ಆಂಧ್ರದಿಂದ ಕೂಲಿ ಮಾಡಲು ಬಂದು ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕ

ಮೈಸೂರು: ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಎಚ್​​.ಡಿ ಕೋಟೆ ತಾಲೂಕಿನ ಮಾದಪುರ ಗ್ರಾಮದ ಹೊರವಲಯಲ್ಲಿ ಕಾಲುವೆ ನಿರ್ಮಾಣ ಕೆಲಸಕ್ಕೆ ಆಗಮಿಸಿದ್ದ ಹನುಮಂತರಾಯ ಆನೆಯ ದಾಳಿಯಿಂದ ಮೃತಪಟ್ಟಿದ್ದಾನೆ. ಆಂಧ್ರದಿಂದ ಕೂಲಿ ಕೆಲಸ ಮಾಡಲು ಬಂದಿದ್ದ ಎಂದು ತಿಳಿದು ಬಂದಿದೆ.

ಗ್ರಾಮದ ಹೊರವಲಯಲ್ಲಿ ಏಕಾಏಕಿ ಬಂದ ಆನೆ ಆತನ ಮೇಲೆ ದಾಳಿ ಮಾಡಿದೆ. ದಂತದಿಂದ ಹೊಟ್ಟೆಗೆ ತಿವಿದು ಗಾಯಗೊಳಿಸಿದೆ. ತೀವ್ರ ರಕ್ತಸ್ರಾವದಿಂದ ನಿತ್ರಾಣವಾಗಿದ್ದ ಹನುಮಂತನನ್ನು ಗ್ರಾಮಸ್ಥರು ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾದೆ ಸಾವನಪ್ಪಿದ್ದಾನೆ. (ದಿಗ್ವಿಜಯ ನ್ಯೂಸ್​)

One Reply to “ಆಂಧ್ರದಿಂದ ಕೂಲಿ ಮಾಡಲು ಬಂದು ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕ”

  1. Poor. Migrated for work. Migration due to poverty. No comments. No compensation. No religion. No vote bank. Because you voted wrong person for good job. No sympathy no candle march because he is not from minorities. Where is BJP. No help for hindutuva

Leave a Reply

Your email address will not be published. Required fields are marked *