ಬಿರುಗಾಳಿ ಸಹಿತ ಮಳೆಯಿಂದ ಹಾನಿ

ಕುರುಗೋಡು: ತಾಲೂಕಿನ ಕೆಲ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ. ಬಸರಕೋಡು ಗ್ರಾಮದಲ್ಲಿ ಮಳೆ ನಾನಾ ಆವಾಂತರಗಳು ಸೃಷ್ಠಿಸಿದೆ.

ಸುಮಾರು 10ಕ್ಕೂ ಹೆಚ್ಚು ಬೃಹತ್ ಮರಗಳು ಧರೆಗುರುಳಿವೆ. 2 ಮನೆಗಳ ಛಾವಣಿ ಶೀಟ್‌ಗಳು ಗಾಳಿಗೆ ಹಾರಿವೆ. 10 ವಿದ್ಯುತ್ ಕಂಬಗಳು ಬಿದ್ದಿವೆ. ಇದರಿಂದ ವಿದ್ಯುತ್ ವ್ಯತ್ಯಯ ಜತೆಗೆ ಸಂಚಾರಕ್ಕೆ ಅಡ್ಡಿಯಾಗಿದೆ. ರಾತ್ರಿಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಜನತೆ ಕತ್ತಲಲ್ಲಿ ಕಾಲಕಳೆದರು. ಶುದ್ದ ಕುಡಿವ ನೀರಿನ ಘಟಕಗಳು ವಿದ್ಯುತ್ ಇಲ್ಲದೆ ಸ್ಥಗಿತಗೊಂಡಿವೆ. ಕಂದಾಯ ಪರಿವೀಕ್ಷಕ ಅನಂತಕುಮಾರ ಶ್ರೇಷ್ಠಿ, ಗ್ರಾಮ ಲೆಕ್ಕಾಧಿಕಾರಿ ಗಂಗಾಧರ, ಪಿಡಿಒ ತಿಮ್ಮಪ್ಪ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಸಿಡಿಲಿಗೆ 13 ಮೇಕೆಗಳು ಬಲಿ
ಕೊಟ್ಟೂರು: ತಾಲೂಕಿನ ಕೆ.ಕೋಡಿಹಳ್ಳಿ ತಾಂಡಾದ ಹನುಮಂತಪ್ಪಗೆ ಸೇರಿದ 13 ಮೇಕೆಗಳು ಮಂಗಳವಾರ ಸಂಜೆ ಸಿಡಿಲಿಗೆ ಬಲಿಯಾಗಿವೆ. ತಾಂಡಾದ ಸಮೀಪದ ಹೊಲದಲ್ಲಿ ಸಂಜೆ ಮೇಕೆಗಳು ಮೇಯುತ್ತಿರುವಾಗ ಸಿಡಿಲು ಅಪ್ಪಳಿಸಿದ್ದರಿಂದ ಮೇಕೆಗಳು ಸತ್ತಿವೆ. ಸಂಜೆ ತುಂತುರು ಮಳೆ, ಗಾಳಿ ನಡುವೆ ಸಿಡಿಲು ಅಪ್ಪಳಿಸಿದೆ ಎಂದು ಕಣ್ಣೀರಿಡುತ್ತ ಹನುಮಂತಪ್ಪ ನೋವು ತೋಡಿಕೊಂಡರು. ಘಟನಾ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಭಾರತಿನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಪ್ರಕೃತಿ ವಿಕೋಪದಡಿ ಪರಿಹಾರ ನೀಡುವುದಾಗಿ ತಹಸೀಲ್ದಾರ್ ಅನಿಲ್ ಕುಮಾರ್ ತಿಳಿಸಿದ್ದಾರೆ.

ಕೊಟ್ಟೂರು ತಾಲೂಕು ಕೆ.ಕೋಡಿಹಳ್ಳಿ ತಾಂಡಾದಲ್ಲಿ ಮಂಗಳವಾರ ಸಿಡಿಲಿಗೆ ಹನುಮಂತಪ್ಪರ 13 ಮೇಕೆಗಳು ಬಲಿಯಾಗಿರುವುದು.

Leave a Reply

Your email address will not be published. Required fields are marked *