ಲಕ್ಷ್ಯ ಪ್ರಿಡಿಕ್ಟ್ ವಿನ್ ಕಾರ್ಯಕ್ರಮ,  ವಿಜೇತರಿಗೆ ಬಹುಮಾನ ವಿತರಣೆ

blank

ಹುಬ್ಬಳ್ಳಿ: ಲಕ್ಷ್ಯ ಏಮ್ ಫಾರ್ ಎಕ್ಸಲನ್ಸ್ ಇದರ ಕಲ್ಪನೆಯೇ ಅದ್ಭುತವಾಗಿದೆ. ವಿದ್ಯಾರ್ಥಿಗಳು ತಾವು ಬರೆಯುವ ಪರೀಕ್ಷೆಯಲ್ಲಿ ಇಷ್ಟೇ ಅಂಕಗಳು ಬರುತ್ತವೆ ಎಂದು ಊಹಿಸುವುದೆಂದರೆ ಅದೊಂದು ರೀತಿ ಅವರ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುವ ಪ್ರಕ್ರಿಯೆಯಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.

ಇಲ್ಲಿಯ ಸ್ವರ್ಣ ಪ್ಯಾರಡೈಸ್ ಹೋಟೆಲ್ ನಲ್ಲಿ ಭಾನುವಾರ ಲಕ್ಷ್ಯ 2.0 ಪ್ರಿಡಿಕ್ಟ್ ಆ್ಯಂಡ್ ವಿನ್ (ಊಹಿಸಿ/ ಗೆಲ್ಲಿ) ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ವಿಜೇತ 25 ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವುದೆಂದರೆ ಅದು ತಪಸ್ಸು ಇದ್ದಂತೆ. ಅಂತಹ ಪ್ರತಿಭಾವಂತರ ಕಲ್ಪನಾ ಶಕ್ತಿ, ಆತ್ಮವಿಶ್ವಾಸ ಪರೀಕ್ಷಿಸುವ ಲಕ್ಷ್ಯ ಎಂಬ ಕಾರ್ಯಕ್ರಮ ಸಾಧನೆ ಮಾಡುವವರಿಗೆ ಪ್ರೋತ್ಸಾಹ ನೀಡುತ್ತದೆ ಎಂದರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಾಲ್ಕು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಮಯವನ್ನು ಗೌರವಿಸಿದರೆ ಅದು ನಿಮ್ಮನ್ನು ಗೌರವಿಸುತ್ತದೆ. ಯಾವುದೇ ಕಾರಣಕ್ಕೂ ಹಳಹಳಿಸಬಾರದು. ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ದಾರಿ. ಹಾಗಾಗಿ ಪ್ರತಿಯೊಬ್ಬರು ಅರ್ಹತೆಯನ್ನು ಗಳಿಸಿಕೊಳ್ಳಬೇಕು ಎಂದರು.

ವೃತ್ತಿ ಜೀವನಕ್ಕೆ ಕಾಲಿಡುವ ಮುನ್ನ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ನಿಮಗೆ ಸಹಾಯ ಮಾಡಿದವರಿಗೆ ಒಂದು ಥ್ಯಾಂಕ್ಸ್ ಹೇಳಿದರೆ ಸಾಕು ಅದೇ ದೊಡ್ಡ ಗೌರವ. ಪದವಿ ಓದುವಾಗಲೇ ಮುಂದೆ ಏನಾಗಬೇಕು ಎಂಬುದರ ಸ್ಪಷ್ಟ ಕಲ್ಪನೆ ಇರಬೇಕು. ಅಂದರೆ ಗುರಿ ಸಾಧನೆ ಸುಲಭವಾಗುತ್ತದೆ ಎಂದರು.

ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ನಿರಂತರ ಪರಿಶ್ರಮ ವಹಿಸಿದರೆ ಖಂಡಿತ ಸಾಧನೆ ಸಾಧ್ಯವಾಗುತ್ತದೆ. ಲಕ್ಷ್ಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ಊಹೆಗಳನ್ನು ಮಾಡಿ ಅದರಂತೆ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಕಾರ್ಯ ಅದ್ಭುತವಾದದ್ದು, ಇದಕ್ಕೆ ಪಾಲಕರ ಬೆಂಬಲವೂ ಸಾಕಷ್ಟಿದೆ ಎಂದರು.

ಮಕ್ಕಳು ಬಹುದೊಡ್ಡ ಕನಸು ಇಟ್ಟುಕೊಳ್ಳಬೇಕು. ಅದಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಟಿಸಿಕೊಂಡು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

5000 ಮಕ್ಕಳು: ರಾಜ್ಯದ ವಿವಿಧ ಕಡೆಗಳಿಂದ ಈ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಎಸ್ಎಸ್ಎಲ್ಸಿ ಮಕ್ಕಳು ಪಾಲ್ಗೊಂಡಿದ್ದರು. 25 ವಿದ್ಯಾರ್ಥಿಗಳು ಪರೀಕ್ಷೆಗೆ ಮುಂಚೆಯೇ ಇಂತಿಷ್ಟು ಅಂಕ ತಮಗೆ ಬರುತ್ತದೆ ಎಂದು ನಿಖರವಾಗಿ ಹೇಳಿದ್ದರು. ಫಲಿತಾಂಶ ಬಂದ ನಂತರ ಅವರ ಊಹೆ ಸರಿಯಾಗಿತ್ತು. ಅಂತಹ ಪ್ರತಿಭಾನ್ವಿತರಿಗೆ ಲ್ಯಾಪ್ ಟಾಪ್, ಕಂಪ್ಯೂಟರ್ ಸೇರಿ ವಿವಿಧ ಬಹುಮಾನಗಳನ್ನು ವಿತರಣೆ ಮಾಡಲಾಯಿತು.


ಟೆಕ್ ಸ್ಟೋರ್ ಸ್ಥಾಪಕ ಆನಂದ ಬೈದ್ ಅವರು ಕಾರ್ಯಕ್ರಮ ರೂಪಿಸಿದ್ದರು. ಸ್ವರ್ಣ ಸಂಸ್ಥೆ ಪ್ರಾಯೋಜಕತ್ವ ವಹಿಸಿಕೊಂಡಿತ್ತು.
ಕೆಇ ಬೋರ್ಡ್ಸ್ ಇಂಗ್ಲಿಷ್ ಶಾಲೆಯ ಸಮರ್ಥ ಉಮರ್ಜೀ, ಚಿನ್ಮಯ ಶಾಲೆಯ ಧನ್ವಿ ನಾಯಕ, ವೇದಾ ಸಮುದ್ಯತಾ, ಸುಮೇದ ಪುರಾಣಿಕ ಹಾಗೂ ಸಾನಿಕಾ ಕೆ. ಅವರಿಗೆ ಟಾಪ್ ಐದು ಬಹುಮಾನಗಳು ಲಭಿಸಿದವು.

ಲಕ್ಷ್ಯ ಸಂಘಟನಾ ತಂಡದಲ್ಲಿ ಲಕ್ಷಿತಾ ಬೈದ್, ವಿಶಾಖಾ ಕುಲಕರ್ಣಿ, ಪ್ರತಿಭಾ ಚೋಪ್ರಾ ಮತ್ತು ಕೇಶವ ಚಿಕ್ಕಮಠ ಕಾರ್ಯ ನಿರ್ವಹಿಸಿದ್ದರು.

Share This Article

ಮಳೆಗಾಲದಲ್ಲಿ ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಬಳಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಿ! rainy season

rainy season: ಮಳೆಗಾಲದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಇತರ ಶಿಲೀಂಧ್ರ ಸೋಂಕುಗಳು ಸುಲಭವಾಗಿ ಹರಡುತ್ತವೆ. ಮಳೆಗಾಲದಲ್ಲಿ…

ಸಣ್ಣ ತೂಕ ಎತ್ತಿದರೂ ಸುಸ್ತಾಗುತ್ತಾ? ಹಾಗಾದರೆ ಈ ಆಹಾರಗಳಿಂದ ನರ ದೌರ್ಬಲ್ಯ ನಿವಾರಿಸಿ… Health Tips

Health Tips : ದೇಹವು ಸರಿಯಾದ ಪೋಷಕಾಂಶಗಳನ್ನು ಪಡೆಯದಿದ್ದರೆ, ಅನೇಕ ರೋಗಗಳಿಗೆ ತುತ್ತಾಗುತ್ತದೆ. ನಿಮ್ಮಲ್ಲಿರುವ ಕೆಟ್ಟ…