ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಕುಶಾಲನಗರ: ಮೇರ ಪರಿವಾರ್ ಬಿಜೆಪಿ ಪರಿವಾರ್ ವಾರ್ಡ್ ಮಟ್ಟದ ಜಾಗೃತಿ ಕಾರ್ಯಕ್ರಮ ಕುಶಾಲನಗರ ಪಪಂ ಸದಸ್ಯ ಅಮತ್‌ರಾಜ್ ಅವರ ನಿವಾಸದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಅಮತ್‌ರಾಜ್ ಅವರ ನಿವಾಸದಲ್ಲಿ ಬಿಜೆಪಿ ಧ್ವಜ ಅಳವಡಿಸುವ ಮೂಲಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಬೇಕಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಈವರೆಗಿನ ಕೇಂದ್ರದ ಜನಪರ ಯೋಜನೆಗಳು, ಕಾರ್ಯಕ್ರಮಗಳು, ಸಾಧನೆಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ. ನೂತನ ಮತದಾರರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದರು.

ಈ ವೇಳೆ ಪಪಂ ಸದಸ್ಯ ಅಮತ್‌ರಾಜ್, ಬಿಜೆಪಿ ಪ್ರಮುಖರಾದ ಉಮಾಶಂಕರ್, ಬೂತ್ ಪದಾಧಿಕಾರಿಗಳಾದ ವೈಶಾಖ್, ಪ್ರವೀಣ್, ಆದರ್ಶ್, ಬಾಲಾಜಿ, ಕೆ.ಆರ್.ಜಗದೀಶ್, ಶರ್ಮ, ಶಾಂತಿಲಾಲ್ ಇದ್ದರು.