ಅರಕೇರಾ: ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಆಲ್ಕೋಡ ಗ್ರಾಪಂ ಅಧ್ಯಕ್ಷ ಮಹೇಶ ನಾಯಕ ಹೇಳಿದರು.

ಇದನ್ನೂ ಓದಿ: ನರೇಗಾ ಯೋಜನೆ ಲಾಭ ಪಡೆಯಿರಿ
ತಾಲೂಕಿನ ಆಲ್ಕೋಡ ಗ್ರಾಮದ ಅಮೃತ ಸರೋವರ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ನರೇಗಾ ಯೋಜನೆ ಬಡ ಕುಟುಂಬಗಳಿಗೆ ನೆರವಾಗಿದೆ. ನಗರ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಿದೆ.
ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಗೆ 500 ಫಲಾನುಭವಿಗಳಿಗೆ ಕೆಲಸ ನೀಡಲಾಗುತ್ತಿದೆ. ಕೆರೆಯಲ್ಲಿ ಹೂಳು ತೆಗೆಯುವುದರಿಂದ ಕೆರೆ ಪುನಶ್ಚೇತನಗೊಳ್ಳುತ್ತದೆ. ಕೆರೆ ಸುತ್ತಲಿನ ಕೆಲ ಕಿಮೀವರೆಗೆ ಜಲಮೂಲ ಅಭಿವೃದ್ಧಿಗೊಳ್ಳುತ್ತದೆ. ಬೋರ್‌ವೆಲ್‌ಗಳಲ್ಲಿಯೂ ನೀರಿನ ಪ್ರಮಾಣ ಹೆಚ್ಚುತ್ತದೆ ಎಂದರು.
ಪಿಡಿಒ ಮಂಜುನಾಥ ಯಾದವ ಮಾತನಾಡಿ, ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸರ್ಕಾರ ಇದಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಸ್ಥಳೀಯ ಕೆರೆ ಪುನಶ್ಚೇತನದಿಂದ ಮಳೆಗಾಲದಲ್ಲಿ ಮೈದುಂಬಿಕೊಳ್ಳುತ್ತದೆ. ಜನ ಜಾನುವಾರುಗಳಿಗೆ ಕೆರೆ ಆಸರೆಯಾಗಲಿದೆ ಎಂದರು.