22.5 C
Bengaluru
Sunday, January 19, 2020

ಪ್ರಾಯೋಜಕರ ನಿರೀಕ್ಷೆಯಲ್ಲಿ ಕುವೈತ್ ಸಂತ್ರಸ್ತರು

Latest News

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ಕಾಲನಲ್ಲಿ ಲೀನವಾದ ‘ಪ್ರಳಯ’

ಅಕ್ಕಿಆಲೂರ: ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸಮೀಪದ ಮಲಗುಂದ ಗ್ರಾಮದ ಪ್ರಳಯ ಎಂಬ ಹೆಸರಿನ ಹೋರಿ ಶನಿವಾರ ಅನಾರೊಗ್ಯದಿಂದ ಅಸುನಿಗಿದ್ದು,...

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೆಲಸಕ್ಕೆಂದು ತೆರಳಿ ಕುವೈತ್‌ನಲ್ಲಿ ತೊಂದರೆಯಲ್ಲಿ ಸಿಲುಕಿರುವ ಮಂಗಳೂರು ಸಹಿತ ದೇಶದ ವಿವಿಧೆಡೆಗಳ 75 ನೌಕರರನ್ನು ವಾಪಾಸು ತಾಯ್ನಡಿಗೆ ಕರೆತರಲು ಅಡ್ಡಿಯಾಗಿದ್ದ ತಾಂತ್ರಿಕ ಕಾರಣಗಳು ನಿವಾರಣೆಯಾಗುವ ಹಂತದಲ್ಲಿದ್ದು, ಟಿಕೆಟ್ ವ್ಯವಸ್ಥೆ ಆಗಬೇಕಾಗಿದೆ.

ಕುವೈತ್ ರಾಯಭಾರಿ ಕಚೇರಿಯ ಉಪ ಕಾರ್ಯದರ್ಶಿ ಶಿಬಿ ಯು.ಎಸ್ ಉಪಸ್ಥಿತಿಯಲ್ಲಿ ಶೋನ್(ನ್ಯಾಯಾಲಯ ಮಾದರಿ ಸರ್ಕಾರಿ ಸ್ವಾಮ್ಯದ ಸಂಸ್ಥೆ)ನಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ನಡೆದ ಚರ್ಚೆಗೆ ಪೂರಕವಾಗಿ ಸಂತ್ರಸ್ತರ ಹಾಲಿ ವೀಸಾ ರದ್ದುಗೊಂಡರೆ ಅವರ ತಾಯ್ನಡಿಗೆ ಮರಳಲು ಅಡ್ಡಿಯಾಗಿರುವ ತಾಂತ್ರಿಕ ಕಾರಣಗಳು ಬಗೆಹರಿಯಲಿವೆ.

ಆರ್ಥಿಕ ಅಡಚಣೆ:  ವೀಸಾ ರದ್ದುಗೊಂಡ ಬಳಿಕ ಸಂತ್ರಸ್ತರಿಗೆ ಒಂದು ತಿಂಗಳು ಕುವೈತ್‌ನಲ್ಲಿಯೇ ಉಳಿಯಬಹುದಾದ ತಾತ್ಕಾಲಿಕ ವೀಸಾ ದೊರೆಯುತ್ತದೆ. ಈ ಅವಧಿಯಲ್ಲಿ ಎಲ್ಲ 75 ಸಂತ್ರಸ್ತರು ತಾಯ್ನಡಿಗೆ ಮರಳಬೇಕು. ಆದರೆ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ನೌಕರರು ಟಿಕೆಟ್‌ಗೆ ಅಗತ್ಯ ಹಣ ಹೊಂದಾಣಿಕೆ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ.  ಕುವೈತ್‌ನಲ್ಲಿ ಬಾಕಿಯಾಗಿರುವ ಕಾರ್ಮಿಕರು ಸ್ವದೇಶಕ್ಕೆ ಮರಳಲು ಅಗತ್ಯ ವ್ಯವಸ್ಥೆಯನ್ನು ಜನಪ್ರತಿನಿಧಿಗಳು ಭಾರತದ ಹಿರಿಯ ಅಧಿಕಾರಿಗಳ ನೆರವಿನೊಂದಿಗೆ ಮಾಡಬೇಕು. ಕುವೈತ್‌ಗೆ ಕಳುಹಿಸಿದ ಮಾಣಿಕ್ಯ ಸಂಸ್ಥೆಯಿಂದ ಕಾರ್ಮಿಕರನ್ನು ಭಾರತಕ್ಕೆ ಕರೆತರಲು ಟಿಕೆಟ್‌ನ ವ್ಯವಸ್ಥೆ ಮಾಡಿಕೊಡಬೇಕು ಎಂದು ಕುವೈತ್‌ನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕನ್ಸಲ್ಟೆನ್ಸಿಯ ಗೋಳು:  ಆದರೆ ಕಾರ್ಮಿಕರನ್ನು ಭಾರತದಿಂದ ಕಳುಹಿಸಿಕೊಟ್ಟಿರುವ ಸಂಸ್ಥೆಯು ಪೊಲೀಸ್ ಅಧಿಕಾರಿಗಳ ಜತೆ ತನ್ನದೇ ಕಷ್ಟಗಳನ್ನು ಹೇಳಿಕೊಂಡಿದೆ. ಭಾರತದ ಯುವಕರನ್ನು ಕುವೈತ್‌ಗೆ ಕಳುಹಿಸಿಕೊಡುವ ಸಂದರ್ಭ ಪ್ರತೀ ನೌಕರರ ಪರವಾಗಿ ತಲಾ 50 ಸಾವಿರ ರೂ. ವನ್ನು ಮುಂಬೈಯ ಹಾಕ್ ಕನ್ಸಲ್‌ಟೆನ್ಸಿ ಪ್ರೈ.ಲಿ. ಸಂಸ್ಥೆಗೆ ಪಾವತಿಸಲಾಗಿದೆ. ಇದಲ್ಲದೆ ಯುವಕರನ್ನು ವಾಹನದಲ್ಲಿ ಕಳುಹಿಸುವ ವ್ಯವಸ್ಥೆ, ಅವರ ವಾಸ್ತವ್ಯ, ಉಪಹಾರ ಮತ್ತಿತರ ಖರ್ಚುಗಳನ್ನು ಸಂಸ್ಥೆ ನೋಡಿಕೊಂಡಿದೆ. ಯುವಕರು ನೀಡಿದ 65 ಸಾವಿರ ರೂ.ನಲ್ಲಿ ಎಲ್ಲ ಖರ್ಚು ಕಳೆದು ಓರ್ವ ಯುವಕನ ನೇಮಕಾತಿಯಲ್ಲಿ ತಲಾ ಮೂರು ಸಾವಿರದಷ್ಟು ಮಾತ್ರ ನಮಗೆ ಲಾಭವಾಗಿರಬಹುದು. ಈಗ ಅವರ ದುಬಾರಿ ಪ್ರಯಾಣ ವೆಚ್ಚವನ್ನು ನಾವು ಭರಿಸಬೇಕು ಅಂದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ ಎಂದು ಸ್ಥಳೀಯ ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಮಾಣಿಕ್ಯ ಅಸೋಸಿಯೇಟ್ಸ್ ಸಂಸ್ಥೆಯು ಶನಿವಾರ ಮತ್ತೆ ಸುದ್ದಿಗೋಷ್ಠಿ ಕರೆದಿದೆ.

ಹಣ ಪಾವತಿ ಗ್ಯಾರಂಟಿ ಇಲ್ಲ
ಶೋನ್‌ನಲ್ಲಿ ನಡೆದ ಸಂಧಾನ ಸಭೆಯಲ್ಲಿ ಸಂತ್ರಸ್ತ ನೌಕರರಿಗೆ 100 ದಿನಾರ್ (22,800 ರೂ.) ಒದಗಿಸುವ ಕುರಿತು ಉದ್ಯೋಗ ನೀಡಿದ್ದ ಕಂಪನಿ ನೀಡಿರುವ ಭರವಸೆ ನಂಬುವಂತಿಲ್ಲ. ನೌಕರರು ಊರಿಗೆ ಮರಳಲು ಪರ್ಯಾಯ ವ್ಯವಸ್ಥೆ ಮಾಡಿಟ್ಟುಕೊಳ್ಳುವುದು ಸೂಕ್ತ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿ ತಿಳಿಸಿರುವ ಬಗ್ಗೆ ಮಾಹಿತಿ ದೊರೆತಿದೆ.

ಫೇಕ್ ಸಂದೇಶ !
ಪ್ರಕರಣದ ಸಂತ್ರಸ್ತ ಎಲ್ಲ 75 ಭಾರತೀಯರು ಸ್ವದೇಶಕ್ಕೆ ಮರಳಲು ಅಗತ್ಯ ಪ್ರಯಾಣದ ಟಿಕೆಟ್ ವ್ಯವಸ್ಥೆಯನ್ನು ಅನಿವಾಸಿ ಕನ್ನಡಿಗ ಮೋಹನ್‌ದಾಸ್ ಕಾಮತ್ ಹಾಗೂ ಭಾರತದ ಓರ್ವ ಉದ್ಯಮಿ ಮಾಡುತ್ತಿದ್ದಾರೆ ಎಂದು ಸುಳ್ಳು ಸಂದೇಶವೊಂದು ಹರಡುತ್ತಿದೆ ಎಂದು ಮೋಹನ್‌ದಾಸ್ ಕಾಮತ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ನಮ್ಮ ದೇಶ ಹಾಗೂ ಊರಿನ ಜನರು ಎನ್ನುವ ಕಾರಣದಿಂದ ಶಾಸಕ ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಸಹಕಾರ ಹಾಗೂ ಕುವೈತ್‌ನಲ್ಲಿರುವ ಅನಿವಾಸಿ ಕನ್ನಡಿಗರ ಬೆಂಬಲದೊಂದಿಗೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇನೆ. ನಾನು ವಿಮಾನ ಪ್ರಯಾಣದ ಟಿಕೆಟ್ ಪ್ರಾಯೋಜಕತ್ವ ಒದಗಿಸಿದ್ದೇನೆ ಎನ್ನುವ ಮಾಹಿತಿ ಸುಳ್ಳು ಎಂದು ಅವರು ಹೇಳಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ತಕ್ಷಣದ ಸ್ಪಂದನೆ ಮತ್ತು ಅನಿವಾಸಿ ಕನ್ನಡಿಗರ ಸಹಕಾರದಿಂದ ಕುವೈತ್‌ನಲ್ಲಿ ತೊಂದರೆಯಲ್ಲಿ ಸಿಲುಕಿರುವ ಭಾರತೀಯರು ಸ್ವದೇಶಕ್ಕೆ ಮರಳಲು ಇರುವ ಅಡ್ಡಿ ನಿವಾರಣೆಯಾಗುವ ಸೂಚನೆ ದೊರೆತಿದೆ. ಶಾಸಕನಾಗಿ ಹಾಗೂ ಮಾನವೀಯ ನೆಲೆಯಲ್ಲಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ.
ಡಿ.ವೇದವ್ಯಾಸ ಕಾಮತ್, ಶಾಸಕ

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...