ದಾಳಿಂಬೆ, ದ್ರಾಕ್ಷಿ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ. ಪ್ಯಾಕೇಜ್‌

ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ರೈತಪರ ಕಾಳಜಿಯನ್ನು ಅತೀವವಾಗಿ ವ್ಯಕ್ತಪಡಿಸಿದ್ದು ಎಲ್ಲ ಕ್ಷೇತ್ರದ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕೋಟ್ಯಂತರ ರೂ. ಅನುದಾನ ಘೋಷಣೆ ಮಾಡಿದ್ದಾರೆ.

 • ಬರ ನಿರೋಧಕ ಜಲಾನಯನ ಯೋಜನೆ ಅನುಷ್ಠಾನಕ್ಕಾಗಿ 100 ಕೋಟಿ ಅನುದಾನ
 • ಬೀಜ ಸಂಸ್ಕರಣೆ ಉನ್ನತಿಗಾಗಿ 5 ಕೋಟಿ, ಕರ್ನಾಟಕ ಬೀಜ ಉನ್ನತಿ ನಿಗಮಕ್ಕೂ 5 ಕೋಟಿ ಅನುದಾನ
 • ಒಣ ಬೇಸಾಯ ಕ್ರಮವಿರುವ ಕಡೆಗಳಲ್ಲಿ ರೈತರಿಗೆ ನೆರವಾಗಲು ಪ್ರಧಾನ ಮಂತ್ರಿ ಪಸಲ್‌ ಭೀಮಾ ಯೋಜನೆ
 • ಅನುಷ್ಠಾನ. ವಿಮಾ ಕಂಪನಿಗಳಿಗಾಗುತ್ತಿರುವ ಲಾಭವನ್ನು ನೇರವಾಗಿ ರೈತರಿಗೆ ಒದಗಿಸಲು ರಾಜ್ಯದ ಹೊಸ ಯೋಜನೆಗೆ ನಿರ್ಧಾರ
 • ವಿವಿಧ ಬೆಳೆಗಳ ಮಾಹಿತಿ, ಕೊಯ್ಲು, ಕೊಯ್ಲೋತ್ತರ ಮಾಹಿತಿ ಪಡೆಯಲು ಕೃಷಿ ಪ್ರಾತ್ಯಕ್ಷಿಕ ಸಂಸ್ಥೆಯನ್ನು ರಾಯಚೂರಿನ ಸಿಂಗನೂರು ಮತ್ತು ಮಂಡ್ಯದಲ್ಲಿ ಸ್ಥಾಪನೆಗೆ ಚಿಂತನೆ ಈ ಕಾರ್ಯಕ್ರಮಗಳಿಗೆ 10 ಕೋಟಿ ರೂ. ಅನುದಾನ
 • ದಾಳಿಂಬೆ, ದ್ರಾಕ್ಷಿ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ 150 ಕೋಟಿ ರೂ. ಪ್ಯಾಕೇಜ್‌
 • ಮಾವು ಮತ್ತು ಟೊಮ್ಯಾಟೊ ಬೆಳೆಗೆ ಸುಸ್ಥಿರ ಮಾರುಕಟ್ಟೆ ಒದಗಿಸಲು. ರಾಮನಗರ- ಧಾರವಾಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾವು ಸಂಸ್ಕರಣಾ ಘಟಕ ಮತ್ತು ಟೊಮ್ಯಾಟೊ ಬೆಳೆ ಸಂಸ್ಕರಣಾ ಘಟಕ ಸ್ಥಾಪನೆ
 • ಜೇನುಗಾರಿಕೆಗೆ ರಾಜ್ಯದಲ್ಲಿ ಸುಸ್ಥಿರ ಮತ್ತು ನಿರಂತರ ಆದಾಯ ತರುವಂತೆ ಮಾಡಲು 5 ಕೋಟಿ ರೂ. ಅನುದಾನ
 • 1.12 ಲಕ್ಷ ರೈತರು ಬೆಳೆಯುತ್ತಿರುವ ಮಿಡಿ ಸೌತೆಯ ಮೌಲ್ಯ ಹೆಚ್ಚಳಕ್ಕೆ ಆರು ಕೋಟಿ ಪ್ಯಾಕೇಜ್‌ ಘೋಷಣೆ
 • ರೇಷ್ಣೆ ಬೆಳೆಯಲ್ಲಿ ಶೇ. 50 ರಷ್ಟು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದು, ಬೆಲೆ ಕುಸಿತ ತಡೆಯಲು ರೇಷ್ಮೇ ವಿಸ್ತರಣಾ ಚಟುವಟಿಕೆಗೆ 2 ಕೋಟಿ ರೂ. ಅನುದಾನ
 • ಕರ್ನಾಟಕ ರೇಷ್ಮೇ ಮಂಡಳಿಗೆ ಆಡಳಿತಾತ್ಮಕ ಬದಲಾವಣೆ ತರಲು 10 ಕೋಟಿ ರೂ. ಒದಗಿಸಲು ಚಿಂತನೆ
 • ಸಂತೇ ಮರಹಳ್ಳಿಯ ಕಾರ್ಖಾನೆಯಲ್ಲಿ ನೂತನ ಯಂತ್ರ ಅಳವಡಿಕೆಗೆ 2 ಕೋಟಿ ರೂ. ಅನುದಾನ. ಚಾಮರಾಜನಗರದ ರೇಷ್ಮೇ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ.
 • ಚನ್ನಪಟ್ಟಣ ನಗರದಲ್ಲಿ ಮುಚ್ಚಿರುವ ಕರ್ನಾಟಕ ಸಿಲ್ಕ್‌ ಇಂಡಸ್ಟ್ರೀಸ್‌ ಕಾರ್ಖಾನೆಯನ್ನು ಎಂಪೋರಿಯಂನಲ್ಲಿ ರೇಷ್ಮೆ ಉತ್ಪನ್ನಗಳ ಉತ್ತೇಜನಕ್ಕೆ 10 ಕೋಟಿ ರೂ.
 • ವಿಶೇಷ ತುರ್ತು ಚಿಕಿತ್ಸೆಗಾಗಿ 15 ಕೋಟಿ ರೂ. ವೆಚ್ಚದಲ್ಲಿ 15 ಜಿಲ್ಲೆಯಲ್ಲಿ ವ್ಯವಸ್ಥೆ
 • 10 ಸಾವಿರ ನಿರುದ್ಯೋಗಿಗಳಿಗೆ ನಾಟಿ ಕೋಟಿ ಸಾಕಣೆಗೆ ಪ್ರೋತ್ಸಾಹ
 • ದೇಶೀಯ ಕುರಿ ಅವಳಿ ಜವಳಿ ತಳಿ ಅಭಿವೃದ್ಧಿಗೆ ಪ್ರಯೋಗಾಲಯ ಸ್ಥಾಪನೆಗೆ 2 ಕೋಟಿ ರೂ.
 • ರಾಜ್ಯದಲ್ಲಿ ಮಂಗನ ಕಾಯಿಗೆ ಲಸಿಕೆಗೆ ಬೆಂಬಲ ನೀಡಲು 5 ಕೋಟಿ ರೂ. ಅನುದಾನ
 • ರಾಜ್ಯದ ಹಾಲು ಉತ್ಪಾದಕರಿಗೆ ಉತ್ತೇಜನ ನೀಡಲು 5 ರೂ. ನೀಡುತ್ತಿದ್ದು, ಪ್ರೋತ್ಸಾಹ ಧನ 6 ರೂ.ಗೆ ಹೆಚ್ಚಿಸಲಾಗುವುದು.
 • ಕ್ಷೀರ ಭಾಗ್ಯ ಯೋಜನೆಯಲ್ಲಿ 638 ಕೋಟಿ ರೂ.ಗೆ ಖರೀದಿಸಿ ಶಾಲೆಗೆ ಹೋಗುವ ಎಲ್ಲ ಮಕ್ಕಳಿಗೆ ನೀಡಲಾಗುವುದು, ಅಂಗನವಾಡಿಗೆ ಹೋಗುವ ಎಲ್ಲ ಮಕ್ಕಳಿಗೆ ನೀಡುವುದು ಮತ್ತು ಹಾಲು ಉತ್ಪಾದಕರಿಗಾಗಿ 2,502 ಕೋಟಿ ರೂ. ವಿನಿಯೋಗ