10 ಸಾವಿರ ರೂ.ಗಾಗಿ ಸ್ನೇಹಿತೆಯ ಮೇಲೆ ಆಸಿಡ್​ ಎರಚಿದ ಮಹಿಳೆ

ಬೆಂಗಳೂರು: ಕೇವಲ 10 ಸಾವಿರ ರೂ.ಗಾಗಿ ನಡೆದ ಜಗಳದಲ್ಲಿ ಮಹಿಳೆಯೊಬ್ಬರು ತನ್ನ ಸ್ನೇಹಿತೆಯ ಮೇಲೆ ಆಸಿಡ್​ನಿಂದ ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜ. 5 ರಂದು ಹನುಮಂತನಗರದ ಶ್ರೀನಿವಾಸನಗರದ ಬಳಿ ಘಟನೆ ನಡೆದಿತ್ತು.

ಘಟನೆ ವಿವರ: ರೂಪಾ ಮತ್ತು ಶುಭಾ ಸ್ನೇಹಿತರು. ಏಳು ವರ್ಷದಿಂದ ಒಂದೇ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಇಬರಿಬ್ಬರ ನಡುವೆ ಇತ್ತೀಚೆಗೆ 10 ಸಾವಿರ ರೂ. ಗಾಗಿ ಜಗಳ ನಡೆದಿತ್ತು. ಜ. 5 ರಂದು ಶುಭಾ ತನ್ನ ಸ್ನೇಹಿತ ರೂಪಾಳ ಮನಗೆ ಬಂದು ಜಗಳವಾಡಿದ್ದರು. ಈ ಸಂದರ್ಭದಲ್ಲಿ ರೂಪಾ ಮನೆಯಲ್ಲಿದ್ದ ಆಸಿಡ್​ ಅನ್ನು ಶುಭಾ ಅವರ ಮೇಲೆ ಎರಚಿದ್ದಾರೆ.

ಸುಟ್ಟಗಾಯಗಳಿಂದ ಬಳಲುತ್ತಿರುವ ಶುಭಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹನುಮಂತನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ರೂಪಾಳನ್ನು ಬಂಧಿಸಿದ್ದಾರೆ.