ಈ ಬಾರಿ ನನ್ನ ಗೆಲುವು ಖಚಿತ: ಕುಂದಗೋಳ ಬಿಜೆಪಿ ಅಭ್ಯರ್ಥಿ ವಿಶ್ವಾಸ

ಕುಂದಗೋಳ: ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್​.ಐ. ಚಿಕ್ಕನಗೌಡ ಅದರಗುಂಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 65ರಲ್ಲಿ ಮತದಾನ ಮಾಡಿ, ತಾವೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಮತದಾನದ ಬಳಿಕ ಮಾತನಾಡಿದ ಅವರು, ಈ ಬಾರಿ ಕುಂದಗೋಳದಲ್ಲಿ ಬಿಜೆಪಿ ಪರ ಅಲೆಯಿದೆ. ಕಳೆದ ಬಾರಿ ನಾನು 634 ಮತಗಳಿಂದ ಸೋತಿದ್ದೆ. ಈ ಬಾರಿ 21 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಗೆಲುವು ನನ್ನದೇ ಎಂದು ಹೇಳಿದರು.

ಚಿಕ್ಕನಗೌಡ ಅವರು ಮತದಾನ ಮಾಡುವುದಕ್ಕೂ ಅದರಗುಂಚಿಯಲ್ಲಿರುವ ದೇಗುಲದಲ್ಲಿ ಪೂಜೆ ಸಲ್ಲಿಸಿದರು.
214 ಮತಗಟ್ಟೆಗಳು ಕುಂದಗೋಳ ವಿಧಾನಸಭಾ ಕ್ಷೇತ್ರಾದ್ಯಂತ ಒಟ್ಟೂ 214 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಅದರಲ್ಲಿ 33 ಸೂಕ್ಷ್ಮ ಹಾಗೂ 38 ಸೂಕ್ಷ್ಮ ಮತಗಟ್ಟೆಗಳು ಇವೆ. ಕ್ಷೇತ್ರದಲ್ಲಿ ಒಟ್ಟು 1,89,435 ಮತದಾರರು ಇದ್ದಾರೆ. ಅದರಲ್ಲಿ 97,526 ಪುರುಷರು ಹಾಗೂ 91,907 ಮಹಿಳಾ, 259 ಸೇವಾ ಮತದಾರರು, ಇತರ ನಾಲ್ವರು ಮತದಾರರು ಇದ್ದಾರೆ. ಕ್ಷೇತ್ರದಾದ್ಯಂತ ಬಿಗಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

Leave a Reply

Your email address will not be published. Required fields are marked *