ಪ್ರಧಾನಿ ಮೋದಿ ದೇಶಭಕ್ತಿಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ದೇಶಭಕ್ತಿಯನ್ನು ಯಾರಿಂದಲೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಧಾನಿ ಅವರನ್ನು ಕೊಂಡಾಡಿದ್ದಾರೆ.

ಬೈಲಹೊಂಗಲ ಪಟ್ಟಣದಲ್ಲಿ ನಡೆದ ಜಯ ಕರ್ನಾಟಕ ಸೇನೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಹೆಬ್ಬಾಳ್ಕರ್ ಅವರು ರಾಜಕಾರಣದಲ್ಲಿ ಕಳ್ಳರು, ಸುಳ್ಳರು ಹಾಗೂ ಮೋಸಗಾರರು ಇರುತ್ತಾರೆಂದು ಇವತ್ತಿನ ಯುವ ಸಮುದಾಯಕ್ಕೆ ಹಿರಿಯರು ಹೇಳುತ್ತಾರೆ. ಅದು ಸುಳ್ಳಲ್ಲ ಅವರದು ಒಂದು ವರ್ಗ ಇರುತ್ತದೆ. ಆದರೆ, ಎಲ್ಲ ರಾಜಕಾರಣಿಗಳು ಆ ಗುಂಪಿನಲ್ಲಿ ಸೇರಲು ಸಾಧ್ಯವಿಲ್ಲ ಎಂದು ಹೇಳಿದರು.

ಸಮಾಜಮುಖಿಯಾಗಿ, ಸಮಾಜದ ಪರವಾಗಿ, ಸಮಾಜಕೋಸ್ಕರ ಹೋರಾಟ ಮಾಡುವಂತಹ ಬಹಳಷ್ಟು ತ್ಯಾಗಮಯಿ ರಾಜಕಾರಣಿಗಳು ಕೂಡ ಇದ್ದಾರೆ. ಇಂತಹ ರಾಜಕಾರಣಿಗಳು ಇರುವುದಕ್ಕೆ ಬಡವರಿಗೆ ಹಾಗೂ ರೈತರಿಗೆ ಅಲ್ಪ ಸ್ವಲ್ಪ ನ್ಯಾಯ ಸಿಗುತ್ತಿದೆ ಎಂದರು.

ಇವತ್ತಿನ ನಮ್ಮ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ರೈತರಿಗಾಗಿ ಸುಮಾರು 50 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮಾಡಿದ ಕಾರ್ಯಕ್ರಮಗಳಿಂದ ಯಾರಿಗೂ ಮೋಸ ಆಗಿಲ್ಲ. ಮೋದಿ ಅವರ ದೇಶ ಭಕ್ತಿಯನ್ನು ಯಾರು ಪ್ರಶ್ನೆ ಮಾಡುವಂತಿಲ್ಲ ಎಂದು ಪಕ್ಷಾತೀತವಾಗಿ ಎಲ್ಲ ನಾಯಕರನ್ನು ಕೊಂಡಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

Laxmi Hebbalkar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಫೆಬ್ರವರಿ 24, 2019

Laxmi Hebbalkar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಫೆಬ್ರವರಿ 24, 2019

Laxmi Hebbalkar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಫೆಬ್ರವರಿ 24, 2019