26.7 C
Bengaluru
Sunday, January 19, 2020

ಪ್ರತಿ ಬೇಸಿಗೆಯಲ್ಲಿ ನೆನಪಾಗುತ್ತೆ ಕೆರೆಗಳು

Latest News

ಪಿಒಕೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಪಾಕಿಸ್ತಾನ ಸಿದ್ಧವಿದೆ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

ಇಸ್ಲಮಾಬಾದ್​: ಜನರ ನಿರ್ಧಾರಕ್ಕೆ ಬಿಡೋಣ ಅವರು ಪಾಕಿಸ್ತಾನದ ಭಾಗವಾಗಿರಲು ನಿರ್ಧರಿಸುತ್ತಾರಾ ಅಥವಾ ಸ್ವತಂತ್ರವಾಗಿರಲು ಬಯಸುತ್ತಾರಾ ಎಂಬುದನ್ನು ತಿಳಿಯಲು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಜನಾಭಿಪ್ರಾಯ...

ಪ್ರಧಾನಿ ಮೋದಿ ಟ್ವೀಟನ್ನು ಯಥಾವತ್ತಾಗಿ ಕಾಪಿ ಮಾಡಿ ಟ್ರೋಲ್​ಗೆ ದಾಳಕ್ಕೆ ಸಿಲುಕಿದ ನಟಿ ಊರ್ವಶಿ ರೌಟೇಲಾ!

ಮುಂಬೈ: ಶನಿವಾರ ಸಂಜೆ ಕಾರು ಅಪಘಾತದಲ್ಲಿ ಗಾಯಗೊಂಡ ಬಾಲಿವುಡ್​ ಹಿರಿಯ ನಟಿ ಶಬಾನಾ ಅಜ್ಮಿ ಅವರು ಬೇಗ ಗುಣಮುಖರಾಗಲೆಂದು ಟ್ವೀಟ್​ ಮಾಡಿ ನಟಿ...

ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಬಿಡದ ಆರೋಪ: ಉ. ಪ್ರದೇಶ ಪೊಲೀಸರ ವಿರುದ್ಧ ಮಾಜಿ ಐಎಎಸ್​ ಅಧಿಕಾರಿ ಗರಂ

ಪ್ರಯಾಗರಾಜ್​: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯನ್ನು ಖಂಡಿಸಿ ಐಎಎಸ್​ ಹುದ್ದೆಗೆ ರಾಜೀನಾಮೆ ನೀಡಿದ್ದ ಕೇರಳ ಮೂಲದ ಮಾಜಿ ಐಎಎಸ್​...

ಉಗರಗೋಳ: ಯಲ್ಲಮ್ಮನಗುಡ್ಡ ಅಭಿವೃದ್ಧಿಗೆ ಪ್ರಯತ್ನ

ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಶಾಸಕ ಆನಂದ ಮಾಮನಿ ಭರವಸೆ ನೀಡಿದ್ದಾರೆ. ತಮ್ಮ ಜನ್ಮದಿನದ ಅಂಗವಾಗಿ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ...

ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ

ಬಾಗಲಕೋಟೆ: ಜಿಲ್ಲಾದ್ಯಂತ ನಾಲ್ಕು ದಿನ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಭಾನುವಾರ ಚಾಲನೆ...

<<ಅಭಿವೃದ್ಧಿಯೇ ಆಗದ ನಗರದ ಪ್ರಮುಖ ಜಲಮೂಲಗಳು  * ನೀರಿಗೆ ಸಮಸ್ಯೆಯಾದಾಗ ಮಾತ್ರ ಕೆರೆ ಅಭಿವೃದ್ಧಿಯ ಮಾತು>> 

ಭರತ್ ಶೆಟ್ಟಿಗಾರ್ ಮಂಗಳೂರು
ಗುಜ್ಜರಕೆರೆ, ಎಮ್ಮೆಕೆರೆ, ಅರೆಕರೆ, ಓಣಿಕೆರೆ, ತಾವರೆ ಕೆರೆ, ಮೊಯ್ಲಿ ಕೆರೆ, ಕಾವೂರು ಕೆರೆ, ಪಡೀಲ್ ಬೈರಾಡಿ ಕೆರೆ…. ಇವೆಲ್ಲ ಒಂದು ಕಾಲದಲ್ಲಿ ಕುಡಿಯುವ ನೀರಿನ ಮತ್ತು ನೀರಿನ ಇತರ ಬೇಡಿಕೆ ಪೂರೈಸಿದ ಮಂಗಳೂರಿನ ಪ್ರಮುಖ ಕೆರೆಗಳಾಗಿವೆ.
ಆದರೆ ಇಂದು ನಗರ ಬೆಳೆದಂತೆ ಇವುಗಳಲ್ಲಿ ಹೆಚ್ಚಿನ ಕೆರೆಗಳು ಮಾಯವಾಗಿದ್ದು, ಹೆಸರು ಮಾತ್ರ ಉಳಿದಿವೆ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾದಾಗ ಮಾತ್ರ ಜನಪ್ರತಿನಿಧಿಗಳ ಬಾಯಲ್ಲಿ ಕೆರೆ ಅಭಿವೃದ್ಧಿಯ ಮಾತು ಕೇಳಿಬರುತ್ತದೆ.
ಎರಡು ವರ್ಷದ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದಾಗ ಸ್ಥಳೀಯವಾಗಿರುವ ನೀರಿನ ಮೂಲ ಅಭಿವೃದ್ಧಿ ಬಗ್ಗೆ ಚಿಂತನೆ ನಡೆದಿತ್ತು. ಈ ಮೂಲಗಳ ಉಪಯೋಗ ಕುರಿತು ಹಾಗೂ ಅವುಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡೆದಿತ್ತು. ಅದು ಅಂದಿಗೆ ಮಾತ್ರ ಸೀಮಿತವಾಗಿತ್ತು. ಕಳೆದ ವರ್ಷ ಬೇಸಿಗೆಯಲ್ಲಿ ಉತ್ತಮ ಮಳೆಯಾಗಿ ತುಂಬೆಯಲ್ಲಿ ನೀರು ಸಂಗ್ರಹ ಹೆಚ್ಚಾಗಿದ್ದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿಲ್ಲ. ಅದ್ದರಿಂದ ಕೆರೆಗಳ ಅಭಿವೃದ್ಧಿ ವಿಚಾರ ಮರೆತೇ ಹೋಗಿತ್ತು. ಈ ಬಾರಿ ಮತ್ತೆ ನಗರದಲ್ಲಿ ಕುಡಿಯುವ ನೀರಿಗೆ ವಿಪರೀತ ಸಮಸ್ಯೆಯಾಗಿದ್ದು, ನಗರದಲ್ಲಿರುವ ಬಾವಿ, ಹಳೇ ಬೋರ್‌ವೆಲ್‌ಗಳ ದುರಸ್ತಿ, ಕೆರೆಗಳ ಅಭಿವೃದ್ಧಿಗೊಳಿಸುವ ಮಾತು ಜನಪ್ರತಿನಿಧಿಗಳಿಂದ ಕೇಳಿಬರುತ್ತಿದೆ.

ಅಂತರ್ಜಲವೃದ್ಧಿಗೂ ಸಹಕಾರಿ:  ನಗರದಲ್ಲಿರುವ ಕೆರೆಗಳು ನೀರಿನ ಮೂಲ ಮಾತ್ರವಲ್ಲದೆ, ಅಂತರ್ಜಲವೃದ್ಧಿಗೂ ಸಹಕಾರಿಯಾಗಿತ್ತು. ಹತ್ತಿರದ ಬಾವಿಗಳಿಗೆ ನೀರಿನ ಒಸರಿನ ಮೂಲವೂ ಆಗಿತ್ತು. ಆದರೆ ಇಂದು ಹೂಳು ತೆಗೆಯದೆ, ಒತ್ತುವರಿಯಾಗಿ, ತ್ಯಾಜ್ಯ ಗುಂಡಿಗಳಾಗಿ ಈ ಕೆರೆಗಳು ಮಾರ್ಪಾಡಾಗಿದ್ದು, ಅಂತರ್ಜಲ ರಕ್ಷಣೆ ಕೇವಲ ಕನಸಾಗಿ ಉಳಿದಿದೆ. ನಗರದಲ್ಲಿರುವ ಕೆರೆ ಅಭಿವೃದ್ಧಿಪಡಿಸಿದರೆ ತುಂಬೆಯ ನೀರಿನ ಜತೆಗೆ ನಗರಕ್ಕೆ ಪ್ರತ್ಯೇಕ ಜಲಮೂಲವೇ ಲಭಿಸಿದಂತಾಗುತ್ತದೆ.

ಬೈರಾಡಿ ಕೆರೆ ಮಾತ್ರ ಅಭಿವೃದ್ಧಿ:  ನಗರದಲ್ಲಿರುವ ಕೆರೆಗಳ ಪೈಕಿ ಬೈರಾಡಿ ಕೆರೆ ಮಾತ್ರ ಅಭಿವೃದ್ಧಿಯಾಗುತ್ತಿದೆ. ಇದರ ಅಭಿವೃದ್ಧಿಗೆಂದು ಸುಮಾರು 3.30 ಕೋಟಿ ರೂ. ಮೊತ್ತ ಮೀಸಲಿಡಲಾಗಿದೆ. ಈ ಪೈಕಿ ಸಣ್ಣ ನೀರಾವರಿ ಇಲಾಖೆ 79 ಲಕ್ಷ ರೂ. ಹಾಗೂ ಮುಡಾ ಕೆರೆ ಅಭಿವೃದ್ಧಿ ನಿಧಿಯಿಂದ 2.50 ಕೋಟಿ ರೂ. ಒದಗಿಸಿದೆ. ಕೆರೆಗೆ ಎರಡು ಕಡೆ ಮೆಟ್ಟಿಲು ನಿರ್ಮಾಣ ಪ್ರಥಮ ಹಂತವಾಗಿದ್ದು, ಮುಡಾದಿಂದ ಗಾರ್ಡನ್, ವಾಕಿಂಗ್ ಟ್ರಾೃಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಉಳಿದ ಕೆರೆಗಳು ಅದೇ ಸ್ಥಿಯಲ್ಲಿವೆ. ಗುಜ್ಜರಕೆರೆಯ ಅಭಿವೃದ್ಧಿ ನೆಪದಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ನಗರದ ಅತಿ ದೊಡ್ಡ ಕೆರೆಯಾಗಿರುವ 8.20 ಎಕರೆ ವಿಸ್ತೀರ್ಣ ಹೊಂದಿರುವ ಕಾವೂರು ಕೆರೆಗೆ ಡ್ರೈನೇಜ್ ನೀರು ಸೇರುತ್ತಿದೆ.

ನಗರದಲ್ಲಿ ಪ್ರಮುಖ ಕೆರೆಗಳು
– ಜಪ್ಪು ಮಾರ್ಕೆಟ್ ಬಳಿಯ ಗುಜ್ಜರಕೆರೆ
– ಮಂಗಳಾದೇವಿ ಬಳಿಯ ಎಮ್ಮೆಕೆರೆ
– ಕಾವೂರು ದೇವಸ್ಥಾನ ಬಳಿಯ ಕಾವೂರು ಕೆರೆ
– ಪಡೀಲ್ ಬಳಿಯ ಬೈರಾಡಿ ಕೆರೆ

ಗುಜ್ಜರ ಕೆರೆ ಅಭಿವೃದ್ಧಿಪಡಿಸಬೇಕು ಎಂದು 2001ರಿಂದ ಹೋರಾಟ ನಡೆಸುತ್ತಿದ್ದೇವೆ. ಆದರೆ ನಮ್ಮ ಕಣ್ಣೊರೆಸುವ ತಂತ್ರ ನಡೆಯುತ್ತಿನೆ ಹೊರತು ಅಭಿವೃದ್ಧಿ ಕಾರ್ಯನಡೆಯುತ್ತಿಲ್ಲ. ಗುಜ್ಜರ ಕೆರೆ ಅಭಿವೃದ್ಧಿ ಮಾಡಿದರೆ, ಇಡೀ ಮಂಗಳೂರಿಗೆ ಗುಜ್ಜರಕೆರೆಯಿಂದ ನೀರು ಕೊಡಬಹುದು. ಅಷ್ಟು ನೀರು ಸಂಗ್ರಹವಾಗುತ್ತದೆ. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಇದು ಸಾಧ್ಯವಾಗುತ್ತಿಲ್ಲ.
ಪಿ.ನೇಮು ಕೊಟ್ಟಾರಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ

ಸಣ್ಣ ನೀರಾವರಿ ಇಲಾಖೆಗೆ ಕಾವೂರು ಕೆರೆ ಮಾತ್ರ ಬರುತ್ತದೆ. ಅದನ್ನು ಸಾರ್ಟ್ ಸಿಟಿಯಲ್ಲಿ ಅಭಿವೃದ್ಧಿಗೊಳಿಸುವ ಕುರಿತು ನಿರ್ಧಾರವಾಗಿದೆ. ಇತ್ತೀಚೆಗೆ ಸ್ಮಾರ್ಟ್‌ಸಿಟಿ ಎಂಡಿಯವರಿಂದ ಪತ್ರ ಬಂದಿದೆ. ಶೀಘ್ರ ಇದರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ನಗರದ ಇತರ ಯಾವುದೇ ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ.
ಗೋಕುಲ್‌ದಾಸ್ ಕಾರ್ಯಪಾಲಕ ಇಂಜಿನಿಯರ್ ಸಣ್ಣ ನೀರಾವರಿ ಇಲಾಖೆ

ವಿಡಿಯೋ ನ್ಯೂಸ್

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...