More

    ಅಂಗಡಿ ತೆರವು ಕಾರ್ಯಾಚರಣೆಗ ಬೀದಿಯಲ್ಲಿ ಕುಳಿತು ಪ್ರತಿಭಟಿಸಿದ ಬೀದಿ ಬದಿ ವ್ಯಾಪಾರಿಗಳು

    ಕುಷ್ಟಗಿ: ಫುಟ್‌ಪಾತ್ ನಿರ್ಮಿಸುವ ಸಂಬಂಧ ಪುರಸಭೆ ಅಧಿಕಾರಿಗಳು ಶುಕ್ರವಾರ ಕೈಗೊಂಡ ಗೂಡಂಗಡಿ ತೆರವು ಕಾರ್ಯಾಚರಣೆಗೆ ಪುರಸಭೆ ರಸ್ತೆಯ ಬೀದಿಬದಿ ವ್ಯಾಪಾರಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿ, ಪ್ರತಿಭಟಿಸಿದರು.

    ಬೆಳಗ್ಗೆ ಜೆಸಿಬಿ ಯಂತ್ರದೊಂದಿಗೆ ತೆರಳಿದ ಅಧಿಕಾರಿಗಳು ಅಂಗಡಿಗಳ ತೆರವಿಗೆ ಮುಂದಾದರು. ಅಧಿಕಾರಿಗಳ ಮೌಖಿಕ ಮುನ್ಸೂಚನೆಗೆ ಕೆಲ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ತೆರವುಗೊಳಿಸಿದರೆ, ಬಹುತೇಕರು ವಿರೋಧ ವ್ಯಕ್ತಪಡಿಸಿದರು. ನೋಟಿಸ್ ನೀಡದೆ ತೆರವುಗೊಳಿಸುತ್ತಿರುವುದು ಸರಿಯಾದ ಕ್ರಮವಲ್ಲ. ಮುಂಚಿತವಾಗಿ ತಿಳಿಸಿದ್ದರೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ದಿಢೀರನೆ ಕಾರ್ಯಾಚರಣೆ ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಜೆಸಿಬಿ ಯಂತ್ರಕ್ಕೆ ಅಡ್ಡಗಟ್ಟಿ ಪ್ರತಿಭಟಿಸಲಾರಂಭಿಸಿದರು. ಸುಮಾರು ಹೊತ್ತು ಬೀದಿಯಲ್ಲೇ ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ನಿನ್ನೆಯೇ ಮೌಖಿಕವಾಗಿ ತಿಳಿಸಲಾಗಿದೆ.

    ಅಡ್ಡಿಪಡಿಸದೆಯೆ ಸಹಕರಿಸಿ ಎಂದು ಮುಖ್ಯಾಧಿಕಾರಿ ಅಶೋಕ ಪಾಟೀಲ್ ಮನವಿ ಮಾಡಿ, ಸ್ವಯಂ ತೆರವಿಗೆ 3ದಿನ ಕಾಲಾವಕಾಶ ನೀಡಿದರು. ಆಗಲೂ ಸಂಪೂರ್ಣ ತೆರವುಗೊಳಿಸದಿದ್ದರೆ ಪೊಲೀಸರ ರಕ್ಷಣೆಯೊಂದಿಗೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಇದಕ್ಕೆ ಆಸ್ಪದ ನೀಡಬಾರದು ಎಂದು ತಾಕೀತು ಮಾಡಿ, ತೆರಳಿದರು.

    ಅಭಿವೃದ್ಧಿಗೆ ಅಡ್ಡಿ ಬೇಡ: ಕುಷ್ಟಗಿ ಪಟ್ಟಣ ಬೆಳವಣಿಗೆಯಾಗುತ್ತಿದ್ದು, ಜನಸಂದಣಿ ಹೆಚ್ಚುತ್ತಿದೆ. ರಸ್ತೆ ಅಭಿವೃದ್ಧಿ ಪಡಿಸಿ ಅಕ್ಕ ಪಕ್ಕ ಫುಟ್‌ಪಾತ್ ನಿರ್ಮಿಸಬೇಕಿದೆ. ಇದರಿಂದ ಪಟ್ಟಣದ ಅಂದ ಹೆಚ್ಚುವುದಲ್ಲದೇ ಸಂಚಾರ ಸುಗಮವಾಗುತ್ತದೆ. ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುವ ಕಾರ್ಯವಾಗದಿರಲಿ ಎಂಬ ಅಭಿಪ್ರಾಯ ಪಟ್ಟಣದಲ್ಲಿ ಕೇಳಿಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts