ಕುಂಭಮೇಳದಲ್ಲಿ ಒಂಭತ್ತು ವಿದೇಶಿಗರಿಗೆ ನಿರ್ಮೋಹಿ ಆಖಾಡದಿಂದ ‘ಮಹಾಮಂಡಲೇಶ್ವರ’ ಬಿರುದು ಪ್ರದಾನ

ಪ್ರಯಾಗ್​ರಾಜ್​: ಕುಂಭಮೇಳದಲ್ಲಿ ಒಂಭತ್ತು ಜನ ವಿದೇಶಿಯರಿಗೆ ಶನಿವಾರ ‘ಮಹಾಮಂಡಲೇಶ್ವರ’ ಬಿರುದು ನೀಡಲಾಗಿದೆ.

ಇವರೆಲ್ಲ ಈಗಾಗಲೇ ಸನಾತನ ಧರ್ಮ ಒಪ್ಪಿಕೊಂಡಿದ್ದು ಅದನ್ನು ಜಗತ್ತಿನಾದ್ಯಂತ ಪಸರಿಸಿ, ಉತ್ತೇಜಿಸಲು ಜವಾಬ್ದಾರಿ ವಹಿಸಿ ನಿರ್ಮೋಹಿ ಆಖಾಡ ಈ ಬಿರುದು ನೀಡಿ ಗೌರವಿಸಿದೆ. ಕುಂಭಮೇಳದಲ್ಲಿ ಹೀಗೆ ಒಂಭತ್ತು ಜನ ವಿದೇಶಿಗರಿಗೆ ಒಟ್ಟಿಗೇ ಬಿರುದು ನೀಡಿದ್ದು ಇದೇ ಮೊದಲ ಬಾರಿಗೆ ಎನ್ನಲಾಗಿದೆ.

ಕುಂಭಮೇಳದ ಮೊದಲ ಪುಣ್ಯಸ್ನಾನ ಜ.15ರಂದು ನಡೆದಿದ್ದು ಕೊನೇ ಪುಣ್ಯಸ್ನಾನವನ್ನು ಭಕ್ತರು ಮಾ.4ರ ಮಹಾಶಿವರಾತ್ರಿಯಂದು ಪಡೆಯಲಿದ್ದಾರೆ.

ಇಂದು ವಸಂತ ಪಂಚಮಿ ನಿಮಿತ್ತ ತ್ರಿವೇಣಿ ಸಂಗಮದಲ್ಲಿ 2 ಕೋಟಿಗೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಇಂದು ಕೊನೇ ಶಾಹಿ ಸ್ನಾನ ಕೂಡ ನಡೆಯಲಿದೆ. ಸಂಗಮ ಸ್ಥಳದಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.