ಇಂದು ಆಚರಿಸಬೇಕಿದ್ದ ಹುಟ್ಟುಹಬ್ಬವನ್ನು ಇನ್ಮುಂದೆ ಮೇ.12ರಂದು ಆಚರಿಸುವೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇಕೆ?

ಬೆಳಗಾವಿ: ಇನ್ನು ಮುಂದೆ ಹುಟ್ಟಿದ ದಿನವಾದ ಫೆ.14ರಂದು ನನ್ನ ಬರ್ತ್​ಡೇ ಆಚರಣೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ಮೇ 12ರಂದು ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತೇನೆ ಎಂದು ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿರುವ ಶಾಸಕಿ ಹೆಬ್ಬಾಳ್ಕರ್ 2018, ಮೇ 12ರ ಚುನಾವಣೆಯ ದಿನಂದಂದು ನನಗೆ ನೀವೆಲ್ಲ ಮತದಾನ ಮಾಡಿ ಪ್ರಚಂಡ ಗೆಲವು ದಾಖಲಿಸಿಕೊಟ್ಟಿದ್ದೀರಾ, ಆ ದಿನವನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಹೀಗಾಗಿ ಇನ್ನು ಮುಂದೆ ಮೇ 12 ರಂದೇ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆಯ ಮತದಾನದ ದಿನವನ್ನು ಹುಟ್ಟಿದ ದಿನ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಮೇ.12ನ್ನು ಮತದಾರರು ನೀಡಿದ ಮರುಜನ್ಮ ಎಂದು ಭಾವಿಸಿ, ಅವತ್ತು ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ. ಹಾಗೇ ಇಂದು ತಮ್ಮ ಹುಟ್ಟುಹಬ್ಬ ಆಚರಣೆ ಮಾಡದಂತೆ ಬೆಂಬಲಿಗರ ಬಳಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹೆಬ್ಬಾಳ್ಕರ್ ಅವರ ಫೇಸ್​ಬುಕ್​ ಪೋಸ್ಟ್​ ಹೀಗಿದೆ..
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಹಾ ಜನತೆಯು ನನಗೆ  2018 ರ ಮೇ 12 ರಂದು ಆಶೀರ್ವಾದವನ್ನು ಮಾಡಿ ರಾಜಕೀಯ ರಂಗದಲ್ಲಿ ಮರು ಜನ್ಮವನ್ನು ನೀಡಿ ಪ್ರಚಂಡ ಬಹುಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಆಯ್ಕೆಯನ್ನು ಮಾಡಿದ್ದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ದಿನವಾಗಿದೆ. ಆದ್ದರಿಂದ ಫೆಬ್ರವರಿ 14 ರ ಬದಲಾಗಿ ಮೇ 12 ಅದೇ ದಿನ ಅರ್ಥಪೂರ್ಣವಾಗಿ ನನ್ನ ಹುಟ್ಟು ಹಬ್ಬವನ್ನು ಕ್ಷೇತ್ರದ ಜನತೆಯ ಸಮ್ಮುಖದಲ್ಲಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ..! ಧನ್ಯವಾದಗಳೊಂದಿಗೆ

ನಿಮ್ಮ ಮನೆ ಮಗಳು

ಲಕ್ಷ್ಮೀ ಹೆಬ್ಬಾಳಕರ್​​..

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಹಾ ಜನತೆಯು ನನಗೆ 2018 ರ ಮೇ 12 ರಂದು ಆಶೀರ್ವಾದವನ್ನು ಮಾಡಿ ರಾಜಕೀಯ ರಂಗದಲ್ಲಿ ಮರು ಜನ್ಮವನ್ನು ನೀಡಿ ಪ್ರಚಂಡ ಬಹುಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಆಯ್ಕೆಯನ್ನು ಮಾಡಿದ್ದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ದಿನವಾಗಿದೆ, ಆದ್ದರಿಂದ ಫೆಬ್ರವರಿ 14 ರ ಬದಲಾಗಿ ಮೇ 12 ಅದೇ ದಿನ ಅರ್ಥಪೂರ್ಣವಾಗಿ ನನ್ನ ಹುಟ್ಟು ಹಬ್ಬವನ್ನು ಕ್ಷೇತ್ರದ ಜನತೆಯ ಸಮ್ಮುಖದಲ್ಲಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ..! ಧನ್ಯವಾದಗಳೊಂದಿಗೆ ನಿಮ್ಮ ಮನೆ ಮಗಳು ಲಕ್ಷ್ಮೀ ಹೆಬ್ಬಾಳಕರ..

Laxmi Hebbalkar ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಫೆಬ್ರವರಿ 13, 2019