ಕುಂಭಮೇಳದಲ್ಲಿ ಪೌರ ಕಾರ್ಮಿಕರ ಕಾಲುತೊಳೆದು ಪೂಜೆ ಮಾಡಿದ ಪ್ರಧಾನಿ ಮೋದಿ

ಪ್ರಯಾಗ್​ರಾಜ್​: ಇಂದು ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿಯವರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.

ಅದಾದ ಬಳಿಕ ಐವರು ಪೌರ ಕಾರ್ಮಿಕರಿಗೆ ಪಾದಪೂಜೆ ನೆರವೇರಿಸಿದರು. ಇಬ್ಬರು ಮಹಿಳೆಯರು, ಮೂವರು ಪುರುಷ ಪೌರ ಕಾರ್ಮಿಕರ ಕಾಲು ತೊಳೆದು ಪೂಜೆ ಮಾಡಿ, ಪ್ರತಿಯೊಬ್ಬರಿಗೂ ಶಾಲು ಹೊದೆಸಿ ಗೌರವಿಸಿದರು. ನಂತರ ಆ ಐವರ ಬಳಿ ಸ್ವಲ್ಪ ಕಾಲ ಮಾತುಕತೆ ನಡೆಸಿ ವೇದಿಕೆಗೆ ತೆರಳಿದರು.

ಪ್ರಧಾನಿಯಾಗಿದ್ದಾಗಿನಂದಲೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ, ನೀಡಿ ಸ್ವಚ್ಛ ಭಾರತ್​ ಆಂದೋಲನ ಪ್ರಾರಂಭಿಸಿರುವ ಮೋದಿಯವರು ಕುಂಭಮೇಳದಲ್ಲಿ ಪೌರ ಕಾರ್ಮಿಕರ ಪಾದ ತೊಳೆದು ಗೌರವಿಸಿದ್ದು ವಿಶೇಷ.

ಇದಕ್ಕೂ ಮೊದಲು ತ್ರಿವೇಣಿ ಸಂಗಮದಲ್ಲಿ ಗಂಗಾಪೂಜೆ ನೆರವೇರಿಸಿ ಪುಣ್ಯಸ್ನಾನ ಪಡೆದರು. ನರೇಂದ್ರ ಮೋದಿಯವರಿಗೆ ಯೋಗಿ ಆದಿತ್ಯನಾಥ್​ ಸಾಥ್​ ನೀಡಿದ್ದಾರೆ.