ಕಾರ್ಮಿಕರಿಗೆ ಸುರಕ್ಷತಾ ಪರಿಕರ ವಿತರಿಸಿ

ಕಂಪ್ಲಿಯಲ್ಲಿ ನವಕರ್ನಾಟಕ ಯುವಶಕ್ತಿ ಸಂಘ ಪ್ರತಿಭಟನೆ

ಕಂಪ್ಲಿ: ಸುರಕ್ಷತಾ ಪರಿಕರ ನೀಡದೆ ನಂ.10 ಮುದ್ದಾಪುರ ಗ್ರಾಮದ ವಿಜಯನಗರ ಕಾಲುವೆಯಲ್ಲಿ ಖಾತ್ರಿ ಕಾರ್ಮಿಕರಿಂದ ಗಿಡಗಂಟಿ ತೆರವು ಕಾರ್ಯಕ್ಕೆ ಮುಂದಾಗಿರುವ ಗ್ರಾಪಂ ಕ್ರಮ ಖಂಡಿಸಿ ಸ್ಥಳೀಯ ನವ ಕರ್ನಾಟಕ ಯುವಶಕ್ತಿ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.

ಸಂಘದ ಕ್ಷೇತ್ರಾಧ್ಯಕ್ಷ ಬಿ.ವಿರೂಪಾಕ್ಷಿ ಮಾತನಾಡಿ, ಗ್ರಾಮದ ವಿಜಯನಗರ ಕಾಲುವೆಗೆ ಚರಂಡಿ ನೀರು ಹರಿಸಲಾಗುತ್ತಿದೆ. ಅಲ್ಲದೇ ಸಮರ್ಪಕ ನಿರ್ವಹಣೆ ಇಲ್ಲದೇ ಗಿಡಗಂಟಿಗಳಿಂದ ಆವೃತವಾಗಿದೆ. ಕಾಲುವೆಯಲ್ಲಿನ ಜಾಲಿಗಿಡ, ಕಸ ತೆರವಿಗಾಗಿ ಗ್ರಾಪಂ ನರೇಗಾ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡಿದೆ. ಆದರೆ, ಕಾರ್ಮಿಕರಿಗೆ ಗ್ಲೌಸ್,ಮಾಸ್ಕ್,ಬೂಟ್ ನೀಡದೇ ಕಾಲುವೆಗಿಳಿಸಿದ್ದು ಖಂಡನೀಯ ಎಂದರು. ಶೀಘ್ರವೇ ಕಾರ್ಮಿಕರಿಗೆ ರಕ್ಷಣಾ ಸಾಮಗ್ರಿ ಒದಗಿಸಬೇಕು. ಇಲ್ಲವಾದಲ್ಲಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಸಂಘದ ಶೆರಗೇರು ಗೋಪಾಲ್, ಜೆ.ಶಿವಕುಮಾರ್, ಎಚ್.ಎಂ.ಸಂತೋಷ್, ಬಸವರಾಜ, ಹೊನ್ನೂರಸ್ವಾಮಿ, ಎನ್.ಶ್ರೀನಿವಾಸ್, ಕೆ.ಶಿವಕುಮಾರ್, ಜೆ.ಜಡೇಶ್, ರೈತ ಸಂಘದ ಕಂಪ್ಲಿ ತಾಲೂಕು ಉಪಾಧ್ಯಕ್ಷ ಆನೆಗುಂದಿ ಬಸವರಾಜ ಇತರರಿದ್ದರು.

ನರೇಗಾ ಯೋಜನೆಯಡಿ ಕೆಲಸ ಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಗುರುತಿಸಿ ವಿಜಯನಗರ ಕಾಲುವೆ ಗಿಡಗಂಟಿ ತೆರವು ಕೆಲಸ ನೀಡಲಾಗಿದೆ. ಆದರೆ, ಕಾರ್ಮಿಕರಿಗೆ ಸುರಕ್ಷತಾ ಸಾಮಗ್ರಿ (ಗ್ಲೌಸ್,ಮಾಸ್ಕ್,ಬೂಟ್) ನೀಡಲು ನಮ್ಮಲ್ಲಿ ಅವಕಾಶವಿಲ್ಲ.
| ಬೀರಲಿಂಗಪ್ಪ, ಪಿಡಿಒ, ನಂ.10 ಮುದ್ದಾಪುರ ಗ್ರಾಪಂ

Leave a Reply

Your email address will not be published. Required fields are marked *