ಕುಮಾರಸ್ವಾಮಿ ಅವರದು ಅವಕಾಶವಾದಿ ಮೈತ್ರಿ: ಎಂ ಬಿ ಪಾಟೀಲ ಟೀಕೆ

ಬೆಂಗಳೂರು: ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಹಿಂದೆ ಬಿಜೆಪಿ ಜತೆ, ಆಮೇಲೆ ಕಾಂಗ್ರೆಸ್ ಜೊತೆ ಸೇರಿಕೊಂಡು ಸರಕಾರ ರಚಿಸಿ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಈಗ ಪುನಃ ಬಿಜೆಪಿ ಜೊತೆ ಹೋಗಿದ್ದಾರೆ. ಅವರದು ಅವಕಾಶವಾದಿ ಮೈತ್ರಿ. ಅವರು ತಮ್ಮ ಸರಕಾರವನ್ನೇ ಉಳಿಸಿಕೊಳ್ಳಲಿಲ್ಲ. ಈಗ ನಮ್ಮ ಸರಕಾರವನ್ನು ಉರುಳಿಸುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಕುಮಾರಸ್ವಾಮಿ ಮೊದಲು ಪಾದಯಾತ್ರೆಗೆ ತಮ್ಮ‌ ನೈತಿಕ ಬೆಂಬಲವೂ ಇಲ್ಲ ಎಂದರು. ಆಮೇಲೆ ಯಾರದೋ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪಾದಯಾತ್ರೆಗೆ ಹೋಗಿದ್ದಾರಷ್ಟೆ ಎಂದು ಅವರು ಕುಟುಕಿದರು.

ಸಿಎಂ ತಪ್ಪೇನಿಲ್ಲ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಯಾವ ತಪ್ಪೂ ಇಲ್ಲ. ಸ್ವತಃ ಮುಡಾ ತಪ್ಪು ಮಾಡಿ, ಅದನ್ನು ಒಪ್ಪಿಕೊಂಡಿದೆ. ನಿಯಮಗಳಂತೆಯೇ ಸಿಎಂ ಪತ್ನಿಗೆ ಬದಲಿ ನಿವೇಶನಗಳನ್ನು ಅದು ಕೊಟ್ಟಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ ಅವರು ಸಚಿವರ ಸಭೆ ಕರೆದಿರುವುದರಲ್ಲಿ ತಪ್ಪೇನೂ ಇಲ್ಲ. ಪಕ್ಷದ ಹಿತದೃಷ್ಟಿಯಿಂದ ಅವರು ನಮಗೆ ಸಲಹೆ ಕೊಡಬಹುದಷ್ಟೆ. ಇದಕ್ಕಿಂತ ಹೆಚ್ಚು ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಪೊಲೀಸ್ ಎಸ್ಐ ಒಬ್ಬರು ಸತ್ತಿರುವುದರ ಹಿಂದೆ ಅಲ್ಲಿನ ಕಾಂಗ್ರೆಸ್ ಶಾಸಕರ ಕೈವಾಡವೇನೂ‌ ಇಲ್ಲ. ಈಗ ಪ್ರತಿಯೊಂದಕ್ಕೂ ಶಾಸಕರು ಮತ್ತು ಮಂತ್ರಿಗಳನ್ನು ದೂರುವುದು ಒಂದು ಕಾಯಿಲೆಯಾಗಿದೆ ಎಂದು ಸಚಿವರು ಬೇಸರ ಹೊರಹಾಕಿದರು.

Share This Article

ಹದ್ದಿನ ಕಣ್ಣಿನಂಥ ದೃಷ್ಟಿ ನಿಮ್ಮದಾಗಬೇಕಾ? ಇವು ನಿಮ್ಮ ಆಹಾರದಲ್ಲಿ ಇವೆಯೇ? ಚೆಕ್​ ಮಾಡಿಕೊಳ್ಳಿ

ಬೆಂಗಳೂರು: ಮಾನವನ ಅಂಗಾಂಗಗಳಲ್ಲಿ ಎಲ್ಲವೂ ಮುಖ್ಯವೇ ಆದರೂ ಕಣ್ಣುಗಳು ಪ್ರಮುಖ ಸ್ಥಾನ ಪಡೆದುಕೊಂಡಿವೆ. ಹೀಗಾಗಿಯೇ ಕಣ್ಣುಗಳು…

ಇವುಗಳನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದ್ರೆ ಸಾಕು! ಚೆನ್ನಾಗಿ ನಿದ್ದೆ ಜತೆ, ಶ್ರೀಮಂತರಾಗೋದು ಪಕ್ಕಾ!

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಹಣ ಅಥವಾ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈಗ ಹೇಳಿರುವ ಸರಳ ಪರಿಹಾರಗಳನ್ನು…

ಮನೆಯಲ್ಲಿ ಗುಲಾಬಿ ಗಿಡ ಬೆಳೆಸುತ್ತಿದ್ದೀರಾ? ಈ ವಾಸ್ತು ನಿಯಮಗಳು ಕಡ್ಡಾಯ!

ಬೆಂಗಳೂರು: ಸಾಮಾನ್ಯವಾಗಿ ನಮ್ಮ ಹಿತ್ತಲಿನಲ್ಲಿ ಹಲವು ಬಗೆಯ ಗಿಡಗಳನ್ನು ಬೆಳೆಸುತ್ತೇವೆ. ಗುಲಾಬಿ ಗಿಡಗಳನ್ನು ಇಷ್ಟಪಡದವರೇ ಇಲ್ಲ.…