More

    ವಿಶ್ವ ಮಾನವ ದಿನಾಚರಣೆ :  ಪೂರ್ವಭಾವಿ ಸಭೆ

    ಗದಗ: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ನಿಮಿತ್ತ ವಿಶ್ವ ಮಾನವ ದಿನಾಚರಣೆಯನ್ನು ಡಿಸೆಂಬರ್ 29 ರಂದು ಬೆಳಿಗ್ಗೆ 11  ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ದಲ್ಲಿ ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾದಿಕಾರಿ ಅನ್ನಪೂರ್ಣ ಎಂ. ತಿಳಿಸಿದರು.

    ಜಿಲ್ಲಾಡಳಿತ ಭವನದ ವಿ.ಸಿ.ಹಾಲ್‍ದಲ್ಲಿ ಗುರುವಾರದಂದು ವಿಶ್ವ ಮಾನವ ದಿನಾಚರಣೆ ಕುರಿತು ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಕಾಲೇಜು ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ  ವಿಜೇತರಿಗೆ  ದಿನಾಚರಣೆ  ದಿನದಂದು  ಬಹುಮಾನ ವಿತರಿಸಲಾಗುವುದು.

    ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣ ಮುದ್ರಿಸಲಾಗುವುದು. ಕಾರ್ಯಕ್ರಮದಲ್ಲಿ ಗಣ್ಯ ಮಾನ್ಯರುಗಳನ್ನು ಆಹ್ವಾನಿಸಲಾಗುವುದು. ಕುವೆಂಪು ಅವರ ಜೀವನ ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನೂ ಸಹ    ಏರ್ಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು  ನಿರ್ದೇಶನ ನೀಡಿದರು.

    ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರಯ್ಯ ಸ್ವಾಮಿ ಬಿ ಸರ್ವರಿಗೂ ಸ್ವಾಗತಿಸಿ ವಂದಿಸಿದರು.

    ಸಭೆಯಲ್ಲಿ ಐ.ಕೆ.ಕಮ್ಮಾರ, ಡಿ.ವಿ.ಬಡಿಗೇರ, ಅಂದಾನೆಪ್ಪ ವಿಭೂತಿ,ಮೌನೇಶ ಬಡಿಗೇರ, ಬಸವರಾಜ ವಾಲಿ, ಷರೀಫ್ ಬಿಳಿಎಲಿ ಸೇರಿದಂತೆ ಇತರರು ಹಾಜರಿದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts