18 C
Bengaluru
Saturday, January 18, 2020

ಕುಪ್ಪೂರು ಜಾತ್ರೆಗೆ ಸುತ್ತೂರ ಸಂಭ್ರಮ; ಡಿ.11ರಿಂದ ಧಾರ್ಮಿಕ ಕಾರ್ಯಕ್ರಮ

Latest News

ನವದೆಹಲಿಯಲ್ಲಿ ಜನವರಿ 20ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ವಿದ್ಯಾರ್ಥಿನಿ ವೇದಾ ಆಯ್ಕೆ

ಹಾವೇರಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ. ಹಾವೇರಿ ಜಿಲ್ಲೆಯ ಬ್ಯಾಡಗಿ ವಿದ್ಯಾರ್ಥಿನಿ ಪಿ‌. ವೇದಾ ಆಯ್ಕೆಯಾಗಿದ್ದು, ಜನವರಿ 20...

ಕರ್ಮ ಎಂಬ ಬಿಡಲಾರದ ನಂಟು

ಭಗವಂತನನ್ನು ಪ್ರತ್ಯಕ್ಷಿಸಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕೆ ಸ್ವಪ್ರಜ್ಞೆಯ ಸಂಪೂರ್ಣ ತಪಸ್ಸು ಅಗತ್ಯ. ನಿರಾಕಾರದಲ್ಲಿ ಬ್ರಹ್ಮನನ್ನು ಕಾಣಲು ಉಚ್ಚಮಟ್ಟದ ಸಾಧನೆ ಬೇಕಾಗುವುದು. ಅದಕ್ಕೆ ಸಮಾಜದಲ್ಲಿ...

ಅಮೃತಬಿಂದು

ನ ಧನಾದೌ ವಹೇಲ್ಲೋಭಂ ಶಿವಸ್ಯಾರಾಧನೇ ವಹೇತ್ | ಅಲೋಭಾಖ್ಯಮಿದಂ ಶೀಲಂ ತ್ರಯತ್ರಿಂಶಂ ಸಮೀರಿತಮ್ || ಶಿವನ ಆರಾಧನೆಯ ವಿಷಯದಲ್ಲಿ ಲೋಭ ತಾಳಬೇಕೇ ಹೊರತು ಧನ,...

ಲಾಲ್​ಬಾಗ್​ನಲ್ಲಿ ವಿವೇಕ-ಆನಂದದ ಸುಗಂಧ; 211ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ, 26ರವರೆಗೆ ಆಯೋಜನೆ

ಬೆಂಗಳೂರು: ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದರ ಸ್ಮಾರಕದ ಪ್ರತಿಕೃತಿ, 16 ಅಡಿ ಎತ್ತರದ ಪ್ರತಿಮೆಯ ಮಾದರಿ, ವರ್ಟಿಕಲ್ ಉದ್ಯಾನ.. ಇವು ಲಾಲದಬಾಗ್​ನಲ್ಲಿ ಆಯೋಜನೆಗೊಂಡಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಜನಾಕರ್ಷಿಸುತ್ತಿರುವ...

ಸುದ್ದಿವಾಹಿನಿಗಳಿಗೆ ನಿರ್ಬಂಧದ ಅರ್ಜಿ ಇತ್ಯರ್ಥ

ಬೆಂಗಳೂರು: ವಿಧಾನಸಭೆ ಕಲಾಪದ ನೇರಪ್ರಸಾರಕ್ಕೆ ಸುದ್ದಿವಾಹಿನಿಗಳನ್ನು ನಿರ್ಬಂಧಿಸಿರುವ ಸ್ಪೀಕರ್ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಇತ್ಯರ್ಥಪಡಿಸಿರುವ ಹೈಕೋರ್ಟ್, ಈ ಸಂಬಂಧ ಸ್ಪೀಕರ್ ಅವರಿಗೇ ಮನವಿ ಸಲ್ಲಿಸುವಂತೆ...

ಜಾತ್ರೆ ಎಂದರೆ ಆ ಊರಿನಲ್ಲಿ ಸುತ್ತಮುತ್ತಲ ಗ್ರಾಮಗಳ ಭಕ್ತರು ಒಂದೆಡೆ ಸೇರಿ ದೇವರ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಪಡುತ್ತಾರೆ. ಆದರೆ ಕುಪ್ಪೂರು ಜಾತ್ರೆ ಬಂತೆಂದರೆ ಸುತ್ತಮುತ್ತಲ ಎಲ್ಲ ಊರುಗಳಲ್ಲೂ ಜಾತ್ರೆಯ ಸಂಭ್ರಮ ಮನೆ ಮಾಡಿರುತ್ತದೆ. ಕುಪ್ಪೂರು ಗದ್ದಿಗೆ ಮಠದ ಇತಿಹಾಸದಲ್ಲಿ ಮಠದ ಗೋಪುರವನ್ನು ಕಟ್ಟಿಸಿದವನು ಹೈದರ್ ಖಾನ್ ಎಂಬ ಮುಸ್ಲಿಂ ಅಧಿಕಾರಿ. ಕೋಮು ಸೌಹಾರ್ದತೆಯ ತಾಣವಾದ ಕುಪ್ಪೂರು ಜಾತ್ರೆ ಎಂದರೆ ಸರ್ವಧರ್ವಿುಯರಿಗೂ ಸಂಭ್ರಮ. ಜಾತಿ, ಮತವೆನ್ನದೆ ಸರ್ವರೂ ತಮ್ಮ ತಮ್ಮ ಊರುಗಳಲ್ಲಿ ಮರುಳಪ್ಪಜ್ಜಯ್ಯನ ಉತ್ಸವ ಮಾಡಿ ಪಾನಕ ವಿತರಿಸಿ ಜಾತ್ರೆ ಮಾಡುತ್ತಾರೆ.

ಕುಪ್ಪೂರು ಮಠದ ಕರ್ತೃ ಶ್ರೀಮರುಳಸಿದ್ದೇಶ್ವರ ಸ್ವಾಮಿಗಳಿಗೆ ಅನ್ನದಾನಿ ಅಜ್ಜಯ್ಯ ಎಂದು ಕರೆಯುತ್ತಾರೆ. ಶ್ರೀಮಠದ ಬಸವ (ಎತ್ತು) ಬಂದು ಸ್ವತಃ ಅನ್ನದ ರಾಶಿಯ ಮೇಲೆ ಪಾದವನ್ನಿಟ್ಟು ದಾಸೋಹಕ್ಕೆ ಚಾಲನೆ ನೀಡುವ ದೃಶ್ಯ ರೋಮಾಂಚಕಾರಿ. ತುಮಕೂರು ಭಾಗದಲ್ಲಿ ಕುಪ್ಪೂರು ಜಾತ್ರೆ ಪ್ರಸಿದ್ಧವಾಗಿದ್ದು, ಜಾತ್ರೆಯಲ್ಲಿ ಸಾವಿರಾರು ಭಕ್ತರು ಮರುಳಪ್ಪಜ್ಜಯ್ಯನ ಪ್ರಸಾದ ಸ್ವೀಕರಿಸುತ್ತಾರೆ.

ಕುಪ್ಪೂರು ಗದ್ದುಗೆ ಮಠದ ಇತಿಹಾಸ: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಜಗದ್ಗುರು ರಂಭಾಪುರಿ ಶಾಖಾ ಕುಪ್ಪೂರು ಗದ್ದುಗೆ ಮಠವು ಸುಮಾರು ಐದು ಶತಮಾನಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಶ್ರೀಮರುಳಸಿದ್ದೇಶ್ವರ ಶಿವಯೋಗಿಗಳು ಜೀವಂತ ಸಮಾಧಿಯಾದ ಸ್ಥಳವೇ ಇಂದು ಕುಪ್ಪೂರು ಗದ್ದಿಗೆ ಮಠವಾಗಿ ಪ್ರಖ್ಯಾತವಾಗಿದೆ. ಅವರಿಂದ ಆರಂಭವಾದ ಗುರುಪರಂಪರೆಯಲ್ಲಿ ಮರುಳಸಿದ್ದೇಶ್ವರ ಸ್ವಾಮಿಗಳ ವಂಶಸ್ಥರೇ ಆದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಕಾಲದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಅವರ ನಂತರ ಪಟ್ಟಾಧ್ಯಕ್ಷರಾದ ಸದ್ಯದ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಕುಪ್ಪೂರು ಗದ್ದಿಗೆ ಮಠದ ಸರ್ವಾಂಗೀಣ ಅಭಿವೃದ್ಧಿ ಮಾಡುವುದರ ಜೊತೆಗೆ, ಧಾರ್ವಿುಕವಾಗಿ ಪ್ರಖ್ಯಾತವಾಗಿದ್ದ ಶ್ರೀಮಠವನ್ನು ಸಾಮಾಜಿಕವಾಗಿ,  ಸಾಂಸ್ಕೃತಿಕವಾಗಿ ಅಭಿವೃದ್ಧಿ ಪಡಿಸಿದ್ದಾರೆ.

ಡಿ. 11ರಿಂದ ಜಾತ್ರಾ ಮಹೋತ್ಸವ: ಪ್ರತಿವರ್ಷ ಪುಷ್ಯಮಾಸದ ಪೌರ್ಣಿಮೆಯ ಪರ್ವಕಾಲದಲ್ಲಿ ಮೂರು ದಿನಗಳ ಕಾಲ ಕುಪ್ಪೂರಿನಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಅದರಂತೆ ಇದೇ 11ರಿಂದ 13ರವರೆಗೆ ವಿವಿಧ ಧಾರ್ವಿುಕ. ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. 11ರಂದು ಷಟ್​ಸ್ಥಲ ಧ್ವಜಾರೋಹಣದೊಂದಿಗೆ ಶ್ರೀ ಗಣಪತಿ ಹೋಮ, ಮೃತ್ಯುಂಜಯ ಹೋಮ, ಏಕಾದಶ ರುದ್ರಹೋಮ ನಡೆಯಲಿವೆ.

12ರಂದು ಮರುಳಸಿದ್ದೇಶ್ವರ ಮಹಾಲಿಂಗಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆಯ ನಂತರ ಸ್ವಾಮಿಯ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ, ವೃಷಭೋತ್ಸವ, ಕೃತಿಕೋತ್ಸವವು ಸಕಲ ಮಂಗಲವಾದ್ಯ ವೈಭವದೊಂದಿಗೆ ನಡೆಯಲಿವೆ. ಮಧ್ಯಾಹ್ನ ನಂದೀಶ್ವರನ ಪಾದಸ್ಪರ್ಶದೊಂದಿಗೆ ಮಹಾ ದಾಸೋಹಕ್ಕೆ ಚಾಲನೆ ದೊರೆಯಲಿದೆ. ಸಂಜೆ ಜನಜಾಗೃತಿ ಭಾವೈಕ್ಯ ಧರ್ಮಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ 2019ನೇ ಸಾಲಿನ ‘ಕುಪ್ಪೂರು ಮರುಳಸಿದ್ದ ಶ್ರೀ’ ಪ್ರಶಸ್ತಿ ಮತ್ತು ಡಾ.ಎಸ್.ಸಿ. ನಾಗರತ್ನ ಅವರಿಗೆ ‘ಧರ್ಮ ನಂದಿನಿ’ ಮತ್ತು ಎಸ್.ಶಿವರಾಜ್ ಅವರಿಗೆ ‘ಧರ್ಮ ರತ್ನಾಕರ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಮಾರಂಭದಲ್ಲಿ ಸಚಿವ ಮಾಧುಸ್ವಾಮಿಯವರು ‘ಕುಪ್ಪೂರು ಶ್ರೀಗುರು ಮರುಳಸಿದ್ದೇಶ್ವರ ಮಹಾಪುರಾಣ ವ್ಯಾಖ್ಯಾನ ಗ್ರಂಥ’ ಲೋಕಾರ್ಪಣೆಗೊಳಿಸಲಿದ್ದಾರೆ. 13ರಂದು ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾರಥೋತ್ಸವ ನಡೆಯಲಿದ್ದು, ನಾಡಿನ ವಿವಿಧ ಮಠಾಧೀಶರು, ಗಣ್ಯರು, ಸಾಹಿತಿಗಳು, ಸಾವಿರಾರು ಭಕ್ತರು ಈ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

| ಪ್ರಶಾಂತ್​ ರಿಪ್ಪನ್​ಪೇಟೆ

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...