18 C
Bangalore
Friday, December 6, 2019

ಮೂವತ್ತುಮುಡಿ ನೀರು ಕೊಡಿ!

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಶ್ರೀಪತಿ ಹೆಗಡೆ ಹಕ್ಲಾಡಿ ಮೂವತ್ತುಮುಡಿ

ನಾವು ಚಕ್ರಾನದಿ ದಂಡೆ ಮೇಲಿದ್ದೇವೆ. ನೀರಿಗಾಗಿ ಪ್ರತಿದಿನ 350 ರೂ. ಖರ್ಚು ಮಾಡುತ್ತೇವೆ. ನಳ್ಳಿಯಲ್ಲಿ ನೀರು ಬರುವುದಿಲ್ಲ. ಚುನಾವಣೆ ಸಂದರ್ಭ ಜನಪ್ರತಿನಿಧಿಗಳು ಬರುತ್ತಾರೆ. ನೀರಿನ ಸಮಸ್ಯೆ ಕೇಳಿ ಯಾರತ್ರವೋ ಮಾತನಾಡಿ ನೀರು ಕೊಡಿ ಎಂದು ಹೇಳಿ ಹೋಗುತ್ತಾರೆ. ಮತ್ತೆ ಬರೋದು ಇನ್ನೊಂದು ಚುನಾವಣೆಗೆ!

ಇದು ಮೂವತ್ತುಮುಡಿ ಜನರ ಕುಡಿಯುವ ನೀರಿನ ಬವಣೆ. ಕುಂದಾಪುರ ತಾಲೂಕು, ಹೆಮ್ಮಾಡಿ ಗ್ರಾಮ ಪಂಚಾಯಿತಿ ಅರಾಟೆ ಸೇತುವೆ ಕೆಳಗಿನ ಮೂವತ್ತುಮುಡಿ ನಿವಾಸಿಗಳಿಗೆ ಕುಡಿಯುವ ನೀರು ಹಾಗೂ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಜತೆ ಏಗಬೇಕಾದ ಸ್ಥಿತಿ.

ಗ್ರಾಪಂ ಸಾಮಾನ್ಯ ಸಭೆಯಲ್ಲಿ ಜನ ಕಷ್ಟ ಹೇಳಿಕೊಂಡಿದ್ದಾರೆ. ಹೆದ್ದಾರಿ ವಿಸ್ತರಣೆ ಜತೆ ಪೈಪ್‌ಲೈನ್ ಒಡೆದು ಹೋಗಿದ್ದು, ದುರಸ್ತಿ ಮಾಡಿ ನೀರು ಬಿಡುತ್ತೇವೆ ಎನ್ನುತ್ತಾರೆ. ನಾಲ್ಕು ವರ್ಷದಿಂದ ಗ್ರಾಪಂ ಇದನ್ನೇ ಹೇಳುತ್ತಿದೆ. ಶಾಶ್ವತವಾಗಿ ಕುಡಿಯುವ ನೀರಿನ ಬವಣೆ ತಪ್ಪಿಸುವರು ಯಾರು ಇಲ್ಲವೇ ಎಂಬುದು ಸ್ಥಳೀಯರ ಪ್ರಶ್ನೆ.
ಮೂವತ್ತುಮುಡಿ ನಿವಾಸಿಗಳು ಭತ್ತ, ತೆಂಗು ಬೆಳೆಯುತ್ತಿದ್ದರು. ಮಳೆಗಾಲದಲ್ಲಿ ಗದ್ದೆ ಬಯಲಲ್ಲಿ ನೀರು ತುಂಬುವುದರಿಂದ ಭತ್ತದ ಕೃಷಿಯನ್ನೂ ಮಾಡದೆ ಗದ್ದೆ ಹಡೀಲು ಬಿಟ್ಟಿದ್ದಾರೆ. ಬಾಳೆ ಕೃಷಿ ನೀರಿಲ್ಲದೆ ಕರಟಿದೆ. ಹೈನುಗಾರಿಕೆಯೇ ಜೀವನಾಧಾರವಾಗಿದ್ದು, ಜಾನುವಾರುಗಳಿಗೂ ನೀರು ಕೊಡಲು ಪರದಾಟ ಮಾಡುವ ಸ್ಥಿತಿ ಇದೆ.

ಕುಂದಾಪುರ-ಕಾರವಾರ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾದಂದಿನಿಂದ ಇಲ್ಲಿ ಕುಡಿಯುವ ನೀರಿನ ಗೋಳು ಶುರುವಾಗಿದೆ. ಮಣ್ಣು ಅಗೆದು ಹಾಕಿದ್ದರಿಂದ ನೀರಿನ ಪೈಪ್ ಒಡೆದು ಹೋಗಿದ್ದರಿಂದ ಸಮಸ್ಯೆಗಳಿಗೆ ಕಾರಣ ಎನ್ನುತ್ತಿದ್ದು, ಒಡೆದ ಪೈಪ್ ದುರಸ್ತಿ ಮಾಡೋದಕ್ಕೆ ಸಮಸ್ಯೆಯಾದರೂ ಏನೆಂಬುದು ತಿಳಿಯುತ್ತಿಲ್ಲ. ನೀರು ಪೂರೈಕೆ ಮಾಡದಿದ್ದರೆ ಎಲ್ಲರೂ ಗ್ರಾಪಂ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡುತ್ತೇವೆ. ನಮ್ಮ ಸಮಸ್ಯೆ ಪರಿಹಾರವಾಗದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಇಲ್ಲಿನ ಜನ ಎಚ್ಚರಿಸಿದ್ದಾರೆ.

ಟ್ಯಾಂಕ್ ನೀರಿಗೆ 350 ರೂ.!: ಮೂವತ್ತುಮುಡಿ ಪರಿಸರದಲ್ಲಿ ಮನೆಗೊಂದರಂತೆ ಬಾವಿ ಇದೆ. ಮಳೆಗಾಲ ಕಳೆದ ಮೇಲೆ ಬಾವಿಯಲ್ಲಿ ಸಾಕಷ್ಟು ನೀರಿದ್ದರೂ ಬಳಕೆಗೆ ಸಿಗದು. ಬಟ್ಟೆ ತೊಳೆಯುವುದಕ್ಕೂ ನೀರು ಉಪಯುಕ್ತವಲ್ಲ. ಬೇಸಿಗೆಯಲ್ಲಿ ಒಂದು ಕೊಡ ನೀರಿಗೆ ಕಿ.ಮೀ.ಗಟ್ಟಲೇ ಅಲೆದಾಡಬೇಕು. ಒಂದು ಟ್ಯಾಂಕ್ ನೀರಿಗೆ 350 ರೂ. ಕೊಟ್ಟು ಖರೀದಿಸುತ್ತಿದ್ದು, ಅದೂ ಸಾಲುತ್ತಿಲ್ಲ. ಜನ ದಿನಬಳಕೆ ನೀರಿಗೆ ಹಣ ಕೊಡುತ್ತಿದ್ದರೂ ಆಡಳಿತ ಈ ಬಗ್ಗೆ ಗಮನ ಹರಿಸದಿರುವುದು ಅಚ್ಚರಿಯ ವಿಷಯ.

ನಾಲ್ಕು ವರ್ಷದಿಂದ ಕುಡಿಯುವ ನೀರು ಸಮಸ್ಯೆ ಹೇಳಿಕೊಂಡು ಅಲೆಯುತ್ತಿದ್ದು, ಹಣ ಕೊಟ್ಟು ನೀರು ಪಡೆಯುವ ಸ್ಥಿತಿ ಬದಲಾಗಿಲ್ಲ. ಅಕ್ಟೋಬರ್‌ನಿಂದ ನೀರಿನ ಸಮಸ್ಯೆ ಎದುರಾಗುತ್ತದೆ. ಕಳೆದ ಬಾರಿ ಟ್ಯಾಂಕರ್ ಮೂಲಕ ನೀರು ಪೂರೈಸಿತ್ತು. ಸದ್ಯ 350 ರೂ. ಕೊಟ್ಟು ನೀರು ಪಡೆದುಕೊಳ್ಳುತ್ತಿದ್ದೇವೆ. ಇದು ಹೀಗೆಯೇ ಮುಂದುವರಿದರೆ ಕಷ್ಟವಾಗುತ್ತದೆ. ಈ ಸಮಸ್ಯೆ ಬಗೆಹರಿಯದಿದ್ದರೆ ಧರಣಿ ಕುಳಿತುಕೊಳ್ಳುತ್ತೇವೆ.
|ಚಂದ್ರ ಪೂಜಾರಿ, ಮೂವತ್ತುಮುಡಿ ನಿವಾಸಿ

ಪ್ರತಿ ಗ್ರಾಮಸಭೆಯಲ್ಲೂ ನೀರಿನ ಸಮಸ್ಯೆ ಹೇಳುತ್ತಲೇ ಬಂದಿದ್ದರೂ ಪರಿಹಾರವಾಗಿಲ್ಲ. ಕುಡಿಯಲು ನೀರು ಸಿಗದಿದ್ದರೆ ನಾವು ಬದುಕುವುದು ಹೇಗೆ? ನದಿ ಸಮೀಪವಿದ್ದರಿಂದ ಎಲ್ಲಿ ಬಾವಿ ತೋಡಿದರೂ ಉಪ್ಪು ನೀರೇ ಬರುತ್ತದೆ. ರಸ್ತೆ ಕಾಮಗಾರಿಯಿಂದ ಪೈಪ್ ಒಡೆದು ಹೋಗಿದೆ ಎನ್ನುತ್ತಾರೆ. ಇನ್ನೂ ಪೈಪ್ ಸರಿಪಡಿಸಲು ಸಾಧ್ಯವಾಗಿಲ್ಲ. ನೀರಿನ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ
|ಗ್ಲ್ಯಾಡಿಸ್ ಡಿಸೋಜ, ನಿವೃತ್ತ ಶಿಕ್ಷಕಿ

ನೀರಿನ ಸಮಸ್ಯೆ ಇರುವುದರಿಂದ ನಮ್ಮೂರಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ಯೋಚಿಸುವ ಸ್ಥಿತಿ ಬಂದಿದೆ. 350 ರೂ. ಕೊಟ್ಟು ನೀರು ವಿಕ್ರಯಿಸಿದರೂ ಸಾಲುತ್ತಿಲ್ಲ. ಜಾನುವಾರುಗಳಿಗೆ ಹೊಟ್ಟೆ ತುಂಬ ನೀರು ಕೊಡೋದಕ್ಕೂ ಆಗುತ್ತಿಲ್ಲ. ಸರ್ಕಾರ ಕುಡಿಯುವ ನೀರಿನ ಸಮಸ್ಯೆಗೆ ಹಣದ ಚಿಂತೆ ಇಲ್ಲ ಎನ್ನುತ್ತದೆ. ಹಾಗಿದ್ದರೂ ಸ್ಥಳೀಯ ಆಡಳಿತ ನಮಗೆ ನೀರು ಕೊಡದೆ ಸತಾಯಿಸುತ್ತಿದೆ.
|ಪಾರ್ವತಿ, ಕೃಷಿಕ ಮಹಿಳೆ, ಮೂವತ್ತುಮುಡಿ

ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಕಳೆದ ಬಾರಿ ಟ್ಯಾಂಕರ್ ಮೂಲಕ ನೀರು ಪೂರೈಸಿದ್ದೇವೆ. ಜನರ ಕಷ್ಟ ಅರಿತು ಕುಡಿಯುವ ನೀರಿನ ಸರಬರಾಜಿಗೆ ಟೆಂಡರ್ ಕರೆದಿದ್ದೇವೆ. ಏಪ್ರಿಲ್ ಮೊದಲ ವಾರ ಬುಗ್ರಿಕಡು, ಕನ್ನಡಕುದ್ರು, ಮೂವತ್ತುಮುಡಿಗೆ ನೀರು ಸರಬರಾಜು ಮಾಡುವ ತಯಾರಿ ನಡೆಸಿದ್ದೇವೆ.
|ಮಂಜು ಬಿಲ್ಲವ, ಪಿಡಿಒ, ಹೆಮ್ಮಾಡಿ ಗ್ರಾಮ ಪಂಚಾಯಿತಿ

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...