ಸುಪ್ರೀಂ ಅಂಗಳಕ್ಕೆ ಲಡ್ಡು ಕೇಸ್: ಪ್ರಧಾನಿ-ಸಿಜೆಐಗೂ ಪತ್ರ?

cm babu

ನವದೆಹಲಿ: ತಿರುಪತಿ ತಿರುಮಲ ಶ್ರೀಬಾಲಾಜಿ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಇತರ ಕಳಪೆ ಪದಾರ್ಥಗಳನ್ನು ಸೇರಿಸಲಾಗಿತ್ತು ಎಂಬ ಪ್ರಕರಣ ಹೈಕೋರ್ಟ್-ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ತಮ್ಮ ಅಧಿಕಾರಾವಧಿಯಲ್ಲಿ ಲಡ್ಡು ಪ್ರಸಾದದಲ್ಲಿ ಯಾವುದೇ ಕಲಬೆರಕೆ ಮಾಡಲಾಗಿಲ್ಲ ಎಂದು ಸಮಜಾಯಿಷಿ ನೀಡಿರುವ ಆಂಧ್ರಪ್ರದೇಶದ ಮಾಜಿ ಸಿಎಂ ಜಗನ್​ವೋಹನ್ ರೆಡ್ಡಿ, ಈ ವಿಚಾರವಾಗಿ ಪ್ರಧಾನಮಂತ್ರಿ ಹಾಗೂ ಸಿಜೆಐಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಹಾಲಿ ಸಿಎಂ ಚಂದ್ರಬಾಬು ನಾಯ್ಡು ಅವರು ದೇವರ ಹೆಸರಿನಲ್ಲಿ ಅನುಕಂಪದ ರಾಜಕಾರಣ ಮಾಡುತ್ತಿದ್ದಾರೆ. ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪವನ್ನು ಎನ್​ಎಬಿಎಲ್ (ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬ್ರೇಷನ್ ಲ್ಯಾಬೊರೇಟರೀಸ್) ಕಂಪನಿಗಳಿಂದ ಖರೀದಿಸಿ ನಂತರ ಸಂಪೂರ್ಣವಾಗಿ ಪರೀಕ್ಷಿಸಲಾಗುತ್ತದೆ. ತುಪ್ಪ ಖರೀದಿ ಪ್ರಕ್ರಿಯೆ ಕೂಡ ಸಂಪೂರ್ಣ ಪಾರದರ್ಶಕವಾಗಿದೆ ಎಂದು ವಿವರಿಸಿದ್ದಾರೆ.

ಟಿಟಿಡಿ ಟ್ರಸ್ಟ್ ಕೂಡ ತುಪ್ಪದ ಗುಣಮಟ್ಟ ಪರೀಕ್ಷೆಗಳನ್ನು ನಡೆಸುತ್ತದೆ, ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಈ ವಿಷಯದಲ್ಲಿ ವಾಸ್ತವಗಳನ್ನು ಹೇಗೆ ತಿರುಚಲಾಗಿದೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆಯುವುದಾಗಿ ಜಗನ್ ತಿಳಿಸಿದ್ದಾರೆ. ಈ ರೀತಿ ಆರೋಪಗಳನ್ನು ಮಾಡಿದ ನಾಯ್ಡು, ಭಗವಾನ್ ವೆಂಕಟೇಶ್ವರನಿಗೆ ಅವಮಾನ ಮಾಡಿದ್ದಾರೆ. ತಮ್ಮ100 ದಿನಗಳ ಅಧಿಕಾರಾವಧಿಯಲ್ಲಿ ಏನೂ ಮಾಡಿಲ್ಲ ಎಂಬ ಸತ್ಯ ಮರೆಮಾಚಲು ಈ ವಿವಾದ ಹುಟ್ಟುಹಾಕಿದ್ದಾರೆ ಎಂದು ಜಗನ್ ಕಿಡಿಕಾರಿದ್ದಾರೆ.

ಏತನ್ಮಧ್ಯೆ, ವೈಎಸ್​ಆರ್​ಸಿಪಿ ಪಕ್ಷದ ಹಿರಿಯ ನಾಯಕ ವೈ.ವಿ. ಸುಬ್ಬಾ ರೆಡ್ಡಿ ಆಂಧ್ರಪ್ರದೇಶ ಹೈಕೋರ್ಟ್​ನಲ್ಲಿ ಲಡ್ಡು ಪ್ರಸಾದ ವಿವಾದ ಸಂಬಂಧ ಅರ್ಜಿ ಸಲ್ಲಿಸಿದ್ದು, ವೈಎಸ್​ಆರ್​ಸಿಪಿ ಆಡಳಿತದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸತ್ಯ ಬೆಳಕಿಗೆ ತರಬೇಕು ಎಂದು ಕೋರ್ಟ್​ಗೆ ಕೋರಿದ್ದಾರೆ. ಹೈಕೋರ್ಟ್ ಸೆ.25ರಂದು ಅರ್ಜಿ ವಿಚಾರಣೆ ನಡೆಸಲಿದೆ. ಅದೇ ರೀತಿ, ಸುಪ್ರೀಂಕೋರ್ಟ್​ಗೂ ಅರ್ಜಿ ಸಲ್ಲಿಕೆಯಾಗಿದ್ದು, ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿರುವ ಅಂಶ ಹಿಂದು ಧಾರ್ವಿುಕ ಪದ್ಧತಿ ಉಲ್ಲಂಘಿಸಿದ್ದು. ಅಸಂಖ್ಯಾತ ಭಕ್ತರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಸಂಬಂಧ ಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ವರದಿ ಕೇಳಿದ ಕೇಂದ್ರ ಸರ್ಕಾರ: ಲಡ್ಡು ವಿವಾದದ ಬಗ್ಗೆ ಸಿಎಂ ಚಂದ್ರಬಾಬು ನಾಯ್ಡು ಜತೆ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ವಿವಾದ ಕುರಿತು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸಿಎಂ ಅವರಿಂದ ವಿವರ ಪಡೆದಿದ್ದೇನೆ. ಲಭ್ಯ ವರದಿ ಹಂಚಿಕೊಳ್ಳಲು ಕೋರಲಾಗಿದೆ ಎಂದು ಹೇಳಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಜತೆ ಕೇಂದ್ರ ರ್ಚಚಿಸಲಿದೆ. ತಪ್ಪಿತಸ್ಥರ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ನಿಯಮಗಳಡಿ ಕ್ರಮಕೈಗೊಂಡು, ತನಿಖೆ ನಡೆಸಲಾಗುವುದು ಎಂದಿದ್ದಾರೆ. ಲಡ್ಡುಗಳಿಗೆ ಬಳಸುವ ತುಪ್ಪದಲ್ಲಿ ಗೋವಿನ ರ್ಚಬಿ, ಹಂದಿಯ ಕೊಬ್ಬು, ಮೀನಿನ ಎಣ್ಣೆಯ ಬಳಕೆ ಬಗ್ಗೆ ಸಿಎಂ ನಾಯ್ಡು ಮಾಡಿರುವ ಆರೋಪಗಳ ತನಿಖೆ ಆಗಬೇಕು ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ವಿಭಾಗದ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಗಮನಕ್ಕೆ ತಂದರೂ: ಕ್ಯಾರೇ ಅನ್ನಲಿಲ್ಲ!: ಹಸುವಿನ ತುಪ್ಪದಲ್ಲಿ ಸಾಕಷ್ಟು ಕಲ್ಮಶವಿದ್ದು, ಕಳಪೆ ಆಗಿರುವುದನ್ನು ಹಲವು ವರ್ಷಗಳ ಹಿಂದೆಯೇ ಗಮನಿಸಿದ್ದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಟ್ರಸ್ಟ್ ಬೋರ್ಡ್ ಅಧ್ಯಕ್ಷರ ಗಮನಕ್ಕೂ ತಂದಿದ್ದೆ. ಆದರೆ ಅವರು ಕ್ಯಾರೇ ಎನ್ನಲಿಲ್ಲ. ನನ್ನದು ಏಕಾಂಗಿ ಹೋರಾಟವಾಗಿತ್ತು ಎಂದು ದೇಗುಲದ ಮಾಜಿ ಅರ್ಚಕ ರಮಣ ದೀಕ್ಷಿತುಲು ಗಂಭೀರ ಆರೋಪ ಮಾಡಿದ್ದಾರೆ.

ರಕ್ಷಣಾ ಮಂಡಳಿ ರಚನೆ ಆಗಲಿ: ಲಡ್ಡು ವಿವಾದದ ಮಧ್ಯೆ ಸನಾತನ ಧರ್ಮ ರಕ್ಷಣಾ ಮಂಡಳಿ ಸ್ಥಾಪಿಸಬೇಕೆಂದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕರೆ ನೀಡಿದ್ದಾರೆ. ಕಲಬೆರಕೆಗೆ ಕಾರಣವಾದವರ ವಿರುದ್ಧ ಆಂಧ್ರಪ್ರದೇಶ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬೆರೆಸಿರುವುದನ್ನು ಕಂಡು ನಾವೆಲ್ಲರೂ ತೀವ್ರ ವಿಚಲಿತರಾಗಿದ್ದೇವೆ. ಹಿಂದಿನ ಸರ್ಕಾರ ರಚಿಸಿದ್ದ ಟಿಟಿಡಿ ಮಂಡಳಿ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ ಎಂದು ಜನಸೇನಾ ಪಕ್ಷದ ಮುಖ್ಯಸ್ಥರು ತಿಳಿಸಿದ್ದಾರೆ.

ಕರ್ನಾಟಕದ ದೇವಸ್ಥಾನಗಳಲ್ಲಿ ನಂದಿನಿ ತುಪ್ಪ ಬಳಕೆ ಕಡ್ಡಾಯ

ಬೆಂಗಳೂರು: ಲಡ್ಡು ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಧಾರ್ವಿುಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ ತಯಾರಿಕೆಗೆ ಶುದ್ಧ ನಂದಿನಿ ತುಪ್ಪ ಮಾತ್ರ ಬಳಸುವಂತೆ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ದೇವಾಲಯಗಳಲ್ಲಿ ಸೇವೆ ಮಾಡಲು, ದೀಪ ಬೆಳಗಿಸಲು, ಎಲ್ಲ ವಿಧದ ಪ್ರಸಾದ ತಯಾರಿಸಲು ಹಾಗೂ ದಾಸೋಹ ಭವನಗಳಲ್ಲೂ ಕಡ್ಡಾಯವಾಗಿ ಶುದ್ಧ ನಂದಿನಿ ತುಪ್ಪವನ್ನೇ ಬಳಸಬೇಕು. ಜತೆಗೆ ಪ್ರಸಾದ ತಯಾರಿಕೆಯಲ್ಲಿ ಶುಚಿತ್ವ, ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ತುಪ್ಪದ ಮಾರುಕಟ್ಟೆ ದರ ಕೆ.ಜಿ.ಗೆ 500 ರೂ. ಇದ್ದಾಗ ಹಿಂದಿನ ಸರ್ಕಾರ 320 ರೂ. ಕಳಪೆ ಪದಾರ್ಥ ಬಳಸುತ್ತಿತ್ತು. ಆದರೆ ನಾವು ತುಪ್ಪದ ಪೂರೈಕೆದಾರರನ್ನು ಬದಲಿಸಿದ್ದು, ಕರ್ನಾಟಕದ ‘ನಂದಿನಿ’ ತುಪ್ಪ ಬಳಸಲು ಆರಂಭಿಸಿದ್ದೇವೆ.

| ಚಂದ್ರಬಾಬು ನಾಯ್ಡು ಆಂಧ್ರಪ್ರದೇಶ ಸಿಎಂ

ಈಗಿನ ಸಿಎಂಗೆ ನಮ್ಮ ಭಯ ಇಲ್ಲ, ಮುಂದೆ ದೇವರು ಒಳ್ಳೆಯ ಸಿಎಂ ಕೊಟ್ಟೆ ಕೊಡ್ತಾನೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಶೆಡ್‌ಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ; ಆರೋಪಿಗಳಿಗೆ 6 ಮಂದಿಗೆ 20 ವರ್ಷ ಕಠಿಣ ಶಿಕ್ಷೆ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…