ರಾಷ್ಟ್ರವ್ಯಾಪಿ ಮುಷ್ಕರದಿಂದ ಸಾರಿಗೆ ಇಲಾಖೆಗೆ ಹೊಡೆತ: ಎಲ್ಲಿಲ್ಲಿ ಎಷ್ಟು ನಷ್ಟ ಸಂಭವಿಸಿದೆ?

ಬೆಂಗಳೂರು: ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ ಸರ್ಕಾರಿ ಸಾರಿಗೆ ಸಂಸ್ಥೆಗೆ ನಿನ್ನೆ ದಿನವೊಂದರಲ್ಲೇ ಭಾರಿ ನಷ್ಟ ಉಂಟಾಗಿದೆ.

ಪ್ರತಿದಿನ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದ ಪ್ರತಿ ಜಿಲ್ಲೆಯ ಸಾರಿಗೆ ಇಲಾಖೆ ನಿನ್ನೆ ನಡೆದ ರಾಷ್ಟ್ರವ್ಯಾಪಿ ಮುಷ್ಕರ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ಭಾರಿ ನಷ್ಟ ಅನುಭವಿಸಿದೆ.

ಹಾವೇರಿ ವಿಭಾಗದಿಂದ 40 ಲಕ್ಷ ರೂ., ಉತ್ತರ ಕನ್ನಡದಿಂದ 50 ಲಕ್ಷ ರೂ., ಹಾಸನ 26 ಲಕ್ಷ ರೂ., ಚಿಕ್ಕಮಗಳೂರು 25 ಲಕ್ಷ ರೂ., ರಾಮನಗರ 30 ಲಕ್ಷ ರೂ., ಕೋಲಾರ 34 ಲಕ್ಷ‌ ರೂ., ಮಂಗಳೂರು 50 ಲಕ್ಷ ರೂ., ಕೊಪ್ಪಳ 20 ಲಕ್ಷ ರೂ., ಉತ್ತರ ಕನ್ನಡ 40 ಲಕ್ಷ ರೂ. ಬೆಳಗಾವಿ 65 ಲಕ್ಷ ರೂ., ದಾವಣಗೆರೆ 30 ಲಕ್ಷ ರೂ. ಹಾಗೂ ರಾಯಚೂರಿನಿಂದ 70 ಲಕ್ಷ ರೂ. ನಷ್ಟ ಉಂಟಾಗಿದೆ. ಇನ್ನು ಒಂದೇ ದಿನ ಈಶಾನ್ಯ ಸಾರಿಗೆ ಸಂಸ್ಥೆಗೆ 9 ಕೋಟಿ ರೂ. ನಷ್ಟ ಉಂಟಾಗಿದೆ.

ಆಯಾ ವಿಭಾಗಗಳಲ್ಲಿನ ಸಾರಿಗೆ ಸಂಸ್ಥೆಯ ನಷ್ಟದ ಬಗ್ಗೆ ಅಲ್ಲಿನ ವಿಭಾಗೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಷ್ಟ್ರವ್ಯಾಪಿ ಮುಷ್ಕರ ಎರಡನೇ ದಿನವು ನಡೆಯುತ್ತಿದ್ದು, ಇಂದು ಹಲವೆಡೆ ಸರ್ಕಾರಿ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಕಾರಣ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಇಂದು ಕೂಡ ಸಾರಿಗೆ ಇಲಾಖೆಯ ಆದಾಯದಲ್ಲಿ ಭಾರಿ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿವೆ. (ದಿಗ್ವಿಜಯ ನ್ಯೂಸ್​)