ಹೊನ್ನಾಳೀಲಿ ಬಂದ್ ವಿಫಲ

ಹೊನ್ನಾಳಿ: ಕಾರ್ಮಿಕ ಸಂಘಟನೆಗಳ ಭಾರತ್ ಬಂದ್‌ಗೆ ಪಟ್ಟಣದಲ್ಲಿ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಶಾಲಾ, ಕಾಲೇಜುಗಳಘಿಗೆ ರಜೆ ಘೋಷಿಸಲಾಗಿತ್ತು. ಸಾರಿಗೆ ಬಸ್‌ಗಳು ರಸ್ತೆಗಿಳಿದಿರಲಿಲ್ಲ. ಆದರೆ, ಖಾಸಗಿ ಬಸ್, ಆಟೋಗಳು ಸಂಚರಿಸಿದವು. ವರ್ತಕರು ಎಂದಿನಂತೆ ವಹಿವಾಟು ನಡೆಸಿದರು. ಸರ್ಕಾರಿ ನೌಕರರು ಎಂದಿನಂತೆ ಕರ್ತವ್ಯ ನಿರ್ವಹಿಸದರೆ, ಬ್ಯಾಂಕ್‌ಗಳು ವಹಿವಾಟು ಸ್ಥಗಿತಗೊಳಿಸಿದ್ದವು.

ಎಐಟಿಯುಸಿ, ಸಿಐಟಿಯು ಸಂಘಟನೆಗಳ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಸಿ ಕೆಲ ಹೊತ್ತು ರಸ್ತೆತಡೆ ನಡೆಸಿದರು.

ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸಿಡಿಪಿಒ ಶಿವಲಿಂಗಪ್ಪ, ಬಿಜೆಪಿ ಮುಖಂಡ ಶಾಂತ್‌ರಾಜ್‌ಪಾಟೀಲ್, ಎಐಟಿಯುಸಿ ಮುಖಂಡರಾದ ಚನ್ನಮ್ಮ, ಗೀತಾ, ವಸಂತಮ್ಮ, ರೇಣುಕಮ್ಮ, ಶಾರದಾ ದೇವಿ, ಹಾಲಮ್ಮ, ಅನಸೂಯಮ್ಮ, ಸಿಐಟಿಯುನ ಲತಾಬಾಯಿ, ರತ್ನಮ್ಮ ಇತರರಿದ್ದರು.