ಫೈನಲ್‌ಗೇರಲು ಇಂದು ಸೇನ್-ಸೆನ್ ಸೆಣಸಾಟ: ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್ ಎದುರಾಳಿ

ಪ್ಯಾರಿಸ್: ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಉಪಾಂತ್ಯಕ್ಕೇರಿ ಇತಿಹಾಸ ರಚಿಸಿರುವ ಯುವ ತಾರೆ ಲಕ್ಷ್ಯ ಸೇನ್ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ನಿರೀಕ್ಷೆ ಮೂಡಿಸಿದ್ದಾರೆ. ಭಾನುವಾರ ನಡೆಯಲಿರುವ ಪುರುಷರ ಸಿಂಗಲ್ಸ್ ಸೆಮಿಪೈನಲ್‌ನಲ್ಲಿ 22 ವರ್ಷದ ಲಕ್ಷ್ಯ ಸೇನ್, ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್‌ಸೆನ್ ಎದುರು ಹೋರಾಡಲಿದ್ದಾರೆ.

ಭಾರತದ ಸವಾಲು ಜೀವಂತವಿರಿಸಿರುವ ಲಕ್ಷ್ಯ ಸೇನ್ ಪದಕ ಖಾತ್ರಿ ಪಡಿಸಿಕೊಳ್ಳಲು ಒಂದು ಹೆಜ್ಜೆ ಮಾತ್ರ ಬಾಕಿಯಿದ್ದು, ಫೈನಲ್‌ಗೇರಿದರೆ ಚಿನ್ನ ಅಥವಾ ಕನಿಷ್ಠ ಬೆಳ್ಳಿ ಪದಕ ಪಡೆಯಲಿದ್ದಾರೆ. ಒಂದು ವೇಳೆ ಸೆಮೀಸ್‌ನಲ್ಲಿ ನಿರಾಸೆ ಕಂಡರೆ ಕಂಚಿನ ಪದಕಕ್ಕೆ ‘ಪ್ಲೇಆ್’ ಪಂದ್ಯದಲ್ಲಿ ಸೆಣಸಾಡುವ ಅವಕಾಶ ಪಡೆಯಲಿದ್ದಾರೆ. ಲೀಗ್ ಹಾಗೂ ನಾಕೌಟ್‌ನಲ್ಲಿ ತನಗಿಂತ ಉನ್ನತ ಶ್ರೇಯಾಂಕಿತ ಆಟಗಾರರನ್ನು ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಉತ್ತರಾಖಂಡ ಮೂಲದ ಲಕ್ಷ್ಯ ಸೇನ್, ಇದುವರೆಗೆ ಆಕ್ಸೆಲ್‌ಸೆನ್ ಎದುರು 8 ಬಾರಿ ಮುಖಾಮುಖಿಯಾಗಿದ್ದು, ಒಮ್ಮೆ ಮಾತ್ರ ಗೆಲುವು ಸಾಧಿಸಿದ್ದಾರೆ.

30 ವರ್ಷದ ಆಕ್ಸೆಲ್‌ಸೆನ್ ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಸಾಧನೆ ಜತೆಗೆ 2017 ಹಾಗೂ 2022ರಲ್ಲಿ ವಿಶ್ವ ಚಾಂಪಿಯನ್ ಎನಿಸಿದ್ದಾರೆ. 2021 ರಿಂದ 2024ರ ಜೂನ್‌ವರೆಗೆ ವಿಡಬ್ಲುೃಎಪ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು. 2021ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿರುವ ಲಕ್ಷ್ಯಸೇನ್ ಒಲಿಂಪಿಕ್ಸ್ ಕೂಟದಲ್ಲಿ ಭರ್ಜರಿ ಪ್ರದರ್ಶನ ಮೂಲಕ ಗಮನಸೆಳೆದಿದ್ದಾರೆ. ಸೆಮಿೈನಲ್‌ನಲ್ಲಿ ಆಕ್ಸೆಲ್‌ಸೆನ್ ಎದುರು ಸತ್ವ ಪರೀಕ್ಷೆ ಎದುರಾಗಲಿದೆ. ಆದರೆ ಹಾಲಿ ಋತುವಿನಲ್ಲಿ ಒಮ್ಮೆ ಪೋಡಿಯಂ ಏರಿರುವ ಆಕ್ಸೆಲ್‌ಸೆನ್‌ಗೆ ಕೂಟದಲ್ಲಿ ಇದುವರಗೆ ನೈಜ ಸವಾಲು ಎದುರಾಗಿಲ್ಲ.

ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರಾಖಂಡ ಮೂಲದ ಲಕ್ಷ್ಯ ಸೇನ್ ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಆಕಾಡೆಮಿಯಲ್ಲಿ ವಿಮಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಪ್ರಸ್ತುತ ಪ್ರಕಾಶ್ ಪಡುಕೋಣೆ ಪ್ಯಾರಿಸ್‌ನಲ್ಲಿ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ