ಲಿಂಗಸುಗೂರು: ಸಮೀಪದ ಕುಪ್ಪಿಗುಡ್ಡ ಸೀಮಾದ ಸಿದ್ಧಿ ವೀರಾಂಜನೇಯ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.

ಕುಪ್ಪಿಗುಡ್ಡ ಸೀಮಾದ ಸರ್ಕಾರಿ ಪ್ರೌಢ ಶಾಲೆ ಹಿಂಬದಿಯ ಚನ್ನಬಸವ ಮಹಾಸ್ವಾಮಿಗಳ ವಿಭೂತಿಮಠದ ಎದುರುಗಡೆ ಕುಪ್ಪಿಗುಡ್ಡ ಮತ್ತು ಸರ್ಜಾಪುರ ಗ್ರಾಮದ ಪ್ರಮುಖರು ಸೇರಿ ಆರು ತಿಂಗಳ ಹಿಂದೆ ಕಾಂಕ್ರಿಟ್ ಕಟ್ಟೆಕಟ್ಟಿ, ಪೀಠ ನಿರ್ಮಿಸಿ ಸಿದ್ಧಿ ವೀರಾಂಜನೇಯ ಮೂರ್ತಿ ಸ್ಥಾಪಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದರು. ಆದರೆ, ಸಿದ್ಧಿ ವೀರಾಂಜನೇಯ ಮೂರ್ತಿಯನ್ನು ಯಾರೋ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದು, ಮೇ 15ರಂದು ಸಂಜೆ ಗ್ರಾಮಸ್ಥರಿಗೆ ಗೊತ್ತಾಗಿದೆ.
ಮೂರ್ತಿಯನ್ನು ನಾಲ್ಕು ಭಾಗಗಳಾಗಿ ಒಡೆದು ಹಾಕಿ ಧಾರ್ಮಿಕ ಭಾವನೆಗಳಿ ಧಕ್ಕೆ ಉಂಟು ಮಾಡಲಾಗಿದೆ. ದುಷ್ಕರ್ಮಿಗಳನ್ನು ಪತೆ ್ತಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮದ ಹನುಮಂತ್ರಾಯ ನೆಲೋಗಿ ನೀಡಿದ ದೂರಿನನ್ವಯ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.