More

    ಕುಷ್ಟಗಿ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಆಂಗ್ಲ ಭಾಷೆ ಬೋಧನೆಗೆ ಹೊಸ ಪ್ರಯೋಗ

    ಕುಷ್ಟಗಿ: ಆಂಗ್ಲ ಭಾಷೆ ವಿಷಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುವಂತಾಗಲಿ ಎಂಬ ಉದ್ದೇಶದಿಂದ ಪಟ್ಟಣದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಸಂಜಯ್ ಬಡಿಗೇರ ವಿನೂತನ ಪ್ರಯೋಗ ಕೈಗೊಂಡಿದ್ದಾರೆ.

    ಜಿಲ್ಲೆಯ ವಿವಿಧ ತಾಲೂಕಿನ ಉಪನ್ಯಾಸಕರನ್ನು ಕರೆಯಿಸಿಕೊಂಡು ಭಾನುವಾರದ ವಿಶೇಷ ತರಗತಿ ನಡೆಸಿದ್ದಾರೆ. ಆಹ್ವಾನಿತ ಉಪನ್ಯಾಸಕರು ಪಿಯು ದ್ವಿತಿಯ ವರ್ಷದ ಆಂಗ್ಲ ವಿಷಯದ ಪಠ್ಯದಲ್ಲಿರುವ 6 ಪದ್ಯಗಳನ್ನು ತಲಾ ಒಂದರಂತೆ ಬೋಧಿಸಿದ್ದಾರೆ. ಯಲಬುರ್ಗಾ ತಾಲೂಕು ಬೇವೂರು ಕಾಲೇಜಿನ ಲಿಂಗರಾಜ ಯತ್ನಳ್ಳಿ, ಕನಕಗಿರಿಯ ಸರ್ಕಾರಿ ಪಿಯು ಕಾಲೇಜಿನ ಶಿವಪ್ಪ ಹಲ್ಕಿ, ಗಂಗಾವತಿ ತಾಲೂಕು ಸಿದ್ದಾಪುರ ಕಾಲೇಜಿನ ಶರಣಪ್ಪ ಬೆನ್ನೂರು, ಮುನಿರಾಬಾದ್ ವಿಜಯನಗರ ಪಿಯು ಕಾಲೇಜಿನ ರವಿಪ್ರಕಾಶ, ಕುಕನೂರು ವಿದ್ಯಾನಂದ ಗುರುಕುಲ ಕಾಲೇಜಿನ ಆರ್.ಕೆ.ಪಾಟೀಲ್ ಹಾಗೂ ಗಂಗಾವತಿಯ ಸರೋಜಮ್ಮ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಕೆ.ಕೋಳನ್ನವರ್ ಪಾಠ ಬೋಧಿಸಿದರು.

    ಆಂಗ್ಲಭಾಷೆ ವಿಷಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆಯುತ್ತಿದ್ದಾರೆ. ಒಟ್ಟು ಅಂಕದಲ್ಲಿ ಪದ್ಯ(ಪೋಯಮ್) ಭಾಗಕ್ಕೆ 20ಅಂಕಗಳಿರುತ್ತವೆ. ಎಲ್ಲ ಪದ್ಯ ಬೋಧನೆ ಈಗಾಗಲೇ ಪೂರ್ಣಗೊಂಡಿದೆ. ಪುನರಾವರ್ತನೆ ಉದ್ದೇಶದಿಂದ ಹೊಸ ಪ್ರಯೋಗ ಕೈಗೊಳ್ಳಲಾಗಿದೆ. ಯಶಸ್ವಿಯಾದರೆ ಗಣಿತ ಹಾಗೂ ವಿಜ್ಞಾನ ವಿಭಾಗಗಳಲ್ಲೂ ಕೈಗೊಳ್ಳುವ ಯೋಚನೆ ಇದೆ ಎಂದು ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಸಂಜಯ್ ಬಡಿಗೇರ ತಿಳಿಸಿದರು. ಪ್ರಾಚಾರ್ಯ ಡಿ.ಬಿ.ಗಡೇದ ಹಾಗೂ ಇತರ ಉಪನ್ಯಾಸಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts