17.8 C
Bengaluru
Wednesday, January 22, 2020

ಲೇಡಿ ಪೊಲೀಸರಿಗೆ ಸೀರೆ ಬದಲು ಪ್ಯಾಂಟ್-ಶರ್ಟ್

Latest News

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಿ

ರಟ್ಟಿಹಳ್ಳಿ: ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಂಡರೆ ಎಲ್ಲರ ಮನಸ್ಸು ಗೆಲ್ಲಬಹುದು. ಯಾವುದೇ ವ್ಯಕ್ತಿ ಅಥವಾ ಸಮಾಜದ ವಿರುದ್ಧ ದ್ವೇಷ ಸಾಧಿಸಬಾರದು....

| ಕೀರ್ತಿನಾರಾಯಣ ಸಿ. ಬೆಂಗಳೂರು

ಮಹಿಳಾ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಸಮವಸ್ತ್ರ ಮಾದರಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬಹು ವರ್ಷಗಳ ಬೇಡಿಕೆಯಂತೆ ಖಾಕಿ ಸೀರೆ ಬದಲು ಪ್ಯಾಂಟು-ಶರ್ಟು ಸಮವಸ್ತ್ರ ಧರಿಸುವ ಪದ್ಧತಿಗೆ ಅನುಮತಿ ಕೊಟ್ಟಿದೆ.

ಮಹಿಳಾ ಅಧಿಕಾರಿಗಳು ಇನ್ನುಮುಂದೆ ಖಾಕಿ ಪ್ಯಾಂಟ್- ಶರ್ಟ್, ಬ್ರೌನ್ ಆಕ್ಸ್​ಫರ್ಡ್ ಶೂ, ಬ್ರೌನ್ ಕ್ರಸ್ಟೆಡ್ ಲೆದರ್ ಬೆಲ್ಟ್ ಹಾಗೂ ಪೀಕ್ ಅಥವಾ ಬ್ಲ್ಯೂ ಕ್ಯಾಪ್ ವಿತ್ ಬ್ಯಾಡ್ಜ್ ಧರಿಸಬೇಕು. ಅದೇ ರೀತಿ ಮಹಿಳಾ ಪೇದೆಗಳಿಗೆ ಬ್ಲ್ಯಾಕ್ ಆಕ್ಸ್​ಫರ್ಡ್ ಶೂ ಮತ್ತು ಬ್ಲ್ಯಾಕ್ ಕ್ರಸ್ಟೆಡ್ ಲೆದರ್ ಬೆಲ್ಟ್ ಹಾಗೂ ಬೆರೆಟ್ ಕ್ಯಾಪ್ ವಿತ್ ಬ್ಯಾಡ್ಜ್ ಧರಿಸಲು ಅವಕಾಶ ನೀಡಲಾಗಿದೆ.

ಮೂರು ತಿಂಗಳ ಗರ್ಭಿಣಿ ಅಧಿಕಾರಿ-ಸಿಬ್ಬಂದಿಗೆ ಸಮವಸ್ತ್ರ ಧರಿಸುವ ನಿಯಮದಲ್ಲಿ ವಿನಾಯಿತಿ ಅಗತ್ಯವಿದ್ದಲ್ಲಿ ವೈದ್ಯರ ಪ್ರಮಾಣಪತ್ರ ಸಲ್ಲಿಸಬೇಕು. ಬಳಿಕ ಮಾತೃತ್ವ ರಜೆ ಮೇಲೆ ತೆರಳುವವರೆಗೆ ಬುಷ್ ಶರ್ಟ್-ಪ್ಯಾಂಟ್ ಸಮವಸ್ತ್ರ ಧರಿಸಬಹುದು. ಕರ್ತವ್ಯಕ್ಕೆ ಮರಳಿದ ಮೇಲೆ ನಿಗದಿತ ಮಾದರಿಯ ಸಮವಸ್ತ್ರವನ್ನೇ ಧರಿಸಬೇಕು ಎಂದು ಸೂಚಿಸಲಾಗಿದೆ. ಆಯಾ ಸಿಬ್ಬಂದಿಗೆ ಅನುಕೂಲವಾಗುವಂತೆ ಸಮವಸ್ತ್ರ ಹೊಲಿದು ಕೊಡಲು ಪೊಲೀಸ್ ಕಲ್ಯಾಣ ಕೇಂದ್ರಗಳಿಗೆ ಸೂಚನೆ ಕೊಡಬೇಕು. ಆದೇಶ ಜಾರಿಗೆ ಕೈಗೊಂಡಿರುವ ಕ್ರಮಗಳ ಕುರಿತು ಅಕ್ಟೋಬರ್ ಅಂತ್ಯದ ಒಳಗೆ ಡಿಜಿಪಿ ಕಚೇರಿಗೆ ಕಡ್ಡಾಯವಾಗಿ ವರದಿ ಸಲ್ಲಿಸುವಂತೆ ಎಲ್ಲ ಘಟಕಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ.

ಹಳಬರಿಗೆ ಹೊಸ ಸಮಸ್ಯೆ!

ಪೇದೆ, ಮುಖ್ಯಪೇದೆ ಹಾಗೂ ಎಎಸ್​ಐಗಳು ಸೀರೆ ಉಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈವರೆಗೆ ಸೀರೆ, ಚಪ್ಪಲಿ ತೊಟ್ಟು ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಸಿಬ್ಬಂದಿಗೆ ಈಗ ದಿಢೀರನೆ ಪ್ಯಾಂಟು-ಶರ್ಟು, ಬೂಟು ಧರಿಸಿ ಕೆಲಸಕ್ಕೆ ಬರಬೇಕು ಎಂದರೆ ಕೊಂಚ ಸಮಸ್ಯೆಯಾಗುತ್ತದೆ ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬದಲಾವಣೆಗೆ ಪ್ರಮುಖ ಕಾರಣ

ಕಳ್ಳ-ಕಾಕರನ್ನು ಬೆನ್ನತ್ತಿ ಹಿಡಿಯಲು/ಓಡಲು ಅಸಾಧ್ಯ. ಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿಸುವ ಉದ್ದೇಶ. ಶಿಸ್ತುಪಾಲನೆ, ಏಕಾಗ್ರತೆ, ಏಕರೂಪತೆ ತರುವ ಉದ್ದೇಶ.

ಪ್ಯಾಂಟು-ಶರ್ಟಿಗೆ ಒಮ್ಮತದ ಓಕೆ

ಮಹಿಳಾ ಸಿಬ್ಬಂದಿ ಸಮವಸ್ತ್ರ ಮಾದರಿ ಬದಲಾವಣೆ ಕುರಿತು ರ್ಚಚಿಸಲು 2018ರ ಸೆ.3ರಂದು ಡಿಜಿಪಿ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ವಿವಿಧ ಶ್ರೇಣಿಯ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಸೀರೆ ಉಟ್ಟು ಕರ್ತವ್ಯ ನಿರ್ವಹಿಸುವುದು ಕಷ್ಟ. ಕೆಲ ಸಂದರ್ಭಗಳಲ್ಲಿ ಇರಿಸು- ಮುರಿಸು ಉಂಟಾಗುತ್ತದೆ. ಆದ್ದರಿಂದ ಪ್ಯಾಂಟು-ಶರ್ಟು ಸಮವಸ್ತ್ರ ಮಾದರಿ ಜಾರಿಯಾಗಲಿ ಎಂದು ಎಲ್ಲ ಅಧಿಕಾರಿ-ಸಿಬ್ಬಂದಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹಿಳಾ ಸಿಬ್ಬಂದಿ ಸೀರೆ ಉಟ್ಟು ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿರುವುದರಿಂದ ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಅದರಂತೆ ಸರ್ಕಾರ ಈಗ ಪ್ಯಾಂಟು-ಶರ್ಟು ಸಮವಸ್ತ್ರ ಧರಿಸಲು ಅನುಮತಿ ಕೊಟ್ಟಿದೆ. ತಕ್ಷಣದಿಂದಲೇ ಆದೇಶ ಪಾಲಿಸುವಂತೆ ಸೂಚನೆ ನೀಡಲಾಗಿದೆ.

|ಪಿ. ಹರಿಶೇಖರನ್ ಐಜಿಪಿ (ಪ್ರಧಾನ ಕಚೇರಿ)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...