‘ಲೈಲಾ ಮಜ್ನು’ಗೆ ಮರುಜನ್ಮ: ರಿ-ರಿಲೀಸ್ ಆಗಿ ಗಳಿಕೆಯಲ್ಲಿ ದಾಖಲೆ ಬರೆದ ಚಿತ್ರ

ಹೊಸ ಸಿನಿಮಾಗಳಿಗೆ ಪ್ರೇಕ್ಷಕರು ಬಾರದಿದ್ದಾಗ ಹಳೆಯ ಹಿಟ್ ಸಿನಿಮಾಗಳನ್ನು ಮತ್ತೊಮ್ಮೆ ರಿ-ರಿಲೀಸ್ ಮಾಡುವುದು ಸಾಮಾನ್ಯ. ಕೆಲ ತಿಂಗಳಲ್ಲಿ ಕನ್ನಡದಲ್ಲೇ ‘ಓಂ’, ‘ಎ’, ‘ಜಾಕಿ’ ಸೇರಿ 15 ಹಳೆಯ ಹಿಟ್ ಕನ್ನಡ ಚಿತ್ರಗಳು ಮರುಬಿಡುಗಡೆಯಾಗಿವೆ. ಆದರೆ, ಒಮ್ಮೆ ಸೋತ ಚಿತ್ರವನ್ನು ಮತ್ತೆ ರಿ-ರಿಲೀಸ್ ಮಾಡುವುದು ಅಪರೂಪದಲ್ಲೇ ಅಪರೂ. ಅಂತಹ ಒಂದು ಘಟನೆಗೆ ಇದೀಗ ಬಾಲಿವುಡ್ ಸಾಕ್ಷಿಯಾಗಿದೆ. ವಿಶೇಷ ಅಂದರೆ, ಆ ಮೂಲಕ ಕೊಂಚ ಮಟ್ಟಿಗೆ ಯಶಸ್ಸನ್ನೂ ಗಳಿಸಿದೆ. ಹೌದು, ಸಾಜಿದ್ ಅಲಿ ನಿರ್ದೇಶನದಲ್ಲಿ ಅವಿನಾಶ್ ತಿವಾರಿ ಮತ್ತು ‘ಅನಿಮಲ್’ ಸುಂದರಿ ತೃಪ್ತಿ ದಿಮ್ರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ‘ಲೈಲಾ ಮಜ್ನು’ ಸಿನಿಮಾ 2018ರಲ್ಲಿ ರಿಲೀಸ್ ಆಗಿತ್ತು. ಆದರೆ, ಅದೇ ಸಮಯದಲ್ಲಿ ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಡೆಬ್ಯೂ ಸಿನಿಮಾ ‘ಧಡಕ್’ ಕೂಡ ತೆರೆಗೆ ಬಂದಿದ್ದ, ಕಾರಣ ‘ಲೈಲಾ ಮಜ್ನು’ ಕೇವಲ 3.25 ಕೋಟಿ ರೂ. ಗಳಿಸಿ ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿತ್ತು. ಇದೀಗ ‘ಅನಿಮಲ್’ ಸಕ್ಸಸ್ ಬಳಿಕ ನ್ಯಾಷನಲ್ ಕ್ರಷ್ ಎನಿಸಿಕೊಂಡಿರುವ ತೃಪ್ತಿ ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅವರ ಈ ಹಠಾತ್ ಸ್ಟಾರ್‌ಡಂನೇ ಬಳಸಿಕೊಳ್ಳಲು ಮುಂದಾಗಿರುವ ‘ಲೈಲಾ ಮಜ್ನು’ ಟೀಂ ಕಳೆದ ಶುಕ್ರವಾರ ಚಿತ್ರವನ್ನು ರಿ-ರಿಲೀಸ್ ಮಾಡಿದೆ. ವಿಶೇಷ ಅಂದರೆ ಕೇವಲ ಮೂರು ದಿನಗಳಲ್ಲೇ ಸಿನಿಮಾ 2 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ. ಆರು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಒಟ್ಟಾರೆ ಕಲೆಕ್ಷನ್‌ಅನ್ನು ರಿ-ರಿಲೀಸ್‌ನಲ್ಲಿ ಮೊದಲ ವಾರವೇ ಮೀರಿಸಲಿದೆ ಎಂಬ ಲೆಕ್ಕಾಚಾರವಿದೆ. ಸದ್ಯ ಈ ಚಿತ್ರದ ಯಶಸ್ಸು ಮತ್ತಷ್ಟು ಹಳೆಯ ್ಲಾಪ್ ಸಿನಿಮಾಗಳ ರಿ-ರಿಲೀಸ್ ಟ್ರೆಂಡ್ ಸೃಷ್ಟಿಸಿದರೂ ಆಶ್ಚರ್ಯವಿಲ್ಲ ಎಂಬ ಮಾತು ಕೇಳಿಬರುತ್ತಿದೆ.- ಏಜೆನ್ಸೀಸ್

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…