ. 2ನೇ ಹಂತದಲ್ಲಿ ನಿರ್ವಣಗೊಳ್ಳುತ್ತಿರುವ ಗೊಟ್ಟಿಗೆರೆ- ನಾಗವಾರ ಮಾರ್ಗದಲ್ಲಿ ಈ ವ್ಯವಸ್ಥೆ ಅಳವಡಿಸಲಾಗುತ್ತದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.