More

    ತ್ಯಾಜ್ಯಮುಕ್ತ ಪಟ್ಟಣವಾಗಿಸುವತ್ತ ಪುರಸಭೆ ಸಿಬ್ಬಂದಿ ಚಿತ್ತ

    ವಿಜಯವಾಣಿ ಸುದ್ದಿಜಾಲ ಲಕ್ಷ್ಮೇಶ್ವರ

    ಸ್ವಚ್ಛ ಭಾರತ ಯೋಜನೆಯಡಿ 2019ನೇ ಸಾಲಿನಲ್ಲಿ ಕೈಗೊಂಡ ಸ್ವಚ್ಛ ಸರ್ವೆಕ್ಷಣಾ ಅಭಿಯಾನದಲ್ಲಿ ಲಕ್ಷ್ಮೇಶ್ವರ ಪುರಸಭೆ ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಮತ್ತು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಸ್ವಚ್ಛತಾ ಅಭಿಯಾನದಲ್ಲಿ ಸೈ ಎನಿಸಿಕೊಂಡಿದೆ.

    ದೇಶ್ಯಾದ್ಯಂತ ಸ್ವಚ್ಛ ಭಾರತ ಯೋಜನೆಯಡಿ ಜನಸಂಖ್ಯಾ ಆಧಾರದ ಮೇಲೆ ಪಟ್ಟಣ, ನಗರ ಪ್ರದೇಶಗಳನ್ನು ವಿಂಗಡಿಸಿ ಕಾರ್ಯಕ್ಷಮತೆ ಪರಿಶೀಲಿಸಿದ ಕೇಂದ್ರ ಸರ್ಕಾರ ಫಲಿತಾಂಶ ಘೊಷಿಸಿದೆ. ಇದರಲ್ಲಿ 25 ರಿಂದ 50 ಸಾವಿರ ಜನಸಂಖ್ಯೆ ಹೊಂದಿದ ಪಟ್ಟಣ ಎಂದು ಪರಿಗಣಿಸಿ 2019ನೇ ಸಾಲಿನ 2 ತ್ರೈಮಾಸಿಕದ ಪ್ರಗತಿಯಲ್ಲಿ ರಾಷ್ಟ್ರಮಟ್ಟದಲ್ಲಿ 748ನೇ ಸ್ಥಾನ ಮತ್ತು ರಾಜ್ಯಮಟ್ಟದಲ್ಲಿ 4ನೇ ಪಡೆದಿದೆ.

    ಪ್ರಸಕ್ತ 2020ನೇ ಸಾಲಿನಲ್ಲಿ ಸ್ಥಳೀಯ ಪುರಸಭೆಯು ಬೃಹತ್ ಜನಸಂಖ್ಯೆ ಹೊಂದಿರುವ ಪಟ್ಟಣವನ್ನು ತ್ಯಾಜ್ಯಮುಕ್ತ ಮಾಡುವ ನಿಟ್ಟಿನಲ್ಲಿ ಇಲ್ಲಿನ ಸಿಬ್ಬಂದಿ, ಪೌರಕಾರ್ವಿುಕರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಕಸ ವಿಲೇವಾರಿಗೆ ಸಂಬಂಧಪಟ್ಟಂತೆ ಇಲ್ಲಿನ ಜನತೆಯೂ ಅತ್ಯಂತ ಪ್ರಜ್ಞಾಪೂರ್ವಕವಾಗಿ ಕಸದ ವಾಹನ ಬರುವವರೆಗೂ ಕಾಯ್ದು ಕಸದ ವಾಹನದಲ್ಲಿಯೇ ಹಾಕುವ ಮೂಲಕ ಈ ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ. ಘನತ್ಯಾಜ್ಯಗಳ ನಿರ್ವಹಣೆ, ಸಂಸ್ಕರಣೆ, ವಿಲೇವಾರಿಗಾಗಿ ವೈಜ್ಞಾನಿಕ ಕ್ರಮಕೈಗೊಳ್ಳುವ ಮೂಲಕ ಇಲ್ಲಿನ ಸಿಬ್ಬಂದಿ ಪಟ್ಟಣದ ಸ್ವಚ್ಛತೆಗೆ ಸವಾಲಾಗಿದ್ದ ಪ್ಲಾಸ್ಟಿಕ್, ಟೆಟ್ರಾ ಪ್ಯಾಕ್, ಬಾಟಲಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅವುಗಳನ್ನು ಬೇಲ್ ಮಾದರಿಯಲ್ಲಿ ಪ್ಯಾಕ್ ಮಾಡುತ್ತಿದ್ದಾರೆ. ಇದರಿಂದ ಕಸದ ಸಮಸ್ಯೆಗೆ ಕೊಂಚ ಪರಿಹಾರ ಮತ್ತು ಒಂದಿಷ್ಟು ಆದಾಯ ತಂದುಕೊಳ್ಳುವ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

    ಬೇರೆ ಬೇರೆ ಮಹಾನಗರ, ಪಟ್ಟಣ ಪ್ರದೇಶಗಳಿಗೆ ಹೋಲಿಸಿದರೆ ನಮ್ಮೂರ ಪುರಸಭೆಯವರು ಪಟ್ಟಣದ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕಾಗಿ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ. ಇದರಿಂದ 2019 ನೇ ಸಾಲಿನಲ್ಲಿ ರಾಜ್ಯ ಮಟ್ಟದಲ್ಲಿ 4 ನೇ ಸ್ಥಾನ ಪಡೆದಿರುವುದು ಹೆಮ್ಮೆಯಾಗಿದೆ. ಜನತೆ ಇನ್ನಷ್ಟು ಪುರಸಭೆಯವರ ಕಾರ್ಯಕ್ಕೆ ಸಹಕಾರ ನೀಡಬೇಕು.

    | ಬಿ.ಎಸ್. ಬಾಳೇಶ್ವರಮಠ ವಕೀಲ ಲಕ್ಷೆ್ಮೕಶ್ವರ

    ಪಟ್ಟಣ ಬೆಳೆದಂತೆ ಇರುವ ಸಿಬ್ಬಂದಿಯಷ್ಟರಲ್ಲಿಯೇ ಸ್ವಚ್ಛತೆ ಕಾರ್ಯ ಮಾಡಲಾಗುತ್ತಿದೆ. ಅದಕ್ಕಾಗಿ ನಿತ್ಯ ಪುರಸಭೆಯ ಕಸದ ವಾಹನಗಳು, ತಳ್ಳುವ ಗಾಡಿಗಳು ಮನೆ ಮನೆಗೆ ಬರುತ್ತಿವೆ. ಕಸ ವಿಂಗಡಣೆ ಮಾಡಿ ಕೊಡಲು ಎಲ್ಲ ಮನೆಗೆ ಉಚಿತ ಬಕೆಟ್​ಗಳನ್ನು ನೀಡಲಾಗಿದೆ. ಜನತೆ, ವ್ಯಾಪಾರಸ್ಥರಿಗೆ ಸ್ವಚ್ಛತೆ ಕುರಿತು ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಇದು ಫಲಪ್ರದವಾಗಿದ್ದು ಪುರಸಭೆಯ ಸ್ವಚ್ಛತಾ ಕಾರ್ಯಕ್ಕೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಅಂಕ ಬಂದಿದೆ. ಪಟ್ಟಣದ ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ಪುರಸಭೆಯ ಕಾರ್ಯಕ್ಕೆ ಜನತೆ ಸಹಕರಿಸಬೇಕು.

    | ಆನಂದ ಬದಿ ಮಂಜು ಮುದಗಲ್ ಪುರಸಭೆ ಪರಿಸರ ಇಂಜಿನಿಯರರು,

    ಬಸವಣ್ಣೆಪ್ಪ ನಂದೆಣ್ಣವರ

    ಪೌರ ಕಾರ್ವಿುಕ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts