ವಿಡಿಯೋ| ಮುಷ್ಕರದಿಂದಾಗಿ ಶಾಲೆಗೆ ತೆರಳಲು ಬಸ್​ ಸಿಗದಿದ್ದಕ್ಕೆ ಸರ್ಕಾರದ ವಿರುದ್ಧ ವಿದ್ಯಾರ್ಥಿನಿ ಆಕ್ರೋಶ

ದಾವಣಗೆರೆ: ಮಂಗಳವಾರದಿಂದ ರಾಷ್ಟ್ರಾದ್ಯಂತ ಕಾರ್ಮಿಕ ಸಂಘಟನೆಗಳು ಮುಷ್ಕರ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಾಲೆಗೆ ಹೋಗಲು ಬಸ್​ ಸೌಲಭ್ಯ ಇಲ್ಲದಿದ್ದಕ್ಕೆ ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಸರ್ಕಾದ ವಿರುದ್ಧ ಆಕ್ರೋಶ ಹೊರಹಾಕಿದ್ದಾಳೆ.

ಸರ್ಕಾರಕ್ಕೆ ನಾಚಿಕೆ ಆಗಬೇಕು. ಅವರವರ ಸಮಸ್ಯೆಗಳನ್ನು ಮಾತಿನ ಮೂಲಕ ಅವರೇ ಬಗೆಹರಿಸಿಕೊಳ್ಳಬೇಕು. ಬಂದ್ ಮಾಡುವುದರಿಂದ ಯಾವುದೇ ಪ್ರಯೋಜನವಾಗಲ್ಲ ಎಂದು 8ನೇ ತರಗತಿ ವಿದ್ಯಾರ್ಥಿನಿ ಮೋನಿಕಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

ತಿಂಗಳಲ್ಲಿ ಶಾಲೆಗೆ ನಾಲ್ಕು ರಜೆಗಳಿರುತ್ತದೆ. ಅಲ್ಲದೆ, ಹಬ್ಬ ಹರಿದಿನ ಅಂತಾ ಸಾಲು ಸಾಲು ರಜೆಗಳು ಬರುತ್ತವೆ. ಈ ಮಧ್ಯೆ ಮುಷ್ಕರ ಹೂಡಿ ಸಾರಿಗೆ ಸೌಲಭ್ಯ ಬಂದ್​​ ಮಾಡಿಸಿದರೆ, ನಾವು ಶಾಲೆಗೆ ಹೋಗುವುದು ಹೇಗೆ? ನಾವು ಕಲಿಯುವುದು ಹೇಗೆ ಎಂದು ವಿದ್ಯಾರ್ಥಿನಿ ಮೌನಿಕ ವಿಡಿಯೋ ಮೂಲಕ ಸರ್ಕಾರವನ್ನು ಪ್ರಶ್ನಿಸಿದ್ದಾಳೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮೋನಿಕಾ ಮಾತನಾಡಿರುವ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *