Friday, 16th November 2018  

Vijayavani

Breaking News

ಕೆರೆಗೆ ವಿಷಪ್ರಾಸನ: 35 ಲಕ್ಷ ಮೌಲ್ಯದ ಸೀಗಡಿ ಮೀನಿನ ಕೃಷಿ ನಾಶ

Tuesday, 10.07.2018, 8:36 AM       No Comments

ಉಡುಪಿ: ಸೀಗಡಿ ಕೃಷಿ ಕೆರೆಗೆ ಕಿಡಿಗೇಡಿಗಳು ವಿಷಪ್ರಾಸನ ಮಾಡಿದ್ದು ಸುಮಾರು 35 ಲಕ್ಷ ರೂ. ಮೌಲ್ಯದ ಸೀಗಡಿ ಮೀನಿನ ಕೃಷಿ ನಾಶವಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಸಮೀಪ ಘಟನೆ ಸಂಭವಿಸಿದೆ. ಬಂಟ್ವಾಡಿ ನರಸಿಂಹ ಎಂಬುವರಿಗೆ ಸೇರಿದ ಸೀಗಡಿ ಕೃಷಿ ಕೆರೆಗೆ 20 ಲೀಟರ್​ ವಿಷವನ್ನು ಸೇರಿಸಿದ್ದಾರೆ.

ಕುಂದಾಪುರದ ಗಂಗೊಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top