22.8 C
Bengaluru
Monday, January 20, 2020

ಆರೋಗ್ಯ ರಕ್ಷಣೆಗೆ ಕುಮಾರ ಕಾಣಿಕೆ

Latest News

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭ| ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಖಚಿತ

ನವದೆಹಲಿ: ಭಾರತೀಯ ಜನತಾ ಪಾರ್ಟಿ(ಬಿಜೆಪಿ)ಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ಸೋಮವಾರ ಆರಂಭವಾಗಿದೆ. ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಜೆ.ಪಿ.ನಡ್ಡಾ ಅವರು...

ಬೆಕ್ಕು ಅಡ್ಡ ಬಂದರೆ ಕೆಲ ಹೊತ್ತು ನಿಲ್ಲುತ್ತೇವೆ, ಮೆಟ್ರೋಗೇ ಅಡ್ಡ ಬಂದರೆ; ನಾಲ್ಕು ದಿನಗಳಿಂದ ಅಲ್ಲೆ ಇದ್ದ ಬೆಕ್ಕಿಗೆ ಏನಾಯಿತು?

ತಿರುವನಂತಪುರ: ಎಲ್ಲಿಗಾದರೂ ಹೊರಟಾಗ ಬೆಕ್ಕು ಅಡ್ಡ ಬಂದರೆ ಸ್ವಲ್ಪ ಹೊತ್ತು ನಿಂತು ಹೋಗುವುದು ವಾಡಿಕೆ. ಆದರೆ ತಿರುವನಂತಪುರದಲ್ಲಿ ಮೆಟ್ರೋಗೆ ಬೆಕ್ಕು ಅಡ್ಡ ಬಂದಾಗ ಏನು ಮಾಡಬೇಕು...

LIVE| ಪರೀಕ್ಷೆ ಎದುರಿಸುವ ಮಕ್ಕಳಿಗೆ ಧೈರ್ಯ ತುಂಬುತ್ತಿರುವ ಪ್ರಧಾನಿ: ‘ಪರೀಕ್ಷಾ ಪೆ ಚರ್ಚಾ’ದ ನೇರ ಪ್ರಸಾರ ವೀಕ್ಷಿಸಿ…

ನವದೆಹಲಿ: ಪರೀಕ್ಷಾ ಕಾಲ ಹತ್ತಿರ ಬಂದಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಸೇರಿ ಹಲವು ಪರೀಕ್ಷೆಗಳು ನಡೆಯುವ ಕಾಲವಿದು. ವಿದ್ಯಾರ್ಥಿಗಳು ತಯಾರಿ ನಡೆಸುತ್ತಿರುವ ಸಂದರ್ಭದಲ್ಲೇ ಅವರ...

ಅಪಘಾತದಿಂದಾದ ಗಾಯದ ನೋವು ತಾಳಲಾರದೇ ಕನಕಪುರ ಮೂಲದ ಯುವಕ ಆತ್ಮಹತ್ಯೆ

ಬೆಂಗಳೂರು: ಅಪಘಾತದಿಂದಾದ ಗಾಯಗೊಂಡಿದ್ದ ಯುವಕನೊಬ್ಬ ನೋವು ತಾಳಲಾರದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಗೌಡನಪಾಳ್ಯದ ನಿವಾಸಿ ನವೀನ್ (23) ನೇಣು ಬಿಗಿದುಕೊಂಡು...

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೆ ಸಾಂವಿಧಾನಿಕ ದೃಷ್ಟಿ, ಜಾರಿ ಅಸಾಧ್ಯ ಎನ್ನುವಂತಿಲ್ಲ: ಹರಿಯಾಣ ಮಾಜಿ ಸಿಎಂ ಭೂಪಿಂದರ್​ ಸಿಂಗ್​ ಹೂಡ

ಹರಿಯಾಣ: ಸಂಸತ್​ನಲ್ಲಿ ಒಪ್ಪಿಗೆ ಪಡೆದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಗಳು ಇಲ್ಲ ಎನ್ನುವಂತಿಲ್ಲ ಎಂದು ಹಿರಿಯ ಕಾಂಗ್ರೆಸ್​ ಮುಖಂಡ ಮತ್ತು ಹರಿಯಾಣದ ಮಾಜಿ...

ಹೃದಯ, ಮೂತ್ರಪಿಂಡ, ಯಕೃತ್ತು ಇತ್ಯಾದಿ ಅಂಗಾಂಗ ಕಸಿ ಬಡವರಿಗೆ ಬಹುದೂರ. ಅಂತಹ ರೋಗಿಗಳಿಗಾಗಿಯೇ 30 ಕೋಟಿ ರೂ. ವಿಶೇಷ ಅನುದಾನವನ್ನು ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್​ನಲ್ಲಿ ಕುಮಾರಸ್ವಾಮಿ ಘೋಷಿಸಿದರು.

ಕಡುಬಡವರಿಗೆ ಗಗನ ಕುಸುಮವಾಗಿರುವ ಕಸಿ ಸೌಲಭ್ಯ ಕಲ್ಪಿಸಲು ಸರ್ಕಾರ ಪ್ರತ್ಯೇಕ ಯೋಜನೆಯನ್ನೇ ಪ್ರಕಟಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಕರೆ ಸಂಖ್ಯೆ108 ಮತ್ತು 104ರಲ್ಲಿ ಲಭ್ಯವಿರುವ ತುರ್ತು ಪ್ರತಿಕ್ರಿಯೆ ವ್ಯವಸ್ಥೆ ಮತ್ತು ವೈದ್ಯಕೀಯ ಸಹಾಯವಾಣಿ ಸೇವೆಗಳ ವ್ಯಾಪ್ತಿ ವಿಸ್ತರಿಸಲಾಗುತ್ತದೆ. ಇವುಗಳ ಲಭ್ಯತೆ ಮತ್ತು ಗುಣಮಟ್ಟ ಹೆಚ್ಚಿಸಲು ಅನುಕೂಲವಾಗುವಂತೆ ಸೇವೆಗಳನ್ನು ಪುನರ್ ರಚಿಸಲಾಗುತ್ತದೆ. ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು ಮತ್ತು ಮಾನಸಿಕ ಆರೋಗ್ಯ ರಕ್ಷಣಾ ಸೇವೆಗಳನ್ನೂ ಇದರಲ್ಲಿ ಸಂಯೋಜಿಸಲಾಗುತ್ತದೆ. ಔಷಧ ನಿಯಂತ್ರಣ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ 40 ಕೋಟಿ ರೂ. ವೆಚ್ಚದಲ್ಲಿ ಯೋಜನೆಯೊಂದನ್ನು ಮುಂದಿನ ಎರಡು ವರ್ಷಗಳಲ್ಲಿ ಜಾರಿಗೊಳಿಸಲಾಗುವುದು. ಪ್ರಸಕ್ತ ವರ್ಷದಲ್ಲಿ ಈ ಉದ್ದೇಶಕ್ಕೆ 10 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಸಿಎಂ ಪ್ರಕಟಿಸಿದರು.

ಫೆಬ್ರವರಿ ಬಜೆಟ್​ನಲ್ಲಿ ಏನಿತ್ತು?: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ 1.34 ಕೋಟಿ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ಒದಗಿಸುವ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಘೋಷಿಸಿ ಕಾರ್ಯರೂಪಕ್ಕೆ ತಂದಿದೆ. ಸುಮಾರು 10 ಸಾವಿರ ಕೋಟಿ ರೂ. ವಿನಿಯೋಗಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಸೇರಿ ಆರೋಗ್ಯ ಇಲಾಖೆಗೆ 6,645 ಕೋಟಿ ರೂ. ಒದಗಿಸಲಾಗಿತ್ತು.

ವಿಜಯಪುರಕ್ಕೆ ಕಾರ್ಡಿಯಾಲಜಿ

ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ ಮತು ್ತ ಆಂಕಾಲಜಿಗೆ ಸಂಬಂಧಿಸಿದಂತೆ ಆರೋಗ್ಯ ಸೇವೆ ಒದಗಿಸುವ ಘಟಕಗಳು ಮತ್ತು ಟ್ರಾಮಾ ಘಟಕಗಳ ಸ್ಥಾಪಿಸುವ ಭರವಸೆ ನೀಡಲಾಗಿದೆ.

2 ಕೆಜಿ ಅಕ್ಕಿಗೆ ಕೊಕ್ಕೆ

ಅನ್ನಭಾಗ್ಯ ಯೋಜನೆಯಲ್ಲಿ ಹಿಂದಿನ ಸರ್ಕಾರ ಕೊಡಮಾಡುತ್ತಿದ್ದ ಅಕ್ಕಿ ಪೈಕಿ 2 ಕೆಜಿ ಕಡಿತಗೊಳಿಸಿ, ಪ್ರಸ್ತುತ 5 ಕೆಜಿ ಮಾತ್ರ ನೀಡಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಜತೆಗೆ ರಿಯಾಯಿತಿ ದರದಲ್ಲಿ ಅರ್ಧ ಕೆಜಿ ತೊಗರಿ ಬೇಳೆ, ಪ್ರತಿ ಬಿಪಿಎಲ್ ಪಡಿತರ ಚೀಟಿಗೆ ಪಾಮ್ ಎಣ್ಣೆ, ಅಯೋಡಿನ್-ಕಬ್ಬಿಣಾಂಶಯುಕ್ತ ಉಪು್ಪ ಹಾಗೂ ಸಕ್ಕರೆ ತಲಾ ಒಂದು ಕೆಜಿ ನೀಡಲು ಮುಂದಾಗಿದ್ದಾರೆ. ಸ್ಥಳೀಯ ಜಾಗೃತ ಸಮಿತಿ ಸದಸ್ಯರ ಸಹಕಾರದೊಂದಿಗೆ ವರ್ಷಕ್ಕೊಮ್ಮೆ ಆಹಾರ ಸುರಕ್ಷಾ ಮಾಹೆ ಆಯೋಜನೆ ಮಾಡಲು ತೀರ್ವನಿಸಿದ್ದಾರೆ. ಆ ಮೂಲಕ ಅರ್ಹರಿಗೆ ಪಡಿತರ ಚೀಟಿಗಳ ನೀಡಿಕೆ, ಪರಿಶೀಲನೆ ಹಾಗೂ ಅನರ್ಹ ಫಲಾನುಭವಿಗಳ ಕಡಿತಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಘೋಷಿಸಿದ್ದಾರೆ.

ಫೆಬ್ರವರಿ ಬಜೆಟ್​ನಲ್ಲಿ ಏನಿತ್ತು?: ಚಿಲ್ಲರೆ ಮಾರಾಟಗಾರರ ಲಾಭಂಶವನ್ನು ಸಿದ್ದರಾಮಯ್ಯ ಹೆಚ್ಚಿಸಿದ್ದರು. ಸಿಎಂ ಅನಿಲ ಭಾಗ್ಯ ಯೋಜನೆಯಡಿ ಉಚಿತ ಅನಿಲ ಸಂಪರ್ಕ, 2 ಬರ್ನಲ್ ಸ್ಟೌವ್ ನೀಡಿಕೆ ಒಳಗೊಂಡಂತೆ 2018-19ನೇ ಸಾಲಿನಲ್ಲಿ ಆಹಾರ ಇಲಾಖೆಗೆ -ಠಿ;3,882 ಕೋಟಿ ಒದಗಿಸಿದ್ದರು.

ಎಲ್ಲ ನಗರಗಳಲ್ಲೂ ಲಕ್ಷ ಮನೆ ನಿರ್ಮಾಣ

ವಸತಿ ಇಲಾಖೆಯಲ್ಲಿ ಹಿಂದಿನ ಸರ್ಕಾರದ ಯೋಜನೆಗಳ ಅನುಷ್ಠಾನ, ಮುಂದುವರಿಕೆ ಜತೆಗೆ ರಾಜ್ಯದ ಇತರೆಡೆಗೂ ವಿಸ್ತರಿಸಲು ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉದ್ದೇಶಿಸಿದೆ. ಬೆಂಗಳೂರು ನಗರದ ಬಡವರಿಗೆ ವಸತಿ ಭಾಗ್ಯ ಕಲ್ಪಿಸಲು ‘ಮುಖ್ಯಮಂತ್ರಿಯವರ ಒಂದು ಲಕ್ಷ ಮನೆಗಳು’ ಯೋಜನೆ ಎಲ್ಲ ನಗರಗಳಿಗೂ ವಿಸ್ತರಣೆ, ಆಯ್ದ ಸ್ಥಳಗಳಲ್ಲಿ ಬಹುಮಹಡಿ ಮನೆಗಳ (ಬೆಲಮಹಡಿ+14) ನಿರ್ವಣ, ಕೊಳೆಗೇರಿ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಹಕ್ಕು ವರ್ಗಾಯಿಸುವ (ಟಿಡಿಆರ್) ಬದಲಿಗೆ ಹೆಚ್ಚುವರಿ ನೆಲಗಟ್ಟು ಪ್ರದೇಶದ ಅನುಪಾತ (ಎಫ್​ಎಆರ್) ಒದಗಿಸುವ ಮೂಲಕ ನಗರಪಾಲಿಕೆಗಳಲ್ಲಿ ಖಾಸಗಿ ಸಹಭಾಗಿತ್ವದ ಮಾದರಿ ಅಭಿವೃದ್ಧಿಗೆ ವಿಸõತ ಮಾರ್ಗಸೂಚಿಯನ್ನು 2019-20ರಿಂದ ಜಾರಿ, ಬೇಡಿಕೆಗೆ ಅನುಗುಣವಾಗಿ ಮನೆಗಳ ನಿರ್ಮಾಣ ಸಂಕಲ್ಪ ಹಾಗೂ ಅಂಗವಿಕಲರಿಗೆ ಬೇಡಿಕೆ ಮೇರೆಗೆ ಮನೆ ವಿತರಣೆ ಮಾಡುವುದಾಗಿ ಪ್ರಸಕ್ತ ಬಜೆಟ್​ನಲ್ಲಿ ಘೋಷಿಸಲಾಗಿದೆ.

ಫೆಬ್ರವರಿ ಬಜೆಟ್​ನಲ್ಲಿ ಏನಿತ್ತು?: ಮುಂದಿನ 5 ವರ್ಷಗಳಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 20 ಲಕ್ಷ ಮನೆಗಳನ್ನು ನಿರ್ವಿುಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ್ದರು.

ಪಿಡಬ್ಲ್ಯುಡಿಗೆ ಒಂದೇ ಕೆಲಸ!

ಹಾಸನದ ರಿಂಗ್ ರಸ್ತೆಗೆ 30 ಕೋಟಿ ರೂ. ನೆರವು ಹೊರತು ಪಡಿಸಿದರೆ, ಲೋಕೋಪಯೋಗಿ ಇಲಾಖೆ ಬಗ್ಗೆ ಬಜೆಟ್​ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಮಹತ್ವದ ಇಲಾಖೆಯಾಗಿರುವ ಪಿಡಬ್ಲ್ಯುಡಿಗೆ ಸಿಎಂ ಸಹೋದರ ರೇವಣ್ಣ ಸಚಿವರಿದ್ದರೂ, ಹೊಸ ಯೋಜನೆಗಳನ್ನು ಪ್ರಸ್ತಾಪಿಸಿಲ್ಲವೇಕೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ವಾಸ್ತು ದೋಷ ಆಗಬಹುದು ಎಂಬ ಕಾರಣಕ್ಕೆ ಒಂದೇ ಯೋಜನೆ ಪ್ರಸ್ತಾಪಿಸಿರಬಹುದು ಎಂದು ಕೆಲ ಶಾಸಕರು ವಿಧಾನಸಭೆ ಮೊಗಸಾಲೆಯಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಪಿಡಬ್ಲ್ಯುಡಿ ಇಲಾಖೆಗೆ ಒಟ್ಟಾರೆ 10,200 ಕೋಟಿ ರೂ. ಒದಗಿಸಲಾಗಿದೆ.

ರಾಜ್ಯದೆಲ್ಲೆಡೆ ‘ದಿಶಾ’ ವಿಸ್ತಾರ

16 ಜಿಲ್ಲೆಗಳಲ್ಲಿ ಸಂಭಾವ್ಯ ಉದ್ದಿಮೆದಾರರಿಗೆ ತರಬೇತಿ ನೀಡಲು ಜಾರಿಗೆ ತಂದಿದ್ದ ‘ದಿಶಾ’ ಯೋಜನೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಿ, 2 ಕೋಟಿ ರೂ. ಅನುದಾನದಲ್ಲಿ 1 ಲಕ್ಷ ಮಂದಿಗೆ ತರಬೇತಿ ನೀಡಲಾಗುವುದು ಎಂದು ಕುಮಾರಸ್ವಾಮಿ ಬಜೆಟ್​ನಲ್ಲಿ ಪ್ರಕಟಿಸಿದರು. ವಿದೇಶಗಳಲ್ಲಿ ಉದ್ಯೋಗ ಹೊಂದಲು, ಕರ್ನಾಟಕವನ್ನು ವಿದೇಶಿ ಉದ್ಯೋಗಕ್ಕೆ ಆದ್ಯತಾ ರಾಜ್ಯವನ್ನಾಗಿ ರೂಪಿಸಲು ಯುವಕರಿಗೆ ತರಬೇತಿ, ಪ್ರೋತ್ಸಾಹ ಧನ ನೀಡಿಕೆಗೆ ಒತ್ತು ನೀಡಲಾಗಿದೆ. ಇದಕ್ಕಾಗಿ ಕರ್ನಾಟಕ ಅಂತಾರಾಷ್ಟ್ರೀಯ ವಲಸಿಗ ಕೇಂದ್ರಕ್ಕೆ 2 ಕೋಟಿ ರೂ. ನೀಡುವುದಾಗಿ ಪ್ರಕಟಿಸಿದರು.

160 ಕೆರೆಗಳಿಗೆ ಜೀವಕಳೆ

ಹೇಮಾವತಿ ನದಿಯಿಂದ ಹಾಸನ ತಾಲೂಕು ದುದ್ಧ ಮತ್ತು ಶಾಂತಿಗ್ರಾಮ ಹೋಬಳಿ ವ್ಯಾಪ್ತಿಗೆ ಬರುವ 160 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು 70 ಕೋಟಿ ರೂ. ವೆಚ್ಚದಲ್ಲಿ ರೂಪಿಸಲು ಕುಮಾರಸ್ವಾಮಿ ಸರ್ಕಾರ ನಿರ್ಧರಿಸಿದೆ. ಮಂಡ್ಯ ಜಿಲ್ಲೆಯ ಲೋಕಪಾವನಿ ನದಿಯಿಂದ ದುದ್ಧ ಹಾಗೂ ಇತರೆ ಕೆರೆಗಳಿಗೆ ನೀರು ತುಂಬಿಸಲು ಹಾಗೂ ಮಂಡ್ಯ ತಾಲೂಕಿನ ಗ್ರಾಮಗಳ ಗ್ರಾಮಸ್ಥರಿಗೆೆ ಕುಯುಡಿವ ನೀರಿನ ಸೌಲಭ್ಯ ಒದಗಿಸಲು 30 ಕೋಟಿ ರೂ. ಅನುದಾನದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.


ಆರೋಗ್ಯಕರ ಬಜೆಟ್

| ಡಾ. ಧನಂಜಯ್​ ಟಿ.ಎಸ್​,  ಹಿರಿಯ ವೈದ್ಯರು

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ಸಮಾಧಾನಕರವಾಗಿದೆ ಎನ್ನಬಹುದು. ವೈದ್ಯರ ನೇಮಕ, ಆರೋಗ್ಯ ಸಹಾಯಕರ ಭರ್ತಿಯ ಬಗ್ಗೆ ಈ ಬಜೆಟ್​ನಲ್ಲಿ ಏನನ್ನೂ ಹೇಳಿಲ್ಲ. ಈ ಬಜೆಟ್​ನಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ. ಅದೇ ರೀತಿ ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ಸ್ಪಷ್ಟತೆ ಬೇಕಿತ್ತು. ಬೆಂಗಳೂರಿನ ಕಿದ್ವಾಯಿ ಗ್ರಂಥಿ ಸಂಸ್ಥೆಯಲ್ಲಿ ಬೋನ್ ಮ್ಯಾರೋ ಟ್ರಾನ್ಸ್​ಪ್ಲಾಂಟೇಷನ್ ಘಟಕ ತೆರೆಯಲು ನಿರ್ಧರಿಸಿರುವುದು ಶ್ಲಾಘನೀಯ. ತಾಯಿ ಹಾಗೂ ಶಿಶುವಿನ ಮರಣ ತಡೆಯುವ ನಿಟ್ಟಿನಲ್ಲಿ ಗರ್ಭಿಣಿಯರಿಗೆ ಪ್ರತಿ ತಿಂಗಳು 1000 ರೂ.ನಂತೆ ಆರು ತಿಂಗಳು ನೀಡಲು ರಾಜ್ಯ ಸರ್ಕಾರ ಮುಂದಾಗಿರುವುದು ಉತ್ತಮ ನಡೆ. ಈಗಾಗಲೇ ಕೇಂದ್ರ ಸರ್ಕಾರ ಮಾತೃವಂದನಾ ಯೋಜನೆಯಡಿ ತಿಂಗಳಿಗೆ ಸಾವಿರ ರೂ.ನಂತೆ ಆರು ಸಾವಿರ ರೂ. ನೀಡುತ್ತಿದ್ದು, ರಾಜ್ಯ ಸರ್ಕಾರದ ಹಣವನ್ನೂ ಸೇರಿಸಿದರೆ ಹೆರಿಗೆಗೆ ಮುನ್ನ ಮೂರು ತಿಂಗಳು, ನಂತರದ ಮೂರು ತಿಂಗಳು ಸೇರಿ ಒಟ್ಟು ಹನ್ನೆರಡು ಸಾವಿರ ರೂ. ಸಿಗುವುದರಿಂದ ಅನುಕೂಲವಾಗಲಿದೆ. ಅದೇ ರೀತಿ ವೃದ್ಧರಿಗೆ ಈವರೆಗೆ ನೀಡಲಾಗುತ್ತಿದ್ದ 600 ರೂ.ಗಳನ್ನು ಸಾವಿರ ರೂ.ಗೆ ಹೆಚ್ಚಿಸಿರುವುದು ಕೂಡ ಅನುಕೂಲಕರ ಕ್ರಮವಾಗಿದೆ. ಔಷಧ ಕೊಳ್ಳಲೂ ಪರದಾಡುತ್ತಿದ್ದ ಮಕ್ಕಳಿಂದ ನಿರ್ಲಕ್ಷಿತರಾದ ಹಾಗೂ ಬಡ ಹಿರಿಯರಿಗೆ ಈ ಬಜೆಟ್ ನೆಮ್ಮದಿ ನೀಡಿದೆ. ಉತ್ತರ ಕರ್ನಾಟಕದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ ಮುಂದಾಗಿರುವುದು ಈ ಬಜೆಟ್​ನ ಮತ್ತೊಂದು ದಿಟ್ಟ ಹೆಜ್ಜೆ. ಕೇವಲ ಬೆಂಗಳೂರು, ಮೈಸೂರು ಭಾಗಕ್ಕೆ ಸೀಮಿತವಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೌಲಭ್ಯ ಈಗ ಉತ್ತರ ಕರ್ನಾಟಕಕ್ಕೂ ಸಿಗುವಂತಾಗಿರುವುದು ಖುಷಿ ಕೊಡುವ ಕ್ರಮ. ಆಸ್ಪತ್ರೆಗಳಿಗೆ ಔಷಧ ಸರಬರಾಜು ಬಲವರ್ಧನೆಗೆ ಈ ಬಜೆಟ್​ನಲ್ಲಿ 40 ಕೋಟಿ ರೂ. ಮೀಸಲಿಟ್ಟಿರುವುದು ಉತ್ತಮ ನಿರ್ಧಾರ. 108 ಆಂಬುಲೆನ್ಸ್, 104 ಆರೋಗ್ಯ ಸಹಾಯವಾಣಿ ಬಲವರ್ಧನೆಗೊಳಿಸುವುದರೊಂದಿಗೆ ಮಾನಸಿಕ ರೋಗಿಗಳನ್ನೂ ಈ ವ್ಯಾಪ್ತಿಗೆ ತಂದಿರುವುದರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರಾಥಮಿಕ ಹಾಗೂ ತಾಲೂಕು ಆಸ್ಪತ್ರೆಗಳನ್ನು ಬಲವರ್ಧನೆಗೊಳಿಸಬೇಕಾದ ಅಗತ್ಯ ಹೆಚ್ಚಿತ್ತು.

ಕೆಆರ್​ಎಸ್ ಅಭಿವೃದ್ಧಿ ಡಿಸ್ನಿಲ್ಯಾಂಡ್ ಮಾದರಿ

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೃಷ್ಣರಾಜ ಸಾಗರ ಜಲಾಶಯ ಅಭಿವೃದ್ಧಿಪಡಿಸಲು ಸರ್ಕಾರ ತೀರ್ವನಿಸಿದೆ. ಈ ಯೋಜನೆಗೆ ಬಂಡವಾಳ ಹೂಡಲು ವಿಶ್ವಮಟ್ಟದ ಉದ್ಯಮಿಗಳು ಉತ್ಸುಕರಾಗಿದ್ದು, ವಿವರವಾದ ಕಾರ್ಯಯೋಜನೆ ಸಿದ್ಧಪಡಿಸಲು 5 ಕೋಟಿ ರೂ. ಒದಗಿಸಲಾಗಿದೆ. ಕೆಆರ್​ಎಸ್ ಬೃಂದಾವನ 80ರ ದಶಕದಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಅದು ಕಳೆಗುಂದಿದ್ದು, ವೈಭವ ಮರುಕಳಿಸಲು ಸರ್ಕಾರ ನಿರ್ಧರಿಸಿದೆ. ಮೇಕೆದಾಟು ಬಗ್ಗೆ ಪೂರ್ವ ಕಾರ್ಯಸಾಧ್ಯತಾ ವರದಿ ಪ್ರಸ್ತಾವನೆಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದ್ದು, ಇದನ್ನು ಚುರುಕುಗೊಳಿಸಿ ತೀರುವಳಿ ಪಡೆದು ಯೋಜನೆ ಕಾರ್ಯಗತಗೊಳಿಸಲು ಕ್ರಮವಹಿಸುವುದಾಗಿ ಹೇಳಲಾಗಿದೆ. ಮಹದಾಯಿ ನದಿ ವಿವಾದದ ನ್ಯಾಯಾಧಿಕರಣ ತೀರ್ಪು 2018ರ ಆಗಸ್ಟ್​ನಲ್ಲಿ ಬರುವ ನಿರೀಕ್ಷೆ ಇದ್ದು, ರಾಜ್ಯಕ್ಕೆ ತನ್ನ ಪಾಲಿನ ನೀರಿನ ಹಂಚಿಕೆಯನ್ನು ಪಡೆಯುವ ವಿಶ್ವಾಸವಿದೆ. ನ್ಯಾಯಾಧಿಕರಣ ತೀರ್ಪಿನನ್ವಯ ಕಾಮಗಾರಿ ಕೈಗೊಳ್ಳುವುದಾಗಿ ಬಜೆಟ್ ಭಾಷಣದಲ್ಲಿ ತಿಳಿಸಲಾಗಿದೆ.

ಕೃಷ್ಣಾ ಮೇಲ್ದಂಡೆ 3ನೇ ಹಂತ ಪುನರ್ವಸತಿ

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಪುನರ್ವಸತಿ ಮತು ್ತ ಪುನರ್ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೆತಿ ್ತೊಳ್ಳಲಾಗುವುದು, ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಣೆ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಉದ್ದೇಶಿಸಿದೆ. ಪ್ರಸ್ತುತ ಪ್ರಗತಿಯಲ್ಲಿರುವ ಎಲ್ಲ ನೀರಾವರಿ ಯೋಜನೆಗಳನ್ನು ಮುಂದಿನ 5 ವರ್ಷಗಳಲ್ಲಿ ಪೂರ್ಣಗೊಳಿಸಲು ತೀರ್ವನಿಸಲಾಗಿದೆ. 5 ವರ್ಷಗಳಲ್ಲಿ 50 ಕೋಟಿ ರೂ. ಕೊಟ್ಟು ನುಡಿದಂತೆ ನಡೆದಿದ್ದೇವೆ ಎಂದು ಬೆನ್ನುತಟ್ಟಿಕೊಂಡ ಸಿದ್ದರಾಮಯ್ಯ ಸರ್ಕಾರ 2018-19ನೇ ಸಾಲಿನ ಬಜೆಟ್​ನಲ್ಲಿ ಜಲಸಂಪನ್ಮೂಲ ಇಲಾಖೆಗೆ 15,998 ಕೋಟಿ ರೂ. ಒದಗಿಸಿತ್ತು.

ಗ್ರಾಮೀಣರಿಗೆ ಶುದ್ಧ ಜಲಧಾರೆ

ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕುಡಿಯುವ ನೀರೊದಗಿಸಲು ‘ಜಲಧಾರೆ’ ಯೋಜನೆ ಘೋಷಿಸಿರುವ ಸಿಎಂ ಕುಮಾರಸ್ವಾಮಿ, 53 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮವನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದರು. ಗ್ರಾಮೀಣ ಪ್ರದೇಶಗಳಗೆ 85 ಎಲ್​ಪಿಸಿಡಿಯಂತೆ ಕುಡಿಯುವ ನೀರನ್ನು ನದಿ ಅಥವಾ ಜಲಾಶಯಗಳಿಂದ ಶುದ್ಧೀಕರಿಸಿ ಒದಗಿಸಲಾಗುವುದು. ಮುಂದಿನ 5 ವರ್ಷದಲ್ಲಿ ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜಿಸಿದ್ದು, ಶೀಘ್ರವೇ ಡಿಪಿಆರ್ ತಯಾರಿಸಲಾಗುವುದು ಎಂದರು. ಶ್ರೀರಂಗಪಟ್ಟಣ ತಾಲೂಕು ಮಹದೇವಪುರ, ಚಿಕ್ಕ ಅಂಕನಹಳ್ಳಿ, ಕೆ.ಶೆಟ್ಟಿಹಳ್ಳಿ ಮತ್ತು ಸುತ್ತಮುತ್ತಲ 16 ಗ್ರಾಮಗಳಿಗೆ 24 ಕೋಟಿ ರೂ., ಗಾಮನಹಳ್ಳಿ ಮತ್ತು ಇತರೆ 13 ಗ್ರಾಮಗಳೀಗೆ 18.90 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. ಒಟ್ಟಾರೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ 14,449 ಕೋಟಿ ಒದಗಿಸಲಾಗಿದೆ.

ಚಿಕ್ಕೋಡಿಗೆ ಕೃಷ್ಣಾದಿಂದ ನೀರಾವರಿ ಸೌಲಭ್ಯ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಹಿರೇಕೊಡಿ, ನಾಗರಾಳ, ನೇಜ ಇತ್ಯಾದಿ ಗ್ರಾಮಗಳ 10,225 ಹೆಕ್ಟೇರ್, 59 ಪ್ರದೇಶದ ಜಮೀನು ಗಳ ನೀರಾವರಿ ಸೌಲಭ್ಯಕ್ಕಾಗಿ ಕೃಷ್ಣಾ ನದಿಯಿಂದ 100 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಕೈಗೊಳ್ಳಲು ಸರ್ಕಾರ ಉದ್ದೇಶಿಸಿದೆ. ಫೆಬ್ರವರಿಯಲ್ಲಿ ಮಂಡಿಸಲಾದ ಬಜೆಟ್​ನಲ್ಲಿ ಸಣ್ಣ ನೀರಾವರಿ ಇಲಾಖೆಗೆ 2,114 ಕೋಟಿ ರೂ. ಒದಗಿಸಲಾಗಿದೆ. ಅನಿರ್ಬಂಧಿತ ಅಂತರ್ಜಲ ಬಳಕೆಯಿಂದ 43 ತಾಲೂಕುಗಳನ್ನು ಅತಿಬಳಕೆ ತಾಲೂಕುಗಳೆಂದು ವರ್ಗೀಕರಿಸಲಾಗಿದ್ದು, ಇಲ್ಲಿ ಅಂತರ್ಜಲ ಅಭಿವೃದ್ಧಿಪಡಿಸಲು ಚೆಕ್​ಡ್ಯಾಂ, ಬ್ಯಾರೇಜ್ ಬಾಂದಾರ ರಚನೆಗಳಿಗೆ 50 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು.

ರೇವಣ್ಣ ಫುಲ್ ಖುಷ್ ಹುವಾ!

ಸಹೋದರ ಎಚ್.ಡಿ.ಕುಮಾರಸ್ವಾಮಿ ಚೊಚ್ಚಲ ಬಜೆಟ್ ಮಂಡನೆಗೆ ಸಚಿವ ಎಚ್.ಡಿ.ರೇವಣ್ಣ ಫುಲ್ ಖುಷಿಯಾಗಿದ್ದಾರೆ. ಬಜೆಟ್ ಮಂಡನೆ ಮುಗಿಯುತ್ತಿದ್ದಂತೆ ನಗು ನಗುತ್ತಲೇ ಆಚೆ ಬಂದ ರೇವಣ್ಣ ಅವರಲ್ಲಿ ಹೇಳಿದ್ದೆಲ್ಲವೂ ಚಾಚೂ ತಪ್ಪದೆ ಸೇರಿದೆ ಎನ್ನುವ ತೃಪ್ತಿ ಮನೆ ಮಾಡಿತ್ತು. ಮಾತಿಗೆ ಎದುರಾದವರಿಗೆ ‘ನೋಡ್ರಿ, ಹೇಳಿದ್ದಂಗೆ ಸಾಲ ಮನ್ನಾ ಮಾಡಿದ್ದೀವಲ್ರಿ’ ಅಂದ್ರು. ಹಾಸನಕ್ಕೆ ಬೇಕಾದ್ದೆಲ್ಲವೂ ಬಜೆಟ್​ನಲ್ಲಿ ಬಂದಿವೆ ಎಂದು ಕಿವಿಯಲ್ಲಿ ಗುನುಗಿ ಮುಗುಳ್ನಕ್ಕರು. ಅಲ್ಲಿದ್ದ ದಳಪತಿಗಳು ಹೌದೌದು ಎಂದು ತಲೆದೂಗಿದರು.

ವಂಡರ್​ಫುಲ್ ಬಜೆಟ್

ಸಿಎಂ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಅನ್ನು ವಂಡರ್​ಫುಲ್ ಎಂದು ಬಣ್ಣಿಸಿದ ಸಚಿವೆ ಜಯಮಾಲಾ, ಸಾಲಮನ್ನಾ ಜತೆಗೆ ಎಲ್ಲ ವರ್ಗದವರಿಗೂ ಸಮತೋಲನ ನ್ಯಾಯ ಒದಗಿಸಿದೆ ಎಂದರು.

35 ವಿದ್ಯುತ್ ಉಪಕೇಂದ್ರ

ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಜಾಲ ಬಲವರ್ಧನೆಗೊಳಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮೂಲಕ 35 ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಕುಮಾರಸ್ವಾಮಿ ತೀರ್ವನಿಸಿದ್ದು, 75 ಉಪಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವುದಾಗಿ ಘೋಷಿಸಿದರು. ಫೆಬ್ರವರಿಯಲ್ಲಿ ಮಂಡನೆಯಾಗಿದ್ದ ಸಿದ್ದರಾಮಯ್ಯ ಬಜೆಟ್​ನಲ್ಲಿ ವಿದ್ಯುತ್ ಉಪಕೇಂದ್ರ ಅಭಿವೃದ್ಧಿ ಘೋಷಣೆ ಮರುಜೀವ ಪಡೆದಂತಾಗಿದೆ. ಯಾದಗಿರಿಯ ರಾಮಸಮುದ್ರ, ರಾಯಚೂರಿನ ಯಾಪಲದಿನ್ನಿ, ಗಂಗಾವತಿ ಬಳಿಯ ಯರಡೋನ, ಬಾದಾಮಿಯ ಹೆಬ್ಬಳ್ಳಿ, ಮಂಗಳೂರಿನ ಮೂಲ್ಕಿ ಮಂಡ್ಯದ ತುಂಬೆಕೆರೆ ಸೇರಿ ಇನ್ನಿತರ 35 ಕೇಂದ್ರಗಳನ್ನು ಕಳೆದ ಬಾರಿ ಆಯ್ಕೆ ಮಾಡಲಾಗಿತ್ತು.

ಅರಣ್ಯ ಸಂರಕ್ಷಣೆಗೆ ಹಸಿರು ಕರ್ನಾಟಕ

ರಾಜ್ಯದಲ್ಲಿ ಸಾಮಾಜಿಕ ಅರಣ್ಯ ಬೆಳವಣಿಗೆಗೆ ಒತ್ತು ನೀಡುವ ಉದ್ದೇಶದಿಂದ ‘ಹಸಿರು ಕರ್ನಾಟಕ’ ಯೋಜನೆ ಆಂದೋಲನ ಅನುಷ್ಠಾನಕ್ಕೆ ಕುಮಾರಸ್ವಾಮಿ ಸರ್ಕಾರ ಚಿಂತಿಸಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಪರಿಸರ ಸಂಘಟನೆ ಜತೆಗೂಡಿಸಿ ಮನೆಗೊಂದು ಮರ, ಊರಿಗೊಂದು ತೋಪು, ತಾಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು ಎಂಬಂತೆ ಬೆಟ್ಟ-ಗುಡ್ಡ, ಗೋಮಾಳಗಳು ಮತ್ತು ಕೆರೆಗಳ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳಲ್ಲಿ ಮರಗಿಡ ಬೆಳೆಸುವುದು ಹಸಿರು ಕರ್ನಾಟಕ ಧ್ಯೇಯವಾಗಿದೆ. ಬೃಹತ್ ಪ್ರಮಾಣದಲ್ಲಿ ಮಣ್ಣಿನುಂಡೆ ಬಿತ್ತನೆ ಹಾಗೂ ಸಸಿ ನೆಡಲು ಅನುಕೂಲವಾಗುವಂತೆ ಸಂಘ ಸಂಸ್ಥೆಗಳಿಗೆ ನೆರವಾಗಲು 10 ಕೋಟಿ ರೂ. ಒದಗಿಸಿದೆ.

ಮಾಲಿನ್ಯ ತಡೆಗೆ ಪರಿವೇಷ್ಟಕ

ರಾಜ್ಯದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ನಿಧಿ ಅನುದಾನದಡಿ 96 ಕೊಟಿ ರೂ. ವೆಚ್ಚದಲ್ಲಿ 42 ನಿರಂತರ ವಾಯುಗುಣಮಟ್ಟ ಮಾಪನ (ಪರಿವೇಷ್ಟಕ) ಕೇಂದ್ರ ಸ್ಥಾಪಿಸಲು ಸಮ್ಮಿಶ್ರ ಸರ್ಕಾರ ಉದ್ದೇಶಿಸಿದೆೆ.

ಸರ್ಕಾರಿ ಬೆಟ್ಟ ಗುಡ್ಡಗಳಿಗೆ ಬೇಲಿ

750 ಮಿ.ಮೀ.ಗಿಂತ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಅರಣ್ಯ ಸಂರಕ್ಷಣೆ ದೃಷ್ಟಿಯಿಂದ ಬೆಟ್ಟ ಗುಡ್ಡಗಳಿಗೆ ಬೇಲಿ ನಿರ್ವಿುಸಲು 40 ಕೋಟಿ ರೂ. ಒದಗಿಸುವುದಾಗಿ ಕುಮಾರಸ್ವಾಮಿ ಘೋಷಿಸಿದರು. 2018-19ನೇ ಸಾಲಿನಲ್ಲಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗೆ ಒಟ್ಟು 1,949 ಕೊಟಿ ರೂ. ಒದಗಿಸಲಾಗಿತ್ತು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...