ಒಡಲೊಳು ಮಲಿನ, ಬಳಲಿದೆ ಮನ

Latest News

ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ

ಚಿಕ್ಕಮಗಳೂರು: ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಸಕಲ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಬಸವನಹಳ್ಳಿ ಶ್ರೀ...

ಕರ್ನಾಟಕದ 250 ಥಿಯೇಟರ್​ಗಳಲ್ಲಿ ದಬಂಗ್ ರಿಲೀಸ್!

ಡಿಸೆಂಬರ್ 20ಕ್ಕೆ ಸಲ್ಮಾನ್ ಖಾನ್ ನಟನೆಯ ‘ದಬಂಗ್ 3’ ಸಿನಿಮಾ ಬಿಡುಗಡೆ ಆಗುತ್ತಿದೆ. ಇಷ್ಟು ದಿನ ಹಿಂದಿ ಭಾಷೆಯಲ್ಲಷ್ಟೇ ಅಬ್ಬರಿಸುತ್ತಿದ್ದ ಸಲ್ಮಾನ್, ಈ...

ಕಾರು-ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ಮದುಮಗ ಸ್ಥಳದಲ್ಲೇ ಸಾವು: ನಾಲ್ವರಿಗೆ ಗಾಯ

ಉತ್ತರಕನ್ನಡ: ಟ್ಯಾಂಕರ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಲ್ಲಿ ಮದುಮಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಲ್ಲಾಪುರ-ಹುಬ್ಬಳ್ಳಿ ರಸ್ತೆಯ ಕೆ.ಮಿಲನ್ ಹೊಟೆಲ್ ಬಳಿ ಭಾನುವಾರ ದುರ್ಘಟನೆ ಸಂಭವಿಸಿದೆ. ಅಫ್ರೋಜ್...

ಬಾಳಾಠಾಕ್ರೆಗೆ ಮೊದಲಬಾರಿಗೆ ಶ್ರದ್ಧಾಂಜಲಿ ಅರ್ಪಿಸಿದ ಕಾಂಗ್ರೆಸ್ ಮತ್ತು ಎನ್​ಸಿಪಿ

ಮುಂಬೈ: ಶಿವಸೇನೆ ಸಂಸ್ಥಾಪಕ ಹಾಗೂ ಪ್ರಖರ ಹಿಂದುತ್ವವಾದಿ ದಿವಂಗತ ಬಾಳಾಠಾಕ್ರೆಗೆ ಕಾಂಗ್ರೆಸ್​ ಹಾಗೂ ಎನ್​ಸಿಪಿ ಮೊದಲಬಾರಿಗೆ ಶ್ರದ್ಧಾಂಜಲಿ ಸಲ್ಲಿಸಿವೆ. ಬಾಳಾಠಾಕ್ರೆ ಅವರ 7 ನೇ...

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆ ಪಕ್ಕಾ? ಕುತೂಹಲಕ್ಕೆ ಕಾರಣವಾಯ್ತು ಅಮಿತ್​ ಷಾ ಮಾತು…

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ಯಾವುದೇ ಆತಂಕ ಬೇಡ. ಅಲ್ಲಿ ಬಿಜೆಪಿ ಶಿವಸೇನೆಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್​...

ನಿರೂಪಣೆ: ಆನಂದ ಅಂಗಡಿ ಹುಬ್ಬಳ್ಳಿ

ಒಂದು ಕಾಲದಲ್ಲಿ ಗೋಕುಲ, ವಿದ್ಯಾನಗರ ಸುತ್ತಲಿನ ಬಡಾವಣೆಗಳ ಪಾಲಿಗೆ ಪ್ರೀತಿ ಪಾತ್ರನಾಗಿದ್ದ ನಾನು, ಇಂದು ಯಾರೊಬ್ಬರಿಗೂ ಬೇಡವಾಗಿದ್ದೇನೆ. ನನ್ನನ್ನು ಆವರಿಸಿರುವ ಚರಂಡಿ ನೀರಿನಿಂದಾಗಿ ಸುತ್ತಲೂ ದುರ್ವಾಸನೆ ಸೂಸುತ್ತಿದ್ದ್ದು, ಎಲ್ಲರೂ ತಾತ್ಸಾರ ಭಾವನೆಯಿಂದ ನೋಡುವಂತಾಗಿದೆ.

ಈ ನನ್ನ ಅಳಲು ಕೇಳಿಯಾದರೂ ನನ್ನ ಗುರುತು ಸಿಗಲಿಲ್ಲವೇ? ನಾನು ಹುಬ್ಬಳ್ಳಿಯ ತೋಳನ ಕೆರೆ. ಆದರೆ, ಜನರಲ್ಲಿ ನನ್ನ ಬಗ್ಗೆ ಮೊದಲಿದ್ದ ಪ್ರೀತಿ ಮರೆಯಾ ಗಿದ್ದು, ಆ ಜಾಗವನ್ನು ಅನುಕಂಪ, ತಾತ್ಸಾರ ಆವರಿಸಿಕೊಂಡಿದೆ ಎನಿಸುತ್ತದೆ.

ಹುಬ್ಬಳ್ಳಿ ರಾಮಲಿಂಗೇಶ್ವರ ನಗರದಲ್ಲಿ ಅಂದಾಜು 39 ಎಕರೆ ವಿಸ್ತೀರ್ಣದಲ್ಲಿ ನಾನು ಹರಡಿಕೊಂಡಿದ್ದು, ನನ್ನನ್ನು ಸುಧಾರಿಸುವ ನೆಪದಲ್ಲಿ ನೀರಿನಂತೆ ಹಣ ಸುರಿಯುತ್ತಿದ್ದಾರೆ. ಆದರೆ, ಇದುವರೆಗೂ ನನ್ನ ಒಡಲನ್ನು ಮೊದಲಿನಂತೆ ಸ್ವಚ್ಛಗೊಳಿಸಲು ಆಗದಿರುವುದು ದುರ್ದೈವದ ಸಂಗತಿ.

ರಾಮಲಿಂಗೇಶ್ವರ ನಗರ, ಬಸವೇಶ್ವರ ನಗರ ಸೇರಿ ಸುತ್ತಲಿನ ಬಡಾವಣೆಗಳ ಚರಂಡಿ ನೀರು ನಿತ್ಯ ಹರಿದು ಬರುವುದು ನನ್ನ ಒಡಲಿನತ್ತ. ಚರಂಡಿ ನೀರಿನಿಂದಾಗಿ ನನ್ನ ಒಡಲು ಸಂಪೂರ್ಣ ಕಲುಷಿತವಾಗಿದ್ದು, ಅಸ್ವಸ್ಥನಾಗಿದ್ದೇನೆ. ಜೀವನದ ಕೊನೆ ದಿನಗಳನ್ನು ಎಣಿಸುತ್ತಿರುವೇನೋ ಏನೋ ಎಂಬ ಭಾವನೆ ಆವರಿಸಿದೆ.

ಈಗಾಗಲೇ ನನ್ನ ಸಹೋದರರಾದ ಉಣಕಲ್ಲ ಕೆರೆ, ಕೆಂಪಗೇರಿ ಕೆರೆ ಸೇರಿ ಹಲವಾರು ಕೆರೆಗಳು ಚರಂಡಿ ನೀರಿನಿಂದಾಗಿ ಅವಸಾನದತ್ತ ತಲುಪಿವೆ. ಕೆಂಪಗೇರಿ ಕೆರೆಯಂತೂ ಜೀವ ಕಳೆದುಕೊಂಡ ಅಸ್ಥಿ ಪಂಜರದಂತಾಗಿದೆ. ಉಣಕಲ್ಲ ಕೆರೆಗೆ ಸೇರುವ ಚರಂಡಿ ನೀರನ್ನು ಶುದ್ಧಗೊಳಿಸಲು ಪ್ರತ್ಯೇಕ ಘಟಕ ಸ್ಥಾಪಿಸಿದ್ದರೂ, ಚರಂಡಿ ನೀರು ಅದರ ಒಡಲು ಸೇರುವುದು ನಿಂತಿಲ್ಲ.

ಸುಧಾರಣೆ ನೆಪದಲ್ಲಿ ನನ್ನ ಸುತ್ತಲೂ ನಿರ್ವಿುಸಿರುವ ಫುಟ್​ಪಾತ್ ಕಿತ್ತುಹೋಗಿದೆ. ನಿತ್ಯ ಬೆಳಗ್ಗೆ ಹಾಗೂ ಸಂಜೆ ವಾಯು ವಿಹಾರಿಗಳು ಬರುತ್ತಾರೆ. ನನ್ನ ಬಗ್ಗೆ ಅನುಕಂಪ ತೋರುತ್ತಲೇ ಪ್ರದಕ್ಷಿಣೆ ಹಾಕುತ್ತಾರೆ. ಚರಂಡಿ ನೀರಿನಿಂದಾಗಿ ಸುತ್ತ ಲಿನ ಪರಿಸರ ಸೊಳ್ಳೆಗಳಿಂದ ಆವೃತ್ತವಾಗಿದೆ. ಹೀಗಾಗಿ ಇಲ್ಲಿನ ಜನ ಸಾಂಕ್ರಾಮಿಕ ರೋಗಗಳ ಆತಂಕದಲ್ಲಿ ದಿನ ದೂಡುವಂತಾಗಿದೆ. ಅವರೆಲ್ಲ ನನ್ನನ್ನೇ ದೂರುತ್ತಾರೆ!

ಕೆಲ ವರ್ಷಗಳ ಹಿಂದೆ ರಾಜ್ಯ ಸರ್ಕಾರದ ವಿಶೇಷ ಅನುದಾನ 100 ಕೋಟಿ ರೂ.ಗಳ ಅಡಿ ಒಂದಿಷ್ಟು ಹಣವನ್ನು ನನ್ನ ಸ್ಥಿತಿಗತಿ ಸುಧಾರಣೆ ನೆಪದಿಂದ ಖರ್ಚು ಮಾಡಿದ್ದರು. ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲ ಕೆರೆಗಳನ್ನು ಸುಧಾರಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದಾಗಲೂ ನನ್ನ ಹೆಸರು ಸೇರಿತ್ತು.

ಇದೀಗ ಮತ್ತೆ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿ ನನ್ನ ಸುತ್ತಲೂ ಪಾರ್ಕ್, ಬಯಲು ರಂಗ ಮಂದಿರ, ಮಕ್ಕಳ ಆಟೋಪಕರಣ ಮತ್ತಿತರ ಕಾರ್ಯಗಳಿಗೆ 15 ಕೋಟಿ ರೂ. ವ್ಯಯಿಸಲು ಮುಂದಾಗಿದೆ. ದಯವಿಟ್ಟು, ಮೊದಲು ಚರಂಡಿ ನೀರು ಸೇರುವುದನ್ನು ನಿಲ್ಲಿಸಿ, ನನ್ನ ಒಡಲು ಸ್ವಚ್ಛಗೊಳಿಸಲು ಆದ್ಯತೆ ನೀಡಿ, ಅದಲ್ಲದಿದ್ದರೆ ನನ್ನೊಡಲು ನಿಮಗೆ ಶಾಪವಾದೀತು!

ಅಂದ ಹಾಗೆ ನನ್ನ ಮಾಲೀಕತ್ವ ಹೊಂದಿರುವ ಸಣ್ಣ ನೀರಾವರಿ ಇಲಾಖೆ, ನನ್ನ ಸುಧಾರಣೆಗೆ ಇದುವರೆಗೆ ಎಳ್ಳಷ್ಟೂ ಕಾಳಜಿ ವಹಿಸಿಲ್ಲ. ಚರಂಡಿ ನೀರು ನನ್ನೊಡಲು ಸೇರದಂತೆ ತಡೆಯಲು ಮಹಾನಗರ ಪಾಲಿಕೆ ಆಸಕ್ತಿ ತೋರುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಸ್ಮಾರ್ಟ್​ಸಿಟಿ ಯೋಜನೆಯಡಿ ಎಷ್ಟೇ ಹಣ ಸುರಿದರೂ ನಾನು ಈಗಿರುವಂತೆಯೇ ಇರುವ ಅಥವಾ, ನಿಷ್ಪ್ರಯೋಜಕವಾಗುವ ಅಪಾಯ ಇದೆ.

ನನ್ನ ಅರಣ್ಯ ರೋದನ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕೇಳಿಸುವುದಿಲ್ಲವೇ? ನನ್ನ ಒಡಲು ಸ್ವಚ್ಛಗೊಳಿಸುವ ನೆಪದಲ್ಲಿ ಇನ್ನೆಷ್ಟು ಹಣ ಸುರಿಯುತ್ತೀರಿ? ಮರುಜನ್ಮ ಪಡೆಯುವ ನನ್ನ ಕನಸನ್ನು ನನಸು ಮಾಡಿಕೊಡಿ.

ಸ್ಮಾರ್ಟ್​ಸಿಟಿ ಯೋಜನೆಯಡಿ ತೋಳನಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮುಂಚೆ ಕೆರೆಗೆ ಚರಂಡಿ ನೀರು ಹರಿದುಬರುವುದನ್ನು ತಡೆಯುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

| ಎಸ್.ಎಚ್. ನರೇಗಲ, ಹು-ಧಾ ಸ್ಮಾರ್ಟ್​ಸಿಟಿ ಕಂಪನಿ ವಿಶೇಷ ಅಧಿಕಾರಿ

ತೋಳನಕೆರೆಗೆ ಸೇರುವ ಚರಂಡಿ ನೀರಿಗೆ ಪ್ರತ್ಯೇಕ ಮಾರ್ಗ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಯವರು ಅನುಮೋದನೆ ನೀಡಿದ್ದು, ಶೀಘ್ರ ಟೆಂಡರ್ ಕರೆಯಲಾ ಗುವುದು. ತೋಳನಕೆರೆಗೆ ಈಗ ಸೇರುತ್ತಿರುವ ಚರಂಡಿ ನೀರು ಹರಿದುಹೋಗಲು ಪ್ರತ್ಯೇಕ ಕೊಳವೆಮಾರ್ಗ ಅಳವಡಿಸಲಾಗುವುದು.

| ಪಿ.ಡಿ. ಗಾಳೆಮ್ಮನವರ, ಪಾಲಿಕೆ ವಲಯ ಸಹಾಯಕ ಆಯುಕ್ತ

- Advertisement -

Stay connected

278,541FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....