More

  ವಿವೇಚನೆಯಿಂದ ಮತ ಚಲಾಯಿಸಿ, ತಾಪಂ ಇಒ ಸಲಹೆ

  ಕುಷ್ಟಗಿ: ವಿವೇಚನೆಯಿಂದ ಮತ ಚಲಾಯಿಸಿ ಸಮರ್ಥ ನಾಯಕರನ್ನು ಆಯ್ಕೆ ಮಾಡಿ ಎಂದು ತಾಪಂ ಇಒ ಹನುಮಂತಗೌಡ ಪಾಟೀಲ್ ಹೇಳಿದರು.

  ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಮತದಾನ ಕುರಿತು ಜಾಗೃತಿ ಮೂಡಿಸಿ ಗುರುವಾರ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರತಿ ಮತದಾರರು ಜವಾಬ್ದಾರಿ ನಿಭಾಯಿಸಬೇಕಿದೆ. ಹಣ ಇನ್ನಿತರ ಆಮಿಷಕ್ಕೆ ಒಳಗಾಗಿ ನಿಮ್ಮ ಹಕ್ಕನ್ನು ಮಾರಿಕೊಳ್ಳಬೇಡಿ ಎಂದು ಸಲಹೆ ನೀಡಿದರು.

  ಇದನ್ನೂ ಓದಿ: ತಂದೆ, ತಾಯಿ ಹಾಗೂ ಅಜ್ಜಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಎಂಟು ತಿಂಗಳ ಕೂಸು; ಅನಿಲ ಸೋರಿಕೆಯ ದುರಂತ ಕಥನ…

  ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಮಾತನಾಡಿ, ಕೂಲಿಕಾರರು ಸಹ ಚುನಾವಣೆ ದಿವಸ ಮತಗಟ್ಟೆಗೆ ಬಂದು ಕಡ್ಡಾಯ ಮತದಾನ ಮಾಡಬೇಕು. ಶೇ.100 ಮತದಾನಕ್ಕೆ ಸರ್ಕಾರ ವಿಭಿನ್ನ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸುತ್ತಿದೆ. ಈ ಪ್ರಯತ್ನಕ್ಕೆ ಎಲ್ಲರೂ ಸಹಕರಿಸಬೇಕಿದೆ ಎಂದರು.

  ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ರಂಗೋಲಿಯಿಂದ ಬಿಡಿಸಿದ ನಮ್ಮ ಮತ ನಮ್ಮ ಹಕ್ಕು ಎಂಬ ಘೋಷವಾಕ್ಯ ಗಮನ ಸೆಳೆಯಿತು. ಪಿಡಿಒ ಕವಿತಾ ಪಾಟೀಲ್, ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.

  ಪ್ರೌಢಶಾಲೆ ಮುಖ್ಯಶಿಕ್ಷಕ ವೈ.ಎಸ್. ಕಡೇಮನಿ, ಸರ್ಕಾರಿ ಹಿಪ್ರಾ ಶಾಲೆಯ ಮುಖ್ಯಶಿಕ್ಷಕ ಬಸವರಾಜ ರಡ್ಡಿ, ಐಇಸಿ ಸಂಯೋಜಕ ಚಂದ್ರಶೇಖರ ಹಿರೇಮಠ, ಗ್ರಾಪಂ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

  See also  ಸಭಾಭವನ ಉದ್ಘಾಟನೆ ನಾಡಿದ್ದು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts