ಕೆರೆಯಲ್ಲಿ ಮುಳುಗಿ ಬಾಲಕ ಮೃತ

ಕುರುಗೋಡು: ತಾಲೂಕಿನ ಯರಿಂಗಳಿಯ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಹರಿಜನ ವಸಂತ ಪರಸಪ್ಪ(13) ಮೃತ ಬಾಲಕ. ಸಹಿಪ್ರಾ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ವಸಂತ ಶನಿವಾರ ಶಾಲೆ ಮುಗಿಯುತ್ತಿದ್ದಂತೆ ಬಿಸಿಲ ಧಗೆ ತಾಳಲಾಗದೇ ಸಹಪಾಠಿ ಬಾಬು ಜತೆ ಶಾಂತ ವೀರಭದ್ರಗೌಡರ ಜಮೀನಿನಲ್ಲಿರುವ ಕೆರೆಗೆ ಈಜಲು ತೆರಳಿದ್ದಾನೆ. ಈಜು ಬಾರದೇ ವಸಂತ ನೀರಿನಲ್ಲಿ ಮುಳುಗಿದ್ದಾನೆ. ಮೃತ ದೇಹ ಪತ್ತೆಯಾಗದ ಕಾರಣ ಪಾಲಕರು ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ, ಈಜುಗಾರರ ನೆರವಿನಿಂದ ಪೊಲೀಸರು ಭಾನುವಾರ ಬಾಲಕನ ಮೃತ ದೇಹ ಪತ್ತೆ ಹಚ್ಚಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಸಿದ್ದರಾಮೇಶ್ವರ ಗಡೇದ್, ಸಿಪಿಐ ಬಿ.ಮಂಜುನಾಥ ಭೇಟಿ ನೀಡಿ ಪರಿಶೀಲಿಸಿದ್ದಾರೆ.