ಬರ್ಮಿಂಗ್‌ಹ್ಯಾಂ: ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲಿ ನಿರ್ಗಮನ ಕಂಡಿದ್ದಾರೆ. ಯುವ ಷಟ್ಲರ್ ಲಕ್ಷ್ಯಸೇನ್ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ೈನಲ್‌ಗೇರಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ಪಿವಿ ಸಿಂಧು 19-21,11-21 ನೇರ ಗೇಮ್‌ಗಳಿಂದ ವಿಶ್ವ ಚಾಂಪಿಯನ್ ಕೊರಿಯಾದ ಆನ್ ಸೆ ಯಂಗ್ ಎದುರು ಸೋಲು ಅನುಭವಿಸಿದರು. ವಿಶ್ವದ ನಂ.1 ಆಟಗಾರ್ತಿ ಎದುರು ಉತ್ತಮ ಹೋರಾಟ ಪ್ರದರ್ಶಿಸಿದ ಸಿಂಧು ಪಂದ್ಯದಲ್ಲಿ ಎಸಗಿದ ಅನಗತ್ಯ ತಪ್ಪುಗಳಿಂದ ಹಿನ್ನಡೆ ಎದುರಿಸಿದರು. ಇದರೊಂದಿಗೆ 22 ವರ್ಷದ ಆನ್ ಸೆ ಯಂಗ್ ಎದುರು ಸತತ 7ನೇ ಬಾರಿಗೆ ಸಿಂಧು ಸೋಲು ಅನುಭವಿಸಿದಂತಾಗಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕೊನೆಯ ಆಶಾಕಿರಣ ಎನಿಸಿರುವ ಲಕ್ಷ್ಯಸೇನ್ 24-22, 11-21, 21-14 ಮೂರು ಗೇಮ್‌ಗಳ ಕಠಿಣ ಹೋರಾಟದಲ್ಲಿ 4ನೇ ಶ್ರೇಯಾಂಕಿತ ಡೆನ್ಮಾರ್ಕ್‌ನ ಆಂಡರ್ಸ್ ಆಂಟನ್ಸೆನ್ ವಿರುದ್ಧ
ಜಿದ್ದಾಜಿದ್ದಿನಿಂದ ಕೂಡಿದ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿದ ಲಕ್ಷ್ಯಸೇನ್, 2ನೇ ಗೇಮ್ ಅನ್ನು ಸುಲಭವಾಗಿ ಬಿಟ್ಟುಕೊಟ್ಟರು. ನಿರ್ಣಾಯಕ ಮೂರನೇ ಗೇಮ್‌ನಲ್ಲಿ 6-12 ಅಂಕಗಳ ಹಿನ್ನಡೆಯಿಂದ ಕಂಬ್ಯಾಕ್ ಮಾಡಿದ ಲಕ್ಷ್ಯಸೇನ್ ಡೆನ್ಮಾರ್ಕ್ ಆಟಗಾರನಾಗಿ ಪ್ರಬಲ ಸವಾಲೊಡ್ಡಿ ವಿಜಯಶಾಲಿ ಎನಿಸಿದರು.
ಡಬಲ್ಸ್‌ನಲ್ಲಿ ಅಶ್ವಿನಿ-ತನಿಷಾ ಜೋಡಿ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 21-11,11-21,11-21 ರಿಂದ ಐದನೇ ಶ್ರೇಯಾಂಕಿತ ಚೀನಾದ ಜಾಂಗ್ ಶುಕ್ಸಿಯಾನ್- ಜೆಂಗ್ ಯು ವಿರುದ್ಧ ಸೋಲುಂಡಿತು.