ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ

ಶಿಕ್ಷಣ ಕ್ಷೇತ್ರದ ಸುಧಾರಣೆ ಕಡೆಗೆ ಗಮನಹರಿಸಿರುವ ಸಮ್ಮಿಶ್ರ ಸರ್ಕಾರ ಮಧ್ಯಂತರ ಬಜೆಟ್​ನಲ್ಲಿ ಈ ಹಿಂದಿನ ಸರ್ಕಾರದ ಮುಂಗಡಪತ್ರಕ್ಕೆ ಪೂರಕ ಯೋಜನೆಗಳನ್ನು ಘೋಷಿಸಿದೆ. ಇಂದಿನ ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲೂ ಈಗಿರುವ ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವುದಾಗಿ ಘೋಷಿಸಿದೆ. ಆ ಮೂಲಕ ಹೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸುವ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಅದೇ ರೀತಿ, ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮತ್ತು ಅತಿ ಕಡಿಮೆ ವಿದ್ಯಾರ್ಥಿ ದಾಖಲಾತಿ ಇರುವ 28 ಸಾವಿರಕ್ಕೂ ಅಧಿಕ ಶಾಲೆಗಳನ್ನು ಗುರುತಿಸಿದ ಸರ್ಕಾರ ಅವುಗಳನ್ನು ಸ್ಥಳೀಯವಾಗಿ ಇರುವಂತಹ 8,500ಕ್ಕೂ ಹೆಚ್ಚು ಶಾಲೆಗಳೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ.

ನ.1ರಿಂದ ಮುಖ್ಯಮಂತ್ರಿ ಮಾತೃಶ್ರೀ ಯೋಜನೆ

ತಾಯಂದಿರ ಆರೋಗ್ಯ ರಕ್ಷಣೆಗೆ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ಮಾತೃಶ್ರೀ ಯೋಜನೆ’ಯನ್ನು ಹೊಸದಾಗಿ ಪರಿಚಯಿಸಿದೆ. ಪ್ರಸ್ತುತ ರಾಜ್ಯ ಸರ್ಕಾರದ ‘ಮಾತೃಪೂರ್ಣ’ ಹಾಗೂ ಕೇಂದ್ರ ಸರ್ಕಾರದ ‘ಮಾತೃವಂದನಾ’ ಕಾರ್ಯಕ್ರಮಗಳು ಜಾರಿಯಲ್ಲಿದ್ದಾಗ್ಯೂ ಹೊಸ ಯೋಜನೆ ಪ್ರಕಟಿಸಲಾಗಿದೆ.

ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಪ್ರಕಾರ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಹೆರಿಗೆ ಪೂರ್ವದ 3 ತಿಂಗಳು, ಹೆರಿಗೆ ನಂತರದ 3 ತಿಂಗಳ ಕಾಲ ಮಾಸಿಕ ಒಂದು ಸಾವಿರ ರೂಪಾಯಿಯನ್ನು ಅವರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಯಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಹಂತಹಂತವಾಗಿ ಈ ನೆರವನ್ನು ಏರಿಕೆ ಮಾಡಲಾಗುವುದು. ಯೋಜನೆಯು ತಾಯಿಯ ಮೊದಲ ಎರಡು ಮಕ್ಕಳಿಗೆ ಮಾತ್ರ ಅನ್ವಯ. ಇದಕ್ಕಾಗಿ ಸರ್ಕಾರ ಮೀಸಲಿಟ್ಟ ಹಣ  350 ಕೋಟಿ ಬರುವ ನವೆಂಬರ್ 1ರಿಂದ ಯೋಜನೆ ಅನುಷ್ಠಾನಗೊಳ್ಳಲಿದೆ.

  • ಆಧಾರ ಸ್ವಯಂ ಉದ್ಯೋಗ ಯೋಜನೆಯ ಘಟಕ ವೆಚ್ಚವನ್ನು ಈಗಿರುವ  35,000ದಿಂದ  1 ಲಕ್ಷ ಕ್ಕೆ ಹೆಚ್ಚಳ.ಇದರಲ್ಲಿ ಶೇ.50 ಬ್ಯಾಂಕ್ ಸಾಲ, ಶೇ.50 ಸಹಾಯಧನ.
  • 2016ರ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯು ಎಲ್ಲ 21 ವಿಧದ ವಿಕಲಚೇತನ ವ್ಯಕ್ತಿಗಳ ಸಮೀಕ್ಷೆ ಕೈಗೊಳ್ಳಲು  5 ಕೋಟಿ ಅನುದಾನ.
  • ರಾಜ್ಯದ ಎಲ್ಲ ಉಪವಿಭಾಗಗಳಲ್ಲಿ ತಲಾ ಒಂದರಂತೆ ವೃದ್ಧಾಶ್ರಮ ಆರಂಭ
  • ರಾಷ್ಟ್ರೀಯ ಅಂಗವಿಕಲರ ಹಣಕಾಸು ಅಭಿವೃದ್ಧಿ ನಿಗಮದಿಂದ ವಿಕಲಚೇತನರಿಗೆ ನೀಡಿರುವ ಸಾಲ, 2014ರಿಂದ ಸುಸ್ತಿಯಾಗಿರುವ ಬಡ್ಡಿ ಮೊತ್ತ ಮನ್ನಾ ಮಾಡಲು 4 ಕೋಟಿ ಅನುದಾನ.
  • ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಬಗ್ಗೆ ಡಾ. ಜಯಮಾಲಾ ಅಧ್ಯಕ್ಷತೆಯ ಸಮಿತಿ ಸಲ್ಲಿಸಿದ ಪ್ರಮುಖ ಶಿಫಾರಸುಗಳನ್ನು ಆಧರಿಸಿ ಲೈಂಗಿಕ ಕಾರ್ಯಕರ್ತೆಯರ ಜೀವನಕ್ಕೆ ಭದ್ರತೆ – ಇದಕ್ಕಾಗಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ವಸತಿ, ಕೌಶಲಾಭಿವೃದ್ಧಿ, ಸ್ವಯಂ-ಉದ್ಯೋಗ, ಅವರ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

4,236 ಹೊಸ ಬಸ್ ಖರೀದಿ

ಬೆಂಗಳೂರಿಗೆ ಸಮಗ್ರ ಭೂಸಾರಿಗೆ ಪ್ರಾಧಿಕಾರ ಸ್ಥಾಪನೆ – ಮುಖ್ಯಮಂತ್ರಿ ಅಧ್ಯಕ್ಷತೆಯ ಪ್ರಾಧಿಕಾರ ್ಝ ಬೆಂಗಳೂರು ಮಹಾನಗರ ಸಾರ್ವಜನಿಕ ಸಾರಿಗೆ ಬಲವೃದ್ಧಿಗಾಗಿ ಬಿಎಂಟಿಸಿಗೆ  100 ಕೋಟಿ ರೂ.  ಬೆಂಗಳೂರು ಮಹಾನಗರದಲ್ಲಿ 100 ವಿದ್ಯುತ್ ವಾಹನ ಚಾರ್ಜಿಂಗ್ ಘಟಕ ಸ್ಥಾಪನೆಗೆ 4 ಕೋಟಿ ರೂ. . ್ಝ ಸಾರ್ವಜನಿಕ ಬಳಕೆಗೆ 4,236 ಹೊಸ ಬಸ್ ಖರೀದಿಗೆ ಸಾರಿಗೆ ಸಂಸ್ಥೆಗಳ ಪ್ರಸ್ತಾವನೆ ಇದ್ದು, ಬಿಎಂಟಿಸಿಗೆ 80 ಇಲೆಕ್ಟ್ರಿಕ್ ಬಸ್.

ರಾಮನಗರದಲ್ಲಿ ಚಲನಚಿತ್ರ ವಿವಿ

ಡಾ. ರಾಜ್​ಕುಮಾರ್ ಸ್ಮರಣಾರ್ಥ ಕಂಠೀರವ ಸ್ಟುಡಿಯೋ ಆವರಣದಲ್ಲಿ ಸುಸಜ್ಜಿತ ಯೋಗ ಕೇಂದ್ರ್ಠ ರಾಮನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆ ಘೋಷಣೆ- 30 ಕೋಟಿ ಆರಂಭಿಕ ಬಂಡವಾಳ ನೀಡಲಿದೆ ಸರ್ಕಾರ. ್ಠ ರಾಮನಗರ ಫಿಲಂ ಸಿಟಿಯಲ್ಲಿ ಉದ್ಯಮಗಳಿಗೆ ಪ್ರೋತ್ಸಾಹ ನೀಡಲು 40 ಕೋಟಿ ರೂ. ಬಂಡವಾಳ ಹೂಡಿಕೆ. ್ಠ ವಿದೇಶದಿಂದ ಚಿತ್ರ ನಿರ್ವಣಕ್ಕಾಗಿ ಬರುವವರಿಗೆ ಮೂಲ ಸೌಲಭ್ಯಗಳ ನಿರ್ವಣಕ್ಕೆ ಹೆಚ್ಚುವರಿ  20 ಕೋಟಿ

ನ್ಯಾಯಾಂಗ ವಸ್ತು ಸಂಗ್ರಹಾಲಯ

ರಾಜ್ಯದ ನ್ಯಾಯಾಂಗ ಪರಂಪರೆಯನ್ನು ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಮೈಸೂರು ಹಾಗೂ ಬ್ರಿಟಿಷ್ ಸಾಮ್ರಾಜ್ಯಗಳ ನಡುವೆ ನಡೆದಿರುವ ಒಪ್ಪಂದ ಪತ್ರಗಳು, ರಾಜ್ಯ ನ್ಯಾಯಾಂಗದ ಇತಿಹಾಸಕ್ಕೆ ಸಂಬಂಧಿಸಿದ ಅಮೂಲ್ಯ ದಾಖಲೆಗಳ ವಸ್ತುಸಂಗ್ರಹಾಲಯ ಸ್ಥಾಪನೆಗೆ -1 ಕೋಟಿ ರೂ.

ನ್ಯಾಯಾಂಗ ಕ್ಷೇತ್ರದ ಚಟುವಟಿಕೆಗೆ ಉತ್ತೇಜನ ನೀಡುವ ಸಲುವಾಗಿ ಬೆಂಗಳೂರು ವಕೀಲರ ಸಂಘಕ್ಕೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಕಾಲನಿ, ತಾಂಡಾ ಅಭಿವೃದ್ಧಿ ಯೋಜನೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಜೆಟ್​ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಭರಪೂರ ಕೊಡುಗೆ ನೀಡಿದ್ದು, ಗಂಗಾ ಕಲ್ಯಾಣ ಯೋಜನೆ, ಎಸ್ಸಿ-ಎಸ್ಟಿ ಸಮುದಾಯ ಅಭಿವೃದ್ಧಿ, ನಿರುದ್ಯೋಗ ನಿವಾರಣೆ ಮತ್ತಿತರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ವಿಶೇಷವಾಗಿ, ಕಾಲೋನಿ ಮತ್ತು ತಾಂಡಾಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಗತಿ ಕಾಲನಿ ಯೋಜನೆ ರೂಪಿಸಲಾಗಿದೆ.

ಗಂಗಾ ಕಲ್ಯಾಣ ಯೋಜನೆ ಪ್ರಕಾರ ಎಸ್ಸಿ,ಎಸ್ಟಿ ಫಲಾನುಭವಿಗಳ ಸಹಾಯಧನ 2.50ಲಕ್ಷದಿಂದ  3ಲಕ್ಷ ಹಾಗೂ  3.50ಲಕ್ಷದಿಂದ 4 ಲಕ್ಷ ರೂ. ಕ್ಕೆ ಏರಿಕೆ ್ಝಾಮಾಜಿಕ ಉದ್ಯಮಶೀಲತಾ ಯೋಜನೆಯಂತೆ ಎಸ್ಸಿ, ಎಸ್ಟಿ ನಿರುದ್ಯೋಗಿ 5000 ಯುವಕ/ಯುವತಿಯರಿಗೆ  10 ಲಕ್ಷ ನೆರವು. ್ಝ ನಿರುದ್ಯೋಗಿಗಳಿಗೆ ಉದ್ಯೋಗಾಧಾರಿತ ತಾಂತ್ರಿಕ ತರಬೇತಿಗೆ 15 ಕೋಟಿ ್ಝ ಕಲಬುರಗಿ ನಗರದಲ್ಲಿ ಪದವೀಧರರಿಗೆ ಯುಪಿಎಸ್​ಸಿ,ಕೆಪಿಎಸ್​ಸಿ, ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ನೆರವು. ್ಝ ಪ್ರಗತಿ ಕಾಲನಿ ಯೋಜನೆ ರೂಪಿಸಿ ಹೆಚ್ಚಿನ ಸಂಖ್ಯೆಗಳಲ್ಲಿ ವಾಸಿಸುತ್ತಿರುವ ಕಾಲನಿ, ತಾಂಡಗಳ ಸಮಗ್ರ ಅಭಿವೃದ್ಧಿಗೆ ತಲಾ1 ಕೋಟಿಯಿಂದ 5 ಕೋಟಿವರೆಗೆ ಅನುದಾನ. ್ಝ್ರತಿಭಾನ್ವಿತ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಪ್ರತಿಷ್ಠಿತ ಕ್ರೀಡಾ ತರಬೇತಿ ಸಂಸ್ಥೆಗಳಿಗೆ  2 ಕೋಟಿ ಅನುದಾನ ್ಝಯಾ ಜಿಲ್ಲೆಗಳಲ್ಲಿ ಎಸ್ಸಿ ಮಾದರಿ, ನವಗ್ರಾಮಗಳ ನಿರ್ವಣ. ಆದಿವಾಸಿ ಸಮುದಾಯಗಳಿಗೆ ಮೊದಲ ಆದ್ಯತೆ. ್ಝ ಟ್ಯಾಕ್ಸಿ, ಹೋಂ ಸ್ಟೇ, ಇತರೆ ಸ್ವಯಂ ಉದ್ಯೋಗಕ್ಕೆ ನಿರುದ್ಯೋಗಿಗಳಿಗೆ ತರಬೇತಿ ್ಝ ಭೂ ಒಡೆತನ ಯೋಜನೆ ಪಡೆದ ರೈತ ಮಹಿಳೆಯರ ಜಮೀನುಗಳಿಗೆ ಕೊಳವೆ ಬಾವಿ, ಕೃಷಿ ಯಂತ್ರೋಪಕರಣ ವಿತರಣೆ. ್ಝರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ  10 ಕೋಟಿ ್ಝಾತ್ಯತೀತವಾಗಿ ದಾಸೋಹ, ಶಿಕ್ಷಣ,ಸಾಮಾಜಿಕ ಸೇವೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಧಾರ್ವಿುಕ ಪೀಠಗಳು ಹಾಗೂ ಸಂಘ ಸೇವೆ ಸಂಸ್ಥೆಗಳಿಗೆ  25 ಕೋಟಿ ಅನುದಾನ.

ಬ್ರಾಹ್ಮಣರ ಅಭಿವೃದ್ಧಿ ಮಂಡಳಿ

ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿ ದೃಷ್ಟಿಯಿಂದ ‘ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ’ ಸ್ಥಾಪನೆಗೆ ಸರ್ಕಾರ ನಿರ್ಧರಿಸಿ  25 ಕೋಟಿ ಮೀಸಲಿರಿಸಿದೆ. ಹಲವು ವರ್ಷಗಳಿಂದ ಈ ಸಮುದಾಯಕ್ಕೆ ಯೋಜನೆ ರೂಪಿಸಬೇಕೆಂಬ ಬೇಡಿಕೆಯಿತ್ತು.

ಶಂಕರ ಜಯಂತಿ ಆಚರಣೆ

ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲು ಹೊಸ ಸರ್ಕಾರ ನಿರ್ಧರಿಸಿದೆ. ಧಾರ್ವಿುಕ ಪರಂಪರೆಯ ಮೇರು ವ್ಯಕ್ತಿ ಆಗಿರುವ ಶಂಕರಾಚಾರ್ಯರ ಜಯಂತಿ ಯನ್ನು ರಾಜ್ಯಾದ್ಯಂತ ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಆಚರಿಸಲಾಗುವುದು.

ಆಸ್ತಿಗಳಿಗೆ ಜಿಐಎಸ್ ಮ್ಯಾಪಿಂಗ್

ನಾಗರಿಕರಿಗೆ ಉತ್ತಮ ಸೇವೆ ನೀಡಲು ಉಪಗ್ರಹ ಇಮೇಜ್ ಬಳಸಿ ನಗರದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ಆಸ್ತಿಗಳನ್ನು ಜಿಐಎಸ್ ಆಧಾರಿತ ಮ್ಯಾಪಿಂಗ್ (ಎಲ್ಲ ರೀತಿಯ ಭೌಗೋಳಿಕ ಮಾಹಿತಿಗಳನ್ನು ಸಂಗ್ರಹಿಸುವ ವ್ಯವಸ್ಥೆ ) ಮಾಡುವ ಉದ್ದೇಶ ಸರ್ಕಾರಕ್ಕಿದೆ.

ಇದರೊಂದಿಗೆ ರಾಜ್ಯದ 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಜಾಲದ ಮ್ಯಾಪಿಂಗ್ ಕೂಡ ಸರ್ಕಾರ ಮಾಡಲಿದೆ.

ಬಹುಮಹಡಿ ವಾಹನ ನಿಲುಗಡೆ: ಬೆಂಗಳೂರು ಹೊರತಾಗಿ ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ವಾಹನ ಸಂಚಾರದ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ವಾಹನ ದಟ್ಟಣೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ತಪ್ಪಿಸಲು 5 ಮಹಾನಗರ ಪಾಲಿಕೆಗಳಲ್ಲಿ ಬಹುಮಹಡಿ ವಾಹನ ನಿಲುಗಡೆ ಸೌಲಭ್ಯ ನಿರ್ವಣಕ್ಕೆ ಸರ್ಕಾರಕ್ಕೆ ನಿರ್ಧರಿಸಿದೆ.

ಹಾಸನ, ಮಂಡ್ಯಕ್ಕೆ ಬಂಪರ್!: ಹಾಸನ ನಗರದ ಚನ್ನಪಟ್ಟಣ ಕೆರೆಯಲ್ಲಿರುವ ವಿಹಾರಧಾಮದ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿ, ಸೇತುವೆ ನಿರ್ವಣ, ದೋಣಿ ವಿಹಾರ, ಕಾರಂಜಿ ನಿರ್ವಣ, ಪುಟಾಣಿ ರೈಲು ಅಳವಡಿಕೆಗೆ 36 ಕೋಟಿ ಮೀಸಲು. ಮತ್ತೊಂದೆಡೆ ಮಂಡ್ಯ ನಗರದ ಸರ್ವತೋಮುಖ ಅಭಿವೃದ್ಧಿಗಾಗಿ 50 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ.

ಮೈಸೂರು ನಗರಕ್ಕೆ ಹೆಚ್ಚಿನ ಕುಡಿಯುವ ನೀರು: ಮೈಸೂರು ನಗರ ಮತ್ತು ಸುತ್ತಲಿನ 92 ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ ಹುಣಸೂರು ತಾಲೂಕಿನ ಹಳೆ ಉಂಡವಾಡಿ ಬಳಿ ಕಾವೇರಿ ನದಿಯಿಂದ ನಗರಕ್ಕೆ ಹೆಚ್ಚುವರಿಯಾಗಿ 300 ಎಂಎಲ್​ಡಿ ( ದಶಲಕ್ಷ ಲೀಟರ್ ಪ್ರತಿ ದಿನ) ನೀರನ್ನು ಸರಬರಾಜು ಮಾಡುವ ಯೋಜನೆಗೆ ಸರ್ಕಾರ 50 ಕೋಟಿ ರೂ. ಮೀಸಲಿರಿಸಿದೆ.


ಉನ್ನತ ಶಿಕ್ಷಣಕ್ಕೆ ಅನುದಾನ ಸಾಲದು

|ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ, ಪ್ರಾಚಾರ್ಯರು, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ, ಬೆಳಗಾವಿ

ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಅನುದಾನ ಕಲ್ಪಿಸಿರುವುದು ಒಳ್ಳೆಯದು. ಆದರೆ ಅದು ಇನ್ನೂ ಹೆಚ್ಚಾಗಬೇಕು. ಸಮಗ್ರ ಕರ್ನಾಟಕದ ಶಿಕ್ಷಣದ ವ್ಯವಸ್ಥೆ ಮತ್ತು ಗುಣಮಟ್ಟ ಸುಧಾರಿಸಲು ಪೂರಕವಾಗಿರಬೇಕು. ಕೃಷಿಕರ ಮಕ್ಕಳು ಶೇ.4ರ ಬಡ್ಡಿದರದಲ್ಲಿ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಶೈಕ್ಷಣಿಕ ಸಾಲ ನೀಡಬೇಕಾಗಿತ್ತು. ಆದರೆ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಶಿಕ್ಷಣವೇ ಸಮಸ್ಯೆಗಳಿಗೆ ಪರಿಹಾರವಾಗಬೇಕು. ಇಂತಹ ಗುಣಮಟ್ಟವನ್ನು ಅನುಷ್ಠಾನಕ್ಕೆ ತರಬೇಕಾಗಿದೆ. 250 ಕೋಟಿ ರೂ. ವಿಶೇಷ ಪ್ಯಾಕೇಜ್ ಹಾಗೂ ಶಿಕ್ಷಣಕ್ಕೆ ನೀಡಿರುವ ಅನುದಾನ ಸದ್ಬಳಕೆಯಾಗಬೇಕು.

ಶಿಕ್ಷಕರಲ್ಲಿ ಕೌಶಲಾಭಿವೃದ್ಧಿ ಬೆಳೆಸುವ ಪ್ರಯತ್ನಗಳು ಆಗಬೇಕು. ಆಂಗ್ಲ ಶಾಲೆ ಆರಂಭಿಸುವುದಕ್ಕಿಂತ ಮಾತೃಭಾಷೆಗೆ ಒತ್ತು ಕೊಟ್ಟು ಅದರೊಂದಿಗೆ ಆಂಗ್ಲ ಜ್ಞಾನವನ್ನು ಬೆಳೆಸುವಂತಾಗಬೇಕು. ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ ನೀಡುವ ಸ್ಪಷ್ಟ ಮಾಹಿತಿ ಇಲ್ಲ. ಶೈಕ್ಷಣಿಕ ಪದ್ಧತಿಗೆ ಡಿಜಟಲೀಕರಣದ ಸ್ಪರ್ಶ ಬೇಕು.

ವಿಶ್ವವಿದ್ಯಾಲಯಗಳು ವೃತ್ತಿ ಪೂರಕ ಶಿಕ್ಷಣ ನೀಡುವಲ್ಲಿ ಹಿಂದೆ ಬೀಳುತ್ತಿವೆ. ಪದವೀಧರರಲ್ಲಿ ಕೌಶಲ ಬೆಳೆಸುವುದು ಒಳ್ಳೆಯದು. ಆದರೆ ವಿಶ್ವವಿದ್ಯಾಲಯಗಳಲ್ಲಿ ಕೌಶಲ ಆಧರಿಸಿದ ಶಿಕ್ಷಣ ನೀಡುವ ಮಾನವ ಸಂಪನ್ಮೂಲದ ಕೊರತೆ ಇದೆ. ಅದಕ್ಕೆ ಅವಶ್ಯವಿರುವ ಕೌಶಲ ಆಧರಿತ ಶಿಕ್ಷಣ ನೀಡುವ ಶಿಕ್ಷಕರನ್ನು ಮೊದಲು ವಿಶ್ವವಿದ್ಯಾಲಯಗಳಲ್ಲಿ ಗುರುತಿಸಿ ಅವರಿಗೆ ತರಬೇತಿ ನೀಡಬೇಕು. ಈ ಕುರಿತು ಸ್ಪಷ್ಟ ಮಾರ್ಗದರ್ಶನ ಅವಶ್ಯ.

ಗ್ರಾಮೀಣ ಆರೋಗ್ಯ ಮತ್ತು ಸುವ್ಯವಸ್ಥೆ ಕಲ್ಪಿಸಲು ಹೆಚ್ಚು ವೈದ್ಯರ ನೇಮಕ ಮತ್ತು ಅದಕ್ಕೆ ಪೂರಕವಾದ ಮೂಲ ಸೌಲಭ್ಯ ಕಲ್ಪಿಸಬೇಕು. ವೈದ್ಯಕೀಯ ಶಿಕ್ಷಣದೊಂದಿಗೆ ಅರೆ ವೈದ್ಯಕೀಯ ಕೋರ್ಸ್​ಗಳಿಗೆ ಆದ್ಯತೆ ನೀಡಬೇಕು. ವೈದ್ಯರು ಮತ್ತು ದಾದಿಯರನ್ನು ಹೊರತುಪಡಿಸಿ ಫಿಜಿಯೋಥೆರಪಿ, ಪ್ರಯೋಗಾಲಯ ಹಾಗೂ ಎಕ್ಸ್-ರೇ ತಂತ್ರಜ್ಞರ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಕೊಳ್ಳಬೇಕು.

ಶಿಕ್ಷಣ, ಆರೋಗ್ಯ, ಕೃಷಿ ಮತ್ತು ತಾಂತ್ರಿಕ ಸಂಶೋಧನೆಗೆ ಒತ್ತು ಕೊಟ್ಟು, ಅದರ ಪ್ರತಿಫಲ ನೇರವಾಗಿ ಜನರಿಗೆ ತಲುಪಲು ಅನುಕೂಲ ಮಾಡಿಕೊಡಬೇಕು. ಅದಕ್ಕೆ ವಿಶೇಷ ಅನುದಾನ ಕಲ್ಪಿಸಲು ಮುಂಬರುವ ದಿನಗಳಲ್ಲಾದರೂ ಕ್ರಮ ಕೈಕೊಳ್ಳಬೇಕು.

ಹಳೇ ಯೋಜನೆಯೇ ಸೈ ಎಂದ ಎಚ್​ಡಿಕೆ

ನೂತನ ಬಜೆಟ್​ನಲ್ಲಿ ರಾಜ್ಯ ಗೃಹ ಇಲಾಖೆಗೆ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿದ ಸಿಎಂ ಕುಮಾರಸ್ವಾಮಿ, ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಘೋಷಿಸಿದ್ದ ಯೋಜನೆಗಳನ್ನೇ ಮುಂದುವರಿಸಲು ನಿರ್ಧರಿಸಿದ್ದಾರೆ. ್ಝ ವರ್ಷದ ಅವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯ ಶೇ.25ಕ್ಕೆ ಏರಿಕೆ. ್ಝ ಸೈಬರ್ ಅಪರಾಧ ಪ್ರಕರಣಗಳ ಪರಿಣಾಮಕಾರಿ ತನಿಖೆಯಲ್ಲಿ ಸೈಬರ್ ಪೊಲೀಸ್ ಠಾಣೆಗಳಿಗೆ ನೆರವಾಗಲು 5 ಕೋಟಿ ವೆಚ್ಚದಲ್ಲಿ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯ ಸ್ಥಾಪನೆ. ್ಝ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿಗಾಗಿ ಹೊಸ ನೀತಿ ರೂಪಿಸಿ ಜಾರಿಗೆ ತರುವುದು. ್ಝ ಪೊಲೀಸ್ ನೇಮಕಾತಿ ಪ್ರಕ್ರಿಯೆಗಾಗಿ ಶಾಶ್ವತ ಪೊಲೀಸ್ ಸೇವೆಗಳ ನೇಮಕಾತಿ ಮಂಡಳಿ ಸ್ಥಾಪನೆ. ್ಝ 50 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ತರಬೇತಿ ಶಾಲೆಗಳ ಸಾಮರ್ಥ್ಯ ಹಾಗೂ ಸೌಲಭ್ಯಗಳ ಹೆಚ್ಚಳ. ್ಝ ರಾಜ್ಯದ ಎಲ್ಲ ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ನಿರ್ಭಯ ಕೇಂದ್ರಗಳ ಸ್ಥಾಪನೆ. ್ಝ ಜಿಲ್ಲಾ ಕೇಂದ್ರಗಳಲ್ಲಿ ಎಲ್ಲ ಮಹಿಳಾ ಪೊಲೀಸ್

ಠಾಣೆಗಳನ್ನು ಒನ್ ಸ್ಟಾಪ್ ಸರ್ವಿಸ್ ಸೆಂಟರ್​ಗಳಾಗಿ ಉನ್ನತೀಕರಣ.

ಕಾರಾಗೃಹಕ್ಕಿಲ್ಲ ಹೊಸ ಯೋಜನೆ: ಕಾರಾಗೃಹಗಳ ಸುಧಾರಣೆಗೆ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಯೋಜನೆಗಳೇ ಮುಂದುವರಿಯಲಿವೆ. ಪೊಲೀಸ್ ಇಲಾಖೆ ಹಾಗೂ ಕಾರಾಗೃಹಗಳ ಸುಧಾರಣೆಗೆಂದು ಹಿಂದಿನ ಸರ್ಕಾರದಲ್ಲಿ ಘೋಷಿಸಲಾಗಿದ್ದ 6,647 ಕೋಟಿ ರೂಪಾಯಿಯನ್ನು ಗೃಹ ಇಲಾಖೆ ಬಳಸಿಕೊಳ್ಳಬಹುದಾಗಿದೆ. ್ಝ ವಿಚಾರಣಾ ಹಂತದಲ್ಲಿರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಎಲ್ಲ ಜಿಲ್ಲಾ ಕಾರಾಗೃಹಗಳು ಹಾಗೂ ನ್ಯಾಯಾಲಯಗಳಿಗೆ ವಿಡಿಯೋ ಲಿಂಕಿಂಗ್ ವ್ಯವಸ್ಥೆ ಅಳವಡಿಕೆ. ್ಝೈದಿಗಳಿಗೆ ವಿವಿಧ ಕೌಶಲ ತರಬೇತಿ ನೀಡಿ ಅವರ ಪುನರ್ವಸತಿಗೆ ನೆರವಾಗಲು ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪನೆ. ್ಝೆಂಗಳೂರು ಕೇಂದ್ರ ಕಾರಾಗೃಹದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಅತ್ಯುನ್ನತ ಭದ್ರತಾ ವಿಭಾಗ ಸ್ಥಾಪನೆ.ಮಂಗಳೂರಿನಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ವಣ. ್ಝ ರಾಜ್ಯದ ಎಲ್ಲ ತಾಲೂಕುಗಳಲ್ಲಿ 5 ವರ್ಷಗಳೊಳಗೆ ಹೊಸ ಅಗ್ನಿ ಶಾಮಕ ಠಾಣೆಗಳ ಸ್ಥಾಪನೆ.

ಪುಸ್ತಕ ಜಾಥಾ ಅಬಾಧಿತ

ಕನ್ನಡ ಸಂಸ್ಕೃತಿ ಇಲಾಖೆಗೆ ಸಂಬಂಧಿಸಿ ಸಮ್ಮಿಶ್ರ ಸರ್ಕಾರ ಶಂಕರ ಜಯಂತಿ ಆಚರಣೆ ಹೊಸದಾಗಿ ಸೇರಿಸಿದ್ದು ಬಿಟ್ಟರೆ, ಈ ಹಿಂದಿನ ಸರ್ಕಾರ ಘೋಷಿಸಿದ್ದ ಕಾರ್ಯಕ್ರಮಗಳನ್ನು ಮುಂದುವರಿಸಲು ತೀರ್ವನಿಸಿದೆ. ಇದರಂತೆ ಕಳೆದ ಬಜೆಟ್​ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದ ಕೆಲವು ಕಾರ್ಯಕ್ರಮಗಳು ಇಂತಿವೆ. ್ಝ ಮಹಾಕವಿ ಕುವೆಂಪು ಮೈಸೂರು ನಿವಾಸ ‘ಉದಯರವಿ’ ರಾಷ್ಟ್ರಕವಿ ಸ್ಮಾರಕವಾಗಿ ಅಭಿವೃದ್ಧಿ. ್ಝ ಪುಸ್ತಕ ಸಂಸ್ಕೃತಿ ಬೆಳೆಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಯೋಗದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ‘ಪುಸ್ತಕ ಜಾಥಾ’ಕಾರ್ಯಕ್ರಮ ಆಯೋಜನೆ. ್ಝ ವಿವಿಧ ಅಕಾಡೆಮಿಗಳಿಗೆ ನೀಡುತ್ತಿರುವ ಅನುದಾನ ಹೆಚ್ಚಳ. ್ಝ ಸಮಗ್ರ ದಾಸ ಸಾಹಿತ್ಯದ ಅಧ್ಯಯನಕ್ಕಾಗಿ ನೂತನ ಅಧ್ಯಯನ ಪೀಠ ಸ್ಥಾಪನೆ.