ನಿವೇಶನ ನೀಡುವಂತೆ ಲಕ್ಷ್ಮಿಪುರ ನಿವಾಸಿಗಳಿಂದ ಧರಣಿ

ಕುರುಗೋಡು: ನಿವೇಶನ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ತಾಲೂಕಿನ ಲಕ್ಷ್ಮಿಪುರದ ಎಚ್‌ಎಲ್‌ಸಿ ಅಕ್ಕಪಕ್ಕದ ನಿವಾಸಿಗಳು ಶನಿವಾರ ಗ್ರಾಮದಲ್ಲಿ ಅನಿರ್ದಿಷ್ಟಾವಧಿ ಧರಣಿ ಕೈಗೊಂಡರು.

ಗ್ರಾಮದಲ್ಲಿ ಹಾದು ಹೋಗಿರುವ ಎಚ್‌ಎಲ್ ಸೂಗೂರು ವಿತರಣಾ ಕಾಲುವೆ ಅಕ್ಕಪಕ್ಕದಲ್ಲಿ ಸುಮಾರು 20 ವರ್ಷಗಳಿಂದ ಗುಡಿಸಲು ಹಾಗೂ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದೇವೆ. ಈಗ ಏಕಾಏಕಿ ಕಾಲುವೆ ಆಧುನೀಕರಣದ ನೆಪವೊಡ್ಡಿ ನಮ್ಮನ್ನು ಒಕ್ಕಲೆಬ್ಬಿಸಲು ಸರ್ಕಾರ ಹಾಗೂ ಅಧಿಕಾರಿಗಳು ಹುನ್ನಾರ ನಡೆಸುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದರು.

ನಿವಾಸಿ ಹಿಮಾಬಿಂದು ಮಾತನಾಡಿ, ಚುನಾವಣೆ ಬಹಿಷ್ಕರಿಸುವುದಾಗಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದರು. ನಿವಾಸಿಗಳಾದ ಗೀತಾ, ರೇಣುಕಾ, ರೇವತಿ, ಹನುಮಂತಮ್ಮ, ಹುಲಿಗೆಮ್ಮ, ಹಂಪಮ್ಮ, ನೀಲಮ್ಮ, ತಿಪ್ಪಮ್ಮ, ಪಾರ್ವತಿ, ಜ್ಯೋತಿ, ಚಂದ್ರಕಲಾ, ಲಿಂಗಮ್ಮ, ವಿ.ಎಸ್.ಶಿವಶಂಕರ, ಗಾಳಿ ಬಸವರಾಜ, ಎನ್.ಸೋಮಪ್ಪ, ಎಚ್.ಕೆಂಚಪ್ಪ, ಎನ್.ದೊಡ್ಡಪ್ಪ ಇತರರಿದ್ದರು.

Leave a Reply

Your email address will not be published. Required fields are marked *