ಕುಮಟಾ: ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಕುಮಟಾ ಪೊಲೀಸರು ಜಾನುವಾರು ಸಹಿತ ನಾಲ್ವರು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.
ಕೊಲ್ಲಾಪುರದಿಂದ ಕೇರಳದ ಪಾಲಕ್ಕಾಡಿಗೆ ವಾಹನದಲ್ಲಿ 27 ಕೋಣಗಳನ್ನು ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ವಧೆ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರ ತಂಡ ಪಟ್ಟಣದ ಎಪಿಎಂಸಿ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಂದಾಜು 8.10 ಲಕ್ಷ ರೂ. ಮೌಲ್ಯದ 26 ಎಮ್ಮೆ ಹಾಗೂ 1 ಕೋಣವನ್ನು ರಕ್ಷಿಸಲಾಗಿದೆ. ಮೈಸೂರಿನ ಅಯೂಬ್ ರಷೀದ್ ಅಹಮದ್(35), ಕೇರಳ ಕಾಸರಗೋಡಿನ ಅಬೂಬಕ್ಕರ ಮಹಮದ್ ಚರಕಾಳ (53), ಅಬ್ದುಲ್ ರೆಹಮಾನ್ ಪಳಿಯಾನ್(60), ಹಾಸನದ ಹೊಳೆನರಸಿಪುರದ ಅಸಗರ ಇಶ್ರತ್ ಹುಸೈನ್(32) ಬಂಧಿತರು. ಲಾರಿ ಮಾಲಿಕ ದಾವಣಗೇರಿಯ ಚಮನ ಮಹಮದ ಹನೀಫ್ಸಾಬ್ ತಲೆ ಮರೆಸಿಕೊಂಡಿದ್ದಾರೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.