Friday, 16th November 2018  

Vijayavani

Breaking News

ಬಜೆಟ್​ನಲ್ಲಿ ಬಡವರಿಗೆ ಅನ್ಯಾಯ ಖಂಡಿಸಿ ಪ್ರತಿಭಟನೆ

Thursday, 12.07.2018, 9:12 PM       No Comments

ಶಿಗ್ಗಾಂವಿ: ಸಮ್ಮಿಶ್ರ ಸರ್ಕಾರದ ಬಜೆಟ್​ನಲ್ಲಿ ಬಡ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಆರೋಪಿಸಿ ರಾಜ್ಯ ಕಾರ್ವಿುಕ ಹಿತರಕ್ಷಣೆ ಮತ್ತು ಜಾಗೃತ ವೇದಿಕೆ ನೂರಾರು ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಕಾರ್ವಿುಕ ಸಂಘಟನೆ ರಾಜ್ಯಾಧ್ಯಕ್ಷ ಫಕ್ಕೀರೇಶ ಶಿಗ್ಗಾಂವಿ ಮಾತನಾಡಿ, ದೇಶದ ಸುದೃಢತೆಗೆ ಅನ್ನದಾತನ ಸಾಲಮನ್ನಾ ಮಾಡಿರುವುದು ಸ್ವಾಗತಾರ್ಹ. ಆದರೆ, ಹಣಕಾಸಿನ ಹೊಂದಾಣಿಕೆ ನೆಪದಲ್ಲಿ ಬಡವರ ಹಾಗೂ ಕಾರ್ವಿುಕರ ಅನ್ನ ಕಸಿದುಕೊಂಡಿದೆ. ವರ್ಷದ ಆರು ತಿಂಗಳು ಮಾತ್ರ ಉದ್ಯೋಗ ಮಾಡುವ ಕಾರ್ವಿುಕನಿಗೆ ಭದ್ರತೆ ಒದಗಿಸುವ ಯೋಜನೆ ರೂಪಿಸದೇ ನೀಡುವ ಪಡಿತರ ಅಕ್ಕಿಯಲ್ಲೂ 2 ಕೆ.ಜಿ ಕಡಿತ ಮಾಡಿರುವುದು ಸರಿಯಾದ ಕ್ರಮವಲ್ಲ. ಸರ್ಕಾರ ತಕ್ಷಣ ಈ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಅಸಂಘಟಿತ ವಲಯದ ಜೀವಭದ್ರತೆಯ ವಿಮಾ ಯೋಜನೆ ಜಿಲ್ಲೆಯಲ್ಲಿ ಸಂಪೂರ್ಣ ನೆಲಕಚ್ಚಿದೆ. ಆಮ್ ಆದ್ಮಿ ಬಿಮಾ ಯೋಜನೆಯ ಸಾವಿರಾರು ಅರ್ಜಿ ಕಚೇರಿಯಲ್ಲಿ ಕೊಳೆಯುತ್ತಿವೆ. ಎರಡು ವರ್ಷವಾದರೂ ಬಾಂಡ್ ವಿತರಿಸಲಾಗಿಲ್ಲ. ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. 2014-15 ನೇ ಸಾಲಿನಲ್ಲಿ 1849 ಅರ್ಜಿ ಸಲ್ಲಿಸಲಾಗಿದೆ. ಅದರಲ್ಲಿ ಕೇವಲ 769 ಅರ್ಜಿ ವಿಲೇವಾರಿಯಾಗಿವೆ. 2015-16ರಲ್ಲಿ 1100 ಅರ್ಜಿಗಳಲ್ಲಿ 638, 2016ರಲ್ಲಿ 1350 ಅರ್ಜಿ ಸಲ್ಲಿಕೆಯಾಗಿವೆ. ಆದರೆ, ಯಾವುದೇ ಅರ್ಜಿ ವಿಲೇವಾರಿ ಆಗದಿರುವುದು ಇಲಾಖೆಯ ನಿರ್ಲಕ್ಷ್ಯ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರಿದರು. ವಿವಿಧ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಶಿವಾನಂದ ರಾಣೆ ಅವರಿಗೆ ಸಲ್ಲಿಸಿದರು.

 

Leave a Reply

Your email address will not be published. Required fields are marked *

Back To Top