More

    ಹಿಂದು ಸಂಘಟನೆಗಳಲ್ಲಿ ಸಮನ್ವಯ ಕೊರತೆ; ವಿಶ್ವ ಹಿಂದು ಕಾಂಗ್ರೆಸ್​ನಲ್ಲಿ ಆರೆಸ್ಸೆಸ್ ಮುಖಂಡ ಹೊಸಬಾಳೆ ಅಭಿಮತ

    ಥಾಯ್ಲೆಂಡ್: ನಮ್ಮ ಸಮುದಾಯದ ದನಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಹಿಂದು ಸಂಘಟನೆಗಳ ಮಧ್ಯೆ ಬಲವಾದ ಸಮನ್ವಯವಿರಬೇಕು. ಸಮನ್ವಯತೆಯ ಕೊರತೆಯಿಂದಾಗಿ ವಿವಿಧ ದೇಶಗಳಲ್ಲಿ ಸಂಘಟನೆಗಳು ಒಗ್ಗೂಡಿಲ್ಲ ಎಂದು ಆರೆಸ್ಸೆಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟಿದ್ದಾರೆ.

    ಥಾಯ್ಲೆಂಡ್​ನ ರಾಜಧಾನಿ ಬ್ಯಾಂಕಾಕ್​ನಲ್ಲಿ ನಡೆದ ವಿಶ್ವ ಹಿಂದು ಕಾಂಗ್ರೆಸ್ (ಡಬ್ಲು್ಯಎಚ್​ಸಿ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಮುಂದಿರುವ ಸವಾಲುಗಳನ್ನು ಎದುರಿಸಲು ಜಾಗತಿಕವಾಗಿ ಹಿಂದು ಸಂಘಟನೆಗಳನ್ನು ಬಲಪಡಿಸುವುದು ಅತ್ಯಗತ್ಯವಾಗಿದೆ. ಭಾಷೆ, ಪಂಗಡ, ಜಾತಿ, ಉಪಜಾತಿಗಳು ಮತ್ತು ಧಾರ್ವಿುಕ ಗುರುಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಅನೇಕ ಸಂಘ, ಸಂಘಟನೆಗಳು ಮತ್ತು ವೇದಿಕೆಗಳನ್ನು ರಚನೆಗೊಂಡಿವೆ. ಎಲ್ಲರೂ ಬಿಡುವಿಲ್ಲದೆ ಶ್ರಮಪಡುತ್ತಿದ್ದಾರೆ. ಆದರೆ ಈ ವೈವಿಧ್ಯತೆ ಮಧ್ಯೆ ಹಿಂದು ಕಳೆದುಹೋಗಿದ್ದಾನೆ. ನಾವು ನಮ್ಮ ಮೂಲ, ಘನ ಉದ್ದೇಶವನ್ನು ಮರೆಯಬಾರದು. ಅನೇಕ ಬಾರಿ ಹಿಂದು ಸಮಾಜದ ವೈವಿಧ್ಯತೆಯೇ ಅನೇಕ ಕಡೆ ಬೇರ್ಪಡುವಿಕೆಗೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಹಿಂದು ಸಮಾಜದ ಧ್ವನಿಯನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಪ್ರಯತ್ನದಲ್ಲಿ ವಿರೋಧಾಭಾಸ ಮತ್ತು ಭಿನ್ನಾಭಿಪ್ರಾಯ ನಿವಾರಿಸಲು ಸಂಘಟನೆಗಳ ನಡುವೆ ಸಹಯೋಗವಿರಬೇಕು ಎಂದು ಕರೆಕೊಟ್ಟ ಅವರು, ಹಿಂದು ಸಂಘಟನೆಗಳು ಮಾಹಿತಿ ಹಂಚಿಕೊಳ್ಳಬೇಕು, ಸಮನ್ವಯ ಸಾಧಿಸಬೇಕು, ಸಹಕರಿಸಬೇಕು. ಮತಾಂತರ, ಹಿಂದುಗಳ ಮಾನವ ಹಕ್ಕುಗಳ ದಮನ, ಪಾಶ್ಚಿಮಾತ್ಯ ಜಗತ್ತಿನ ಹಲವು ವಿಶ್ವವಿದ್ಯಾನಿಲಯಗಳಲ್ಲಿ ಹಿಂದು ಅಧ್ಯಯನ ಮತ್ತು ಭಾರತೀಯ ಭಾಷೆಗಳ ವಿಭಾಗಗಳು ಇಲ್ಲದಿರುವುಂತಹ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ ಎಂದು ಗಮನಸೆಳೆದರು.

    60ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ

    ವಿಶ್ವ ಹಿಂದೂ ಫೌಂಡೇಶನ್​ನ ಸಂಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷ ಸ್ವಾಮಿ ವಿಜ್ಞಾನಾನಂದರ ಶಂಖ ಊದುವ ಮೂಲಕ ಚತುರ್ವಾರ್ಷಿಕ ಹಿಂದು ಕಾಂಗ್ರೆಸ್ ಕಾರ್ಯಕ್ರಮ ಶುಕ್ರವಾರ ಆರಂಭಗೊಂಡಿತು. 3 ದಿನಗಳ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿ ದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಭೌತವಾದ, ಕಮ್ಯುನಿಸಂ ಮತ್ತು ಬಂಡವಾಳಶಾಹಿಯ ಪ್ರಯೋಗಗಳಿಂದ ಮುಗ್ಗರಿಸುತ್ತಿರುವ ಜಗತ್ತಿಗೆ ಭಾರತ ಸಂತೋಷ ಮತ್ತು ತೃಪ್ತಿಯ ಮಾರ್ಗವನ್ನು ತೋರಿಸುತ್ತಿದೆ. ಪ್ರಪಂಚದಾದ್ಯಂತ ಇರುವ ಹಿಂದೂಗಳು ಪರಸ್ಪರರನ್ನು ತಲುಪಲು ಮತ್ತು ಒಟ್ಟಾಗಿ ಸಂಪರ್ಕ ಸಾಧಿಸಲು ಯತ್ನಿಸುತ್ತಿರಬೇಕು ಎಂದವರು ಕರೆನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts