ಸಚಿನ್​ ಬಗ್ಗೆ ಮಾತನಾಡಿ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ರಾಹುಲ್​​, ಪಾಂಡ್ಯ

ನವದೆಹಲಿ: ಬಾಲಿವುಡ್​ನ “ಕಾಫೀ ವಿತ್​ ಕರಣ್​” ಸೀಸನ್​ 6 ಕಾರ್ಯಕ್ರಮದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿ ಟೀಂ ಇಂಡಿಯಾದ ಯುವ ಆಟಗಾರರಾದ ಕೆ.ಎಲ್​.ರಾಹುಲ್​ ಹಾಗೂ ಹಾರ್ದಿಕ್​ ಪಾಂಡ್ಯ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಾಲಿವುಡ್​ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕರಾಗಿರುವ ಕರಣ್​ ಜೋಹರ್​ ನಡೆಸಿಕೊಡುವ ಕಾಫೀ ವಿತ್​​ ಕರಣ್​ ಕಾರ್ಯಕ್ರಮಕ್ಕೆ ರಾಹುಲ್​ ಹಾಗೂ ಪಾಂಡ್ಯ ಅತಿಥಿಗಳಾಗಿ ಬಂದಿದ್ದರು. ಈ ವೇಳೆ ಟೀಂ ಇಂಡಿಯಾದ ಇಬ್ಬರು ಆಟಗಾರರಾದ ಸಚಿನ್​ ತೆಂಡೂಲ್ಕರ್​ ಹಾಗೂ ವಿರಾಟ್​ ಕೊಹ್ಲಿ ಇಬ್ಬರಲ್ಲಿ ಯಾರು ಉತ್ತಮ ಬ್ಯಾಟ್ಸ್​ಮನ್​ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

ಸ್ವಲ್ಪವೂ ಯೋಚಿಸದೇ ರಾಹುಲ್ ಹಾಗೂ ಪಾಂಡ್ಯ ಕೊಹ್ಲಿ ಹೆಸರನ್ನು ಸೂಚಿಸಿದರು. ಇದು ಕ್ರಿಕೆಟ್​ ದೇವರು ಸಚಿನ್​ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.​ ಹಲವಾರು ನೆಟ್ಟಿಗರು ಉಭಯ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದು, ಆಟದ ಬಗ್ಗೆ ಏನೂ ಗೊತ್ತಿಲ್ಲದೇ ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ.

ಎಲ್ಲ ಕಾಲದಲ್ಲಿಯೂ ಸಚಿನ್​ ಓರ್ವ ಶ್ರೇಷ್ಠ ಆಟಗಾರ ಎಂದು ಕ್ರಿಕೆಟ್​ ದಂತಕತೆಗಳಾದ ವಿವಿಯನ್​ ರಿಚರ್ಡ್ಸ್​, ಡಾನ್​ ಬ್ರಾಡ್​ಮನ್, ಸುನಿಲ್​ ಗವಾಸ್ಕರ್​, ಬ್ರೆಟ್​ ಲಿ, ವಾಸಿಂ ಅಕ್ರಮ್​ ಹಾಗೂ ಗಂಗೂಲಿ ಮುಂತಾದ ಆಟಗಾರರೇ ಒಪ್ಪಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.​

ಪ್ರತಿಯೊಬ್ಬ ನಿಜ ಆಟಗಾರನಿಗೆ ಗೊತ್ತು ಯಾರು ಉತ್ತಮ ಬ್ಯಾಟ್ಸ್​ಮನ್​ ಎಂದು ಟ್ವಿಟರ್​ ಬಳಕೆದಾರನೊಬ್ಬ ಅಸಮಾಧಾನ ಹೊರಹಾಕಿದ್ದರೆ, ಮತ್ತೊಬ್ಬ ಕೇವಲ ಟೀಂನಲ್ಲಿ ಉಳಿಯುವುದಕ್ಕೆ ಈ ರೀತಿಯ ಚೀಪ್​ ಗಿಮಿಕ್​ಗಳನ್ನು ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಸಾಕಷ್ಟು ನೆಟ್ಟಿಗರು ಉಭಯ ಆಟಗಾರರ ಉತ್ತರವನ್ನು ಖಂಡಿಸಿದ್ದಾರೆ.(ಏಜೆನ್ಸೀಸ್​)

One Reply to “ಸಚಿನ್​ ಬಗ್ಗೆ ಮಾತನಾಡಿ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ರಾಹುಲ್​​, ಪಾಂಡ್ಯ”

  1. These two players and R. Jadeja whatever days spend playing till now, Sachin Tendulkar had spent those days in dressing room. In those days if Sachin got out early India is going to loose most of the time. Kohli didn’t have the same pressure and fitness.
    Sachin cannot be compared to other players now and in future.
    Thanks for nothing
    Vinayak

Comments are closed.